– ಡಿಸಿ ಸಾಹೇಬ್ರ ಮೆಸೇಜ್ ಅಂತ ಹಣ ಹಾಕಿದ್ದ ಅಧಿಕಾರಿ!
ಚಿಕ್ಕಮಗಳೂರು: ಇಲ್ಲಿನ (Chikkamagaluru) ಡಿ.ಸಿ ಭನ್ವರ್ ಸಿಂಗ್ ಮೀನಾ ಹೆಸರು, ಫೋಟೋ ಬಳಸಿ ಆಹಾರ ಇಲಾಖೆ ಅಧಿಕಾರಿಯೊಬ್ಬರಿಗೆ ಸೈಬರ್ ವಂಚಕರು 50,000 ರೂ. ವಂಚಿಸಿದ ಪ್ರಕರಣ ನಡೆದಿದೆ.
ಡಿಸಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ, ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ್ ಅವರಿಗೆ ತುರ್ತು ಹಣ (Money) ಹಾಕುವಂತೆ ವಂಚಕರು ಮೆಸೇಜ್ ಮಾಡಿದ್ದರು. ಇದನ್ನು ನಂಬಿದ್ದ ಅಧಿಕಾರಿ, ವಂಚಕ ಕಳಿಸಿದ್ದ ಅಕೌಂಟ್ ನಂಬರ್‌ಗೆ 50,000 ರೂ. ಹಣ ಹಾಕಿದ್ದರು. ವಂನೆಯಾಗಿರೋದು ತಿಳಿದ ಬಳಿಕ ಸೆನ್ ಠಾಣೆಯಲ್ಲಿ ಅವರು ದೂರು ದೂರು ದಾಖಲಿಸಿದ್ದಾರೆ.
ವಂಚನೆಕರು ಬಳಸಿದ್ದು ಥೈಲ್ಯಾಂಡ್‌ನ ನಕಲಿ ವಾಟ್ಸಪ್ ಬಿಸಿನೆಸ್ ಖಾತೆ ಎಂಬುದು ತಿಳಿದು ಬಂದಿದೆ. ಫೇಕ್ ಪ್ರೊಫೈಲ್ ಸೃಷ್ಟಿಸಿ, ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮೆಸೇಜ್ ಮಾಡಿ ಎಲ್ಲಿದ್ದೀರಿ? ಹೇಗಿದ್ದೀರಿ? ಎಂದು ಸಂದೇಶ ಕಳುಹಿಸಿ ನಂಬಿಕೆ ಗಳಿಸುವ ತಂತ್ರ ಬಳಸಿ ವಂಚಕರು ಈ ಕೃತ್ಯ ಎಸಗಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಬಹುಕೋಟಿ ಸೈಬರ್ ವಂಚನೆ ಕೇಸ್ ಸಿಐಡಿಗೆ ಹಸ್ತಾಂತರ
ಥೈಲ್ಯಾಂಡ್ ನಂಬರ್‌ನಿಂದ ಬರುವ ವಾಟ್ಸಪ್ ಮೆಸೇಜ್, ಕರೆಗಳಿಗೆ ಪ್ರತಿಕ್ರಿಯಿಸದಂತೆ, ಯಾವುದೇ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರ ಅಥವಾ ಹಣಕಾಸಿನ ಮಾಹಿತಿ ಹಂಚಿಕೊಳ್ಳದಂತೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಗ್ಯಾಸ್ ಅಭಾವದ ಲಾಭ ಪಡೆದ ಸೈಬರ್ ವಂಚಕರು – KYC ಅಪ್ಡೇಟ್ ಹೆಸರಲ್ಲಿ ಲಕ್ಷ ಲಕ್ಷ ವಂಚನೆ


