ನವದೆಹಲಿ: ಸೋಮವಾರ ರಾತ್ರಿ ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ (Supriya Sule) ಅವರ ಪುತ್ರಿಯ ದೆಹಲಿ ವಿವಾಹ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) ಮತ್ತು ಇತರ ಹಲವಾರು ಪ್ರಮುಖ ರಾಜಕೀಯ ಗಣ್ಯರು ಭಾಗವಹಿಸಿ, ನವಜೋಡಿಗೆ ಶುಭಹಾರೈಸಿದರು.
ದೆಹಲಿಯ 6 ಜನಪಥ್‌ನಲ್ಲಿ ರೇವತಿ ಸುಳೆ ಮತ್ತು ನಾಗ್ಪುರ ಮೂಲದ ಕೈಗಾರಿಕೋದ್ಯಮಿ ಸಾರಂಗ್ ಲಖಾನಿ ರಿಸೆಪ್ಷನ್ ನೆರವೇರಿತು. ಈ ಜೋಡಿ ಜೂನ್‌ನಲ್ಲಿ ಮುಂಬೈನಲ್ಲಿ ವಿವಾಹವಾಗಿದ್ದರು. ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಶಾಕ್ – ತಮಿಳುನಾಡಿಗೆ ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಬಿಡಿ

ಆರತಕ್ಷತೆಗೆ ಕೇಂದ್ರ ಸಚಿವ ಅಮಿತ್ ಶಾ ದಂಪತಿ ಕೂಡ ಆಗಮಿಸಿದ್ದರು. ದಂಪತಿಯನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೌರ್ಹಾದಯುತವಾಗಿ ಸ್ವಾಗತಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಆಗಮಿಸಿ ನವಜೋಡಿಗೆ ವಿಶ್ ಮಾಡಿದರು.
ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮುಖಾಮುಖಿಯಾಗಿ ಪರಸ್ಪರ ಹಸ್ತಾಲಾಘವ ಮಾಡಿದರು. ಸೋನಿಯಾ ಗಾಂಧಿ ಕೂಡ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಇದನ್ನೂ ಓದಿ: ರಷ್ಯಾ-ಭಾರತ ನಡುವೆ ಹೊಸ ರೈಲು ಮಾರ್ಗದ ಪ್ಲ್ಯಾನ್; ಪಾಕ್, ಅಫ್ಘಾನ್ ಮೂಲಕ ಹಿಂದೂ ಮಹಾಸಾಗರಕ್ಕೆ ಸಂಪರ್ಕ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಚಿರಾಗ್ ಪಾಸ್ವಾನ್, ಗಜೇಂದ್ರ ಸಿಂಗ್ ಶೇಖಾವತ್, ರಾಮದಾಸ್ ಅಠವಾಲೆ ಮತ್ತು ಗಿರಿರಾಜ್ ಸಿಂಗ್, ದೆಹಲಿ ಸಚಿವ ಪ್ರವೇಶ್ ವರ್ಮಾ, ಕಾಂಗ್ರೆಸ್ ಸಂಸದರಾದ ರೇಣುಕಾ ಚೌಧರಿ ಮತ್ತು ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಐಒಎ ಮಾಜಿ ಅಧ್ಯಕ್ಷೆ ಪಿಟಿ ಉಷಾ ಸೇರಿದಂತೆ ಇತರರು ಭಾಗವಹಿಸಿದ್ದರು.

