ವಿವಾಹಿತ ಮಹಿಳೆಯೊಂದಿಗೆ ಸುತ್ತಾಟ -ಅನ್ಯಕೋಮಿನ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು

ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತರು ಅನ್ಯಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೆ (Police) ಒಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಬಳಿ ನಡೆದಿದೆ.
ರಾಜ್ಯದ ಕರಾವಳಿಯಲ್ಲಿ ನೈತಿಕ ಪೊಲೀಸ್‌ಗಿರಿ ಮತ್ತೆ ಮುಂದುವರಿದಿದೆ. ಚಿತ್ರದುರ್ಗ (Chitradurga) ಮೂಲದ ದಾದಾಫೀರ್ ಹಾಗೂ ಅನ್ಯ ಕೋಮಿನ ವಿವಾಹಿತ ಮಹಿಳೆ (Married Woman) ಕನ್ಯಾಡಿ ಪರಿಸರದಲ್ಲಿ ಸುತ್ತಾಡುತ್ತಿದ್ದು, ಲಾಡ್ಜ್‌ನಲ್ಲಿ ರೂಂ ಮಾಡಲು ಯತ್ನಿಸುತ್ತಿದ್ದರು. ಇದನ್ನೂ ಓದಿ: ನನ್ನಿಂದ ಡಿಕೆಶಿ ರಾಜಕಾರಣ ಅಂತ್ಯ ಆಗುತ್ತೆ: ರಮೇಶ್ ಜಾರಕಿಹೊಳಿ ಗುಡುಗು
ಅನುಮಾನಗೊಂಡ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಜೋಡಿಯನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರೂ ಅನ್ಯ ಧರ್ಮದವರೆಂದು ತಿಳಿದು ಬಳಿಕ ಜೋಡಿಯನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಮೋದಿ ಕುರಿತ BBC ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾದ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k