– ಡಿಕೆಶಿ ಆಪ್ತನ ಮನೆಯ ಮೇಲೆ ರೇಡ್ ಮಾಡಿದಾಗ 90 – 110 ಸಿಡಿ ಸಿಕ್ಕಿವೆ
– ನಾನೇನೂ ಯಾವುದಾದರೂ ಹುಡುಗಿ ಕಳಿಸಿ ಕುತಂತ್ರ ಮಾಡಿಲ್ಲ; ಜಾರಕಿಹೊಳಿ
– ನಾನೇನೂ ಯಾವುದಾದರೂ ಹುಡುಗಿ ಕಳಿಸಿ ಕುತಂತ್ರ ಮಾಡಿಲ್ಲ; ಜಾರಕಿಹೊಳಿ
ಬೆಳಗಾವಿ: ನನ್ನಿಂದ ಕಾಂಗ್ರೆಸ್ (Congress) ನಾಯಕ ಡಿ.ಕೆ.ಶಿವಕುಮಾರ್ (DK Shivakumar) ರಾಜಕಾರಣ ಅಂತ್ಯ ಆಗುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಳಾಗಿದ್ದು ರಮೇಶ್ ಜಾರಕಿಹೊಳಿಯಿಂದ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವನ ಹಾಗೇ ನಾನು ಮೋಸ ಮಾಡಿಲ್ಲ, ಷಡ್ಯಂತ್ರ ಮಾಡಿಲ್ಲ. ನಾನು ಚಾಲೆಂಜ್ ಮಾಡಿ ಪಕ್ಷ ಬಿಡುತ್ತೇನೆ ಎಂದು ಹೇಳಿ ರಾಜೀನಾಮೆ ಕೊಟ್ಟಿದ್ದೇನೆ. ನಾನೇನೂ ಯಾವುದಾದರೂ ಹುಡುಗಿ ಕಳಿಸಿ ಕುತಂತ್ರ ಮಾಡಿಲ್ಲ. ಅದನ್ನ ಷಂಡರು ಮಾಡುತ್ತಾರೆ ಹೊರತು ಮನುಷ್ಯರು ಮಾಡಲ್ಲ ಎಂದು ಕಿಡಿಕಾರಿದರು.
ರಮೇಶ್ ಜಾರಕಿಹೊಳಿಯನ್ನೇ ಡಿಕೆಶಿ ಏಕೆ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವಾಗಿದ್ದರೂ ಗಟ್ಟಿ ಮನುಷ್ಯ, ಸ್ಟ್ರಾಂಗ್ ಮನುಷ್ಯನನ್ನೇ ಟಾರ್ಗೆಟ್ ಮಾಡುತ್ತಾರೆ. ಅವನಿಗಿಂತ ತಾಕತ್ ಇದ್ದರೆ ಅವರನ್ನು ದುರ್ಬಲ ಮಾಡಲು ಷಡ್ಯಂತ್ರ ಮಾಡುತ್ತಾನೆ. ನನ್ನಿಂದಲೇ ಡಿ.ಕೆ.ಶಿವಕುಮಾರ್ ರಾಜಕಾರಣ ಅಂತ್ಯ ಆಗುತ್ತದೆ ನೋಡ್ತಾ ಇರಿ ಎಂದು ಭವಿಷ್ಯ ನುಡಿದರು.
90- 110 ಸಿಡಿ ಸಿಕ್ಕಿವೆ: ತಮ್ಮ ವಿರುದ್ಧದ ಸಿಡಿ ಕೇಸ್ ಪ್ರಮುಖ ಆರೋಪಿ ಬಳಿ 90 ರಿಂದ 110 ಸಿಡಿ ಸಿಕ್ಕಿವೆ. ಇಡೀ ರಾಜ್ಯದ ಜನರ ಸಿಡಿ ಸಿಕ್ಕಿವೆ. ಇದು ಸಿಬಿಐ ತನಿಖೆ ಆದರೆ ಎಲ್ಲವೂ ಹೊರಗೆ ಬರುತ್ತದೆ. ಶಿರಾ ಹಾಗೂ ದೇವನಹಳ್ಳಿಯ ಇಬ್ಬರು ಸಿಡಿ ಕೇಸ್ ಪ್ರಮುಖ ಆರೋಪಿಗಳ ಮನೆಯ ಮೇಲೆ ರೇಡ್ ಮಾಡಿದಾಗ ಸಿಡಿ ಸಿಕ್ಕಿವೆ. ದೇವನಹಳ್ಳಿ ಆರೋಪಿ, ಡಿಕೆಶಿ ಆಪ್ತನ ಮನೆ ಮೇಲೆ ರೇಡ್ ಮಾಡಿದಾಗ ಅಧಿಕಾರಿಯ ಸಂಭಾಷಣೆ ಸಿಡಿ ಸಿಕ್ಕಿದೆ. ಅದನ್ನ ಮುಚ್ಚಿಟ್ಟಿದ್ದಾರೆ. ಹೀಗಾಗಿ ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಜನವರಿ 28ಕ್ಕೆ ಅಮಿತ್ ಶಾ ಬರುತ್ತಿದ್ದಾರೆ ಇಲ್ಲಿ ಏನು ಕೇಳಲ್ಲ. ಮುಂದಿನ ವಾರ ದೆಹಲಿಗೆ ತೆರಳಿ ಅಮಿತ್ ಶಾ ಭೇಟಿಯಾಗುತ್ತೇನೆ. ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಸಿಬಿಐಗೆ ತನಿಖೆ ವಹಿಸಲು ಮನವಿ ಮಾಡುತ್ತೇನೆ. ಮಹಾನಾಯಕನಿಗೆ ಬುದ್ಧಿ ಕಲಿಸಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುಧಾಕರ್ ನೇತೃತ್ವದಲ್ಲಿ 3 ಸಾವಿರ ಕೋಟಿ ರೂ. ಅಕ್ರಮ: ಸಿದ್ದರಾಮಯ್ಯ ಚಾರ್ಜ್ ಶೀಟ್
ನಾನು ಬಹಳ ನೋವು ಅನುಭವಿಸಿದ್ದೆ. ಆದರೆ ಈಗ ನಾನು ಹೊರಗೆ ಬಂದಿದ್ದೇನೆ ಜನ ಕೈಹಿಡಿದಿದ್ದಾರೆ. ಆದರೆ ಬೇರೆಯವರಿಗೆ ನೋವು ಆಗಬಾರದು. ಬಹಳಷ್ಟು ಜನ ಬ್ಲ್ಯಾಕ್ಮೇಲ್ ಮಾಡುವವರನ್ನು ಇಡಿ ಮಾಡಿದ್ದಾನೆ. ಅವನೆಲ್ಲ ತೆಗಿಯಬೇಕು. ಹೀಗಾಗಿ ಸಿಬಿಐ ತನಿಖೆಗೆ ಆಗ್ರಹಿಸುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ಮತ್ತೊಂದು ತನಿಖಾಸ್ತ್ರ – ಕುಣಿಗಲ್ ಕುಕ್ಕರ್ ವಶ ಪ್ರಕರಣ ತನಿಖೆ ಮಾಡೋದಾಗಿ ಸಿಎಂ ಘೋಷಣೆ
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k