ಸುಧಾಕರ್ ನೇತೃತ್ವದಲ್ಲಿ 3 ಸಾವಿರ ಕೋಟಿ ರೂ. ಅಕ್ರಮ: ಸಿದ್ದರಾಮಯ್ಯ ಚಾರ್ಜ್ ಶೀಟ್

ಬೆಂಗಳೂರು: ಸಚಿವ ಸುಧಾಕರ್ (Sudhakar) ಅಲಿಬಾಬಾ ಮತ್ತು ಕಳ್ಳರ ಜೊತೆ ಸೇರಿಕೊಂಡಿದ್ದಾನೆ. ಕೋವಿಡ್ (Covid) ಸಂದರ್ಭದಲ್ಲಿ ಸುಧಾಕರ್ ನೇತೃತ್ವದಲ್ಲಿ 3 ಸಾವಿರ ಕೋಟಿ ರೂ. ಅಕ್ರಮ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಚಾರ್ಜ್ ಶೀಟ್ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೆಚ್.ಕೆ.ಪಾಟೀಲ್ (HK Patil) ಅವರ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆರೋಗ್ಯ ಇಲಾಖೆಯಲ್ಲಿ ಕೋವಿಡ್ ವೇಳೆ ಲೋಪ ಆಗಿರುವ ಬಗ್ಗೆ ವರದಿ ಕೊಟ್ಟಿದೆ. ಆದರೆ ಸ್ಪೀಕರ್ ಇನ್ನೂ ನಾನು ಆರ್‌ಎಸ್‌ಎಸ್ ಅಂದ್ಕೊಂಡು ಬಿಟ್ಟಿದ್ದಾರೆ. ಅದಕ್ಕೆ ಹೆಚ್.ಕೆ. ಪಾಟೀಲ್ ಸಮಿತಿ ಕೊಟ್ಟ ವರದಿಯನ್ನು ಸದನದಲ್ಲಿ ಮಂಡನೆ ಮಾಡಿಲ್ಲ, ಇಟ್ಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು.
ಸಿಎಜಿ ವರದಿ ರೀ ಕನ್ಸಿಲೇಶನ್ ಅಂತೇಳಿದೆ. ಖರ್ಚು, ವೆಚ್ಚ ತಾಳೆ ಆಗುತ್ತಿಲ್ಲ, ಅದನ್ನು ರೀ ಕನ್ಸಿಲೇಶನ್ ಮಾಡಿ ಎಂದು ಹೇಳಿದ್ದಾರೆ. ಆದರೆ 35 ಸಾವಿರ ಕೋಟಿ ರೂ. ಅಕ್ರಮ ಎಂದು ಹೇಳಿದ್ದಾರೆ. ಇದು ಸುಳ್ಳು. ಇವರಿಗೆ ಸಿಎಜಿ ವರದಿ ಅರ್ಥ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಎಜಿ ವರದಿ ರೀ ಕನ್ಸಿಲೇಶನ್ ಅಷ್ಟೇ, ಅಕ್ರಮ ಅಲ್ಲ, ಭ್ರಷ್ಟಾಚಾರ ಅಲ್ಲ. ಬಿಡುಗಡೆಯಾದ ಅನುದಾನ, ಖರ್ಚು ಮಾಡಿದ ಹಣ ತಾಳೆ ಆಗುತ್ತಿಲ್ಲ, ರೀ ಕನ್ಸಿಲೇಶನ್ ಮಾಡಿ ಎಂದು ಹೇಳಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 50% ರೀ ಕನ್ಸಿಲೇಶನ್, ತಾಳೆ ಆಗ್ತಿರಲಿಲ್ಲ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ 19% ಮಾತ್ರ ರೀ ಕನ್ಸಿಲೇಶನ್, ತಾಳೆ ಆಗುತ್ತಿರಲಿಲ್ಲ. ಆದರೆ ಆರ್‌ಎಸ್‌ಎಸ್ (RSS) ಅವರು ಸುಮ್ನೆ ಗೂಬೆ ಕೂರಿಸ್ತಾರೆ ಎಂದು ಗುಡುಗಿದರು. ಇದನ್ನೂ ಓದಿ: ಸುಧಾಕರ್‌ನನ್ನು ಸೋಲಿಸುವುದಾಗಿ ಸಿದ್ದರಾಮಯ್ಯ ಶಪಥ – ಹಳೇ ಶಿಷ್ಯನ ವಿರುದ್ಧ ಕೆಂಡಕಾರಿದ ಸಿದ್ದು!
ಇದೇ ವೇಳೆ ಸಿಎಂ ವಿರುದ್ಧವೂ ಕಿಡಿಕಾರಿದ ಅವರು, ಈ ಬಸವರಾಜ ಬೊಮ್ಮಾಯಿ (Basavaraj Bommai) ಆರ್‌ಎಸ್‌ಎಸ್‌ನ ಕೈಗೊಂಬೆ. ಸಿಎಜಿ ವರದಿಯಲ್ಲಿ ರೀ ಕನ್ಸಿಲೇಶನ್ ಅನ್ನು ಭ್ರಷ್ಟಾಚಾರ ಅಂತಾ ಕರೆಯಲ್ಲ. ಇದು ಹಣಕಾಸಿನ ಅಶಿಸ್ತು ಎಂದು ಹೇಳುತ್ತೇನೆ. ಬಿಜೆಪಿಯಲ್ಲಿ ಒಬ್ಬ ಸುಳ್ಳು ಹೇಳುವ ಗಿರಾಕಿ ಇದ್ದಾನೆ, ಅವನು ರವಿಕುಮಾರ್. ಆತ ಬರೆದುಕೊಟ್ಟಿರುವುದನ್ನು ಸುಧಾಕರ್ ಹೇಳಿದ್ದಾನೆ. ಅದನ್ನ ಓದಿದ್ದಾನೋ ಇಲ್ಲವೋ ಗೊತ್ತಿಲ್ಲ. ಹಣ ಹೊಡೆಯುವ ಗಿರಾಕಿ ಅದನ್ನ ಎಲ್ಲಿ ಓದುತ್ತಾನೆ ಅಂತಾ ಸುಧಾಕರ್ ವಿರುದ್ಧವೂ ಕಿಡಿಕಾರಿದರು. ಇದನ್ನೂ ಓದಿ: ಡಿಕೆಗೆ ನನ್ನ ಕಂಡ್ರೆ ಹೆದರಿಕೆ, ನಾನೊಬ್ಬನೇ ಅವನನ್ನು ಎದುರಿಸೋನು: ರಮೇಶ್ ಜಾರಕಿಹೊಳಿ
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k