ಸುಧಾಕರ್‌ನನ್ನು ಸೋಲಿಸುವುದಾಗಿ ಸಿದ್ದರಾಮಯ್ಯ ಶಪಥ – ಹಳೇ ಶಿಷ್ಯನ ವಿರುದ್ಧ ಕೆಂಡಕಾರಿದ ಸಿದ್ದು!

ಬೆಂಗಳೂರು: ಒಂದು ಕಾಲದ ಕುಚುಕು ಶಿಷ್ಯನ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ನಿಗಿ ನಿಗಿ ಕೆಂಡಕಾರಿದ್ದಾರೆ. ಆರೋಗ್ಯ ಸಚಿವ ಸುಧಾಕರ್ (Dr K.Sudhakar) ಸೋಲಿಸುವ ಶಪಥ ಮಾಡಿರುವ ಸಿದ್ದರಾಮಯ್ಯ, ಸುಧಾಕರ್‌ನನ್ನು ಸೋಲಿಸ್ತೀವಿ, ಒಳ್ಳೆ ಅಭ್ಯರ್ಥಿ ಹಾಕ್ತೀವಿ. ನಮ್ಮ ಪಕ್ಷ ತೀರ್ಮಾನ ಮಾಡುತ್ತೆ, ಅವರನ್ನು ಸೋಲಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ (RSS) ಅವರು ಸುಧಾಕರ್ ಹತ್ರ ಮಾತಾಡಿಸ್ತಿದ್ದಾರೆ. ಇವನು ಮೂರ್ಖನಂಗೆ ಬಲಿಯಾಗಿದ್ದಾನೆ. ಇವನು ಮಹಾ ನಾಯಕ ಆಗಿದ್ದೀನಿ ಅಂತಾ ಅಂದ್ಕೊಂಡು ಬಿಟ್ಟಿದ್ದಾನೆ ಅಂತಾ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋಮುವಾದಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮಿಸ್ಟರ್ ಕುಮಾರಸ್ವಾಮಿ ಕಾರಣ – ಸಿದ್ದು
ಇದೇ ವೇಳೆ ಸುಧಾಕರ್‌ಗೆ ಟಿಕೆಟ್ ಕೊಡಿಸಿದ್ದು ನಾನು ಎಂದು ಮತ್ತೆ ಸಿದ್ದರಾಮಯ್ಯ ಗುಡುಗಿದ್ದಾರೆ. ವೀರಪ್ಪ ಮೊಯ್ಲಿ, ಆಂಜನಪ್ಪಗೆ ಟಿಕೆಟ್ ಕೊಡಿ ಎಂದಿದ್ರು. ಸುಧಾಕರ್‌ಗೆ ಟಿಕೆಟ್ ಕೊಡಬೇಡಿ, ಅವನೊಬ್ಬ ಫ್ರಾಡ್ ಅಂತ ಮೊಯ್ಲಿ ಹೇಳಿದ್ರು. ಚುನಾವಣಾ ಸಮಿತಿಯಲ್ಲಿ ಮೊಯ್ಲಿ, ಪರಮೇಶ್ವರ್, ಮಿಸ್ತ್ರಿ ಇದ್ದರು. ನಾನು ಇದ್ದೆ. ಆಗ ಮೊಯ್ಲಿಗೂ ನನಗೂ ಜಗಳ ಆಗಿತ್ತು. ಎಸ್.ಎಂ.ಕೃಷ್ಣ ಟಿಕೆಟ್ ಕೊಡಿಸಿದ್ರು ಅಂತಾನೆ ಸುಧಾಕರ್, ಅವರು ಚುನಾವಣಾ ಕಮಿಟಿಯಲ್ಲೇ ಇರಲಿಲ್ಲ. ನಾನು ಟಿಕೆಟ್ ಕೊಡಿಸಿದ್ದು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರಕ್ಕೆ ವಿರೋಧ – ಟೀಕೆಗೆ ಗುರಿಯಾಗಿದ್ದ ಎ.ಕೆ.ಆ್ಯಂಟನಿ ಪುತ್ರ ಕಾಂಗ್ರೆಸ್‌ಗೆ ರಾಜೀನಾಮೆ
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k