ಕೋಮುವಾದಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮಿಸ್ಟರ್ ಕುಮಾರಸ್ವಾಮಿ ಕಾರಣ – ಸಿದ್ದು

ಬೆಂಗಳೂರು: ಕೋಮುವಾದಿ ಬಿಜೆಪಿ (BJP) ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದಕ್ಕೆ ಮಿಸ್ಟರ್ ಕುಮಾರಸ್ವಾಮಿ (H.D.Kumaraswamy) ಕಾರಣ ಅಂತಾ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತೆ ವಾಗ್ದಾಳಿ ನಡೆಸಿದ್ದಾರೆ.
“ಸಿದ್ದರಾಮಯ್ಯ ಜೆಡಿಎಸ್ (JDS) ಅನ್ನು ಬಿಜೆಪಿ ʼಬಿʼ ಟೀಂ ಅಂತಾ ಹೇಳಿ ಹೇಳಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರಲಿಲ್ಲ. ನಾವೂ ಅಧಿಕಾರಕ್ಕೆ ಬರಲಿಲ್ಲ” ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಬೆಳೆದಿದ್ದರೆ ಅದು ಜೆಡಿಎಸ್‌ನಿಂದ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಂಧನಕ್ಕೆ ಕಾಂಗ್ರೆಸ್‌ನಿಂದ ದೂರು
ಯಡಿಯೂರಪ್ಪ ಜೊತೆಗೆ ಸರ್ಕಾರ ಮಾಡಿದ್ದು ಯಾರು? 20 ತಿಂಗಳು ಸಿಎಂ ಆಗಿದ್ದು ಯಾರು? 20 ತಿಂಗಳು ಯಡಿಯೂರಪ್ಪಗೆ ಸಿಎಂ ಸ್ಥಾನ ಕೊಡದೆ ಮೋಸ ಮಾಡಿದ್ದು ಯಾರು? ಇದೇ ಕುಮಾರಸ್ವಾಮಿ ಅಂತ ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಕುಮಾರಸ್ವಾಮಿ. ಕೋಮುವಾದಿ ಪಕ್ಷ ಬಿಜೆಪಿ ಇವತ್ತು ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ಜೆಡಿಎಸ್ ಹಾಗೂ ಮಿಸ್ಟರ್ ಕುಮಾರಸ್ವಾಮಿ ಕಾರಣ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಆರ್ ಅಶೋಕ್‍ಗೆ ಸಕ್ಕರೆ ನಾಡಿನ ಉಸ್ತುವಾರಿ- ಸಾಮ್ರಾಟ್ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆ
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k