LatestMain PostNationalTech

ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

ನವದೆಹಲಿ: ಈ ತಿಂಗಳ ಆರಂಭದಲ್ಲಷ್ಟೇ ಕಾರ್ಯಾಚರಣೆ ಆರಂಭಿಸಿದ್ದ ದೇಶೀಯ ವಿಮಾನಯಾನ ಸಂಸ್ಥೆ ಆಕಾಶ ಏರ್‌ನ ಡೇಟಾಗೆ ಹ್ಯಾಕರ್‌ಗಳು ಕನ್ನ ಹಾಕಿರುವುದಾಗಿ ವರದಿಯಾಗಿದೆ. ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿರುವುದಕ್ಕೆ ಸಂಸ್ಥೆ ಕ್ಷಮೆ ಕೇಳಿದೆ.

ಸಂಸ್ಥೆಯ ಲಾಗ್‌ಇನ್ ಹಾಗೂ ಸೈನ್ ಅಪ್ ಸೇವೆಗಳಿಗೆ ಸಂಬಂಧಿಸಿದ ದೋಷಗಳು ಉಂಟಾಗಿರುವುದು ತಿಳಿದುಬಂದಿದೆ ಎಂದು ಆಕಾಶ ಏರ್ ಭಾನುವಾರ ತಿಳಿಸಿದೆ. ಇದರ ಪರಿಣಾಮವಾಗಿ ಪ್ರಯಾಣಿಕರ ಹೆಸರು, ಲಿಂಗ, ಇ-ಮೇಲ್ ವಿಳಾಸ ಹಾಗೂ ಫೋನ್ ನಂಬರ್‌ಗಳು ಸೋರಿಕೆಯಾಗಿವೆ. ಈ ವಿವರಗಳನ್ನು ಹೊರತುಪಡಿಸಿ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಗಳು ಅಥವಾ ಪಾವತಿಯ ಮಾಹಿತಿಗಳು ಸೋರಿಕೆಯಾಗಿಲ್ಲ ಎಂದು ಕಂಪನಿ ಖಚಿತಪಡಿಸಿದೆ. ಇದನ್ನೂ ಓದಿ: ಗಾಡಿ ಕದಿಯಲು ಹ್ಯಾಂಡಲ್‍ಗೆ ಒದ್ದು ಲಾಕ್ ಮುರಿಯಲು ಪ್ರಯತ್ನ!

 

ಡೇಟಾ ಸೋರಿಕೆ ಬಗ್ಗೆ ನಮಗೆ ತಿಳಿದು ಬಂದ ತಕ್ಷಣವೇ ನಾವು ಸರಿಯಾದ ಕ್ರಮಗಳನ್ನು ತೆಗೆದುಕೊಂಡು ಅನಧಿಕೃತ ಪ್ರವೇಶವನ್ನು ನಿಲ್ಲಿಸಿದ್ದೇವೆ. ಹೆಚ್ಚಿನ ಭದ್ರತೆಗಳನ್ನು ಸೇರಿಸಿ, ಈಗ ನಾವು ಲಾಗ್ ಇನ್ ಹಾಗೂ ಸೈನ್ ಅಪ್ ಸೇವೆಗಳನ್ನು ಪುನರಾರಂಭಿಸಿದ್ದೇವೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ

ಸುಮಾರು ಒಂದು ದಶಕದ ಬಳಿಕ ಪ್ರಾರಂಭವಾದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಆಕಾಶ ಏರ್ ಆಗಸ್ಟ್ 7 ರಂದು ಉದ್ಘಾಟನೆಗೊಂಡು ಮುಂಬೈನಿಂದ ಅಹಮದಾಬಾದ್‌ಗೆ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿತು. ಈ ತಿಂಗಳ ಆರಂಭದಲ್ಲಿ ನಿಧನರಾದ ಬಿಲಿಯನೇರ್ ಮತ್ತು ಷೇರು ಮಾರುಕಟ್ಟೆ ತಜ್ಞ ರಾಕೇಶ್ ಜುಂಜುನ್‌ವಾಲಾ ಅವರು ಆಕಾಶ ಏರ್‌ನಲ್ಲಿ ಗಣನೀಯ ಹೂಡಿಕೆ ಮಾಡಿದ್ದರು.

Live Tv

Leave a Reply

Your email address will not be published.

Back to top button