Bengaluru CityDistrictsKarnatakaLatestLeading NewsMain Post

ಆ್ಯಸಿಡ್ ದಾಳಿ ಮಾಡಿದವರಿಗೆ ಮರಣ ದಂಡನೆ ನೀಡಿ: ಬಾಲಕಿ ಆಕ್ರೋಶ

ಬೆಂಗಳೂರು: ಆ್ಯಸಿಡ್ ಹಾಗೂ ಅತ್ಯಾಚಾರ ಮಾಡಿದವರಿಗೆ ಮರಣ ದಂಡನೆ ನೀಡಬೇಕು ಎಂದು ನಿಸರ್ಗ ಶಾಲೆಯ ವಿದ್ಯಾರ್ಥಿನಿ ಒತ್ತಾಯಿಸಿದರು.

ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವತಿ ಓದಿದ್ದ ನಿಸರ್ಗ ಶಾಲೆಯ ಶಾಲಾ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಮಾತನಾಡಿದ ಅವರು, ಆ್ಯಸಿಡ್ ದಾಳಿ ಮಾಡಿದವರನ್ನು ಜೈಲಿಗಷ್ಟೇ ಹಾಕಬಾರದು. ಅವರಿಗೆ ಮರಣದಂಡನೆಯನ್ನು ವಿಧಿಸಬೇಕು. ಅಂತವರನ್ನು ಜೈಲಿಗೆ ಹಾಕಿದರೆ ವ್ಯರ್ಥ. ನಂತರ ಅಂತಹವರು ಮತ್ತೆ ಜಾಮೀನಿನ ಮೇಲೆ ಹೊರಗೆ ಬರುತ್ತಾರೆ ಎಂದು ಕಿಡಿಕಾರಿದರು.

ಆರೋಪಿಗಳ ಕುಟುಂಬ ಅವರ ಸ್ನೇಹಿತರೆಲ್ಲರೂ ಇಂತಹದ್ದನ್ನೆಲ್ಲಾ ನೋಡುವುದೇ ಇಲ್ಲವಾ ಎನ್ನುವುದು ತಿಳಿಯುತ್ತಲೇ ಇಲ್ಲ. ಪೊಲೀಸ್ ಇಲಾಖೆ ಅಂತಹವರನ್ನು ಎನ್‍ಕೌಂಟರ್ ಮಾಡಬೇಕು. ಈ ರೀತಿ ಆಗುವುದನ್ನೆಲ್ಲಾ ತಡೆಗಟ್ಟಬೇಕು ಎಂದರೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಡೀ ಸಮಾಜದ ಹೆಣ್ಣುಮಕ್ಕಳ ರಕ್ಷಣೆಯನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವತಿ ಓದಿದ್ದ ಹೆಗ್ಗನಹಳ್ಳಿ ಬಳಿಯ ನಿಸರ್ಗ ಶಾಲೆಯ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. 2013ರಲ್ಲಿ ಇದೇ ಶಾಲೆಯಲ್ಲಿ ಯುವತಿ ಹತ್ತನೇ ತರಗತಿ ಓದಿದ್ದರು. ಇದನ್ನೂ ಓದಿ: ಮುಸ್ಲಿಮರು ಮಾರುವ ಪಾನೀಯಗಳಲ್ಲಿ ದುರ್ಬಲಕಾರಕ ಔಷಧಿಯ ಅಂಶವಿರುತ್ತೆ: ಕಾಂಗ್ರೆಸ್ ಮಾಜಿ ನಾಯಕ

Leave a Reply

Your email address will not be published.

Back to top button