Bengaluru CityDistrictsKarnatakaLatestLeading NewsMain Post

ದಸರಾ ರಜೆ ಮುಗಿಸಿ ಬೆಂಗಳೂರಿನತ್ತ ಜನ – ಬಸ್ ತುಂಬಿ ಟಾಪ್ ಮೇಲೂ ಪ್ರಯಾಣ

ಬೆಂಗಳೂರು: ದಸರಾ (Dasara) ಹಬ್ಬದ ರಜೆಯ ಹಿನ್ನೆಲೆ ಊರಿಗೆ ತೆರಳಿದ್ದ ಜನರು ವಿಜಯದಶಮಿಯಂದು ರಜೆ ಮುಗಿಯುತ್ತಲೇ ಬೆಂಗಳೂರಿನೆಡೆಗೆ (Bengaluru) ಹರಿದು ಬಂದಿದ್ದಾರೆ.

ರಜೆ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಜನರು ವಾಪಸ್ ಆಗುತ್ತಿದ್ದು ನಗರದ ಕೆಲವೆಡೆ ಭಾರೀ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ನೆಲಮಂಗಲ-ಕುಣಿಗಲ್ ಮಾರ್ಗ ಹಾಗೂ ನೆಲಮಂಗಲ-ಬೆಂಗಳೂರು ಮಾರ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಕೆಲವು ಬಸ್‌ಗಳಲ್ಲಿ (Bus) ಪ್ರಯಾಣಿಕರು ಭರ್ತಿಯಾಗಿ ಟಾಪ್ ಮೇಲೂ ಕುಳಿತುಕೊಂಡು ಪ್ರಯಾಣಿಸುತ್ತಿದ್ದಾರೆ. ಇದನ್ನೂ ಓದಿ: ಹಿಂದೆ ಶಂಕುಸ್ಥಾಪನೆ ಮಾತ್ರ ಆಗುತ್ತಿತ್ತು, ನಮ್ಮ ಅವಧಿಯಲ್ಲಿ ಶಂಕುಸ್ಥಾಪನೆಯಾಗಿ ಉದ್ಘಾಟನೆಯಾಗುತ್ತಿದೆ: ಮೋದಿ

ನಗರದ ರಸ್ತೆಗಳಲ್ಲಿ ವಾಹನದಟ್ಟಣೆ ಹೆಚ್ಚಾಗಿರುವ ಹಿನ್ನೆಲೆ ಮಂದಗತಿಯಲ್ಲಿ ವಾಹನಗಳು ಸಂಚರಿಸುತ್ತಿವೆ. ಟ್ರಾಫಿಕ್ ನಿಯಂತ್ರಣಕ್ಕೆ ತರಲು ನೆಲಮಂಗಲ (Nelamangala) ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಚಿರತೆ ಮರಿಗೆ ಬಾಟಲಿಯಲ್ಲಿ ಹಾಲು ಕುಡಿಸಿದ ಯೋಗಿ ಆದಿತ್ಯನಾಥ್

Live Tv

Leave a Reply

Your email address will not be published. Required fields are marked *

Back to top button