ಭಾರೀ ಮಳೆ ನಂತರ ಬೆಣ್ಣಿಹಳ್ಳದಲ್ಲಿ ತೇಲಿ ಬರುತ್ತಿವೆ ಶವಗಳು

Public TV
1 Min Read
BENNEHALLA 3

ಧಾರವಾಡ: ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯ ನಂತರ ಇಲ್ಲಿನ ಬೆಣ್ಣಿಹಳ್ಳದಲ್ಲಿ ಶವಗಳು ತೇಲಿಬರುತ್ತಿವೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನವಲಗುಂದ ತಾಲೂಕಿನ ಬೆಣ್ಣಿಹಳ್ಳ ಹಾಗೂ ತುಪ್ರಿಹಳ್ಳಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಕುಂದಗೋಳ ಹಾಗೂ ಹುಬ್ಬಳ್ಳಿ ತಾಲೂಕಿನಿಂದ ನೀರು ಹರಿದು ಬೆಣ್ಣಿಹಳ್ಳಕ್ಕೆ ಬರುತ್ತದೆ. ಮೂರು ದಿನಗಳ ಹಿಂದೆಯಷ್ಟೇ ಗದಗ ಜಿಲ್ಲೆಯ ಯಾವಗಲ್ ಬಳಿ ಎರಡು ಶವಗಳು ತೇಲಿ ಬಂದಿದ್ದವು. ಪೊಲೀಸರು ಒಂದು ಶವವನ್ನ ಹೊರ ತೆಗೆದಿದ್ದರು. ಆದರೆ ಇನ್ನೊಂದು ಶವ ಹೊಳೆ ಆಲೂರು ಬಳಿ ಕಂಡಿತ್ತು. ನಂತರ ಪೊಲೀಸರು ಹುಡುಕಾಟ ನಡೆಸಿದರೂ ಮೃತದೇಹ ಸಿಕ್ಕಿರಲಿಲ್ಲ.

ಮೂರು ದಿನಗಳ ಹಿಂದೆ ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಮಹಿಳೆ ಹೊಲದಿಂದ ಬರುವ ವೇಳೆ ಹಳ್ಳಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಕಳೆದ ರಾತ್ರಿ ಆ ಮಹಿಳೆಯ ಶವ ಬೆಣ್ಣಿಹಳ್ಳದಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಗಂಗವ್ವ ಮಾಕನವರ್ ಎಂದು ಗುರುತಿಸಲಾಗಿದೆ.

BENNEHALLA 2

BENNEHALLA 1 1

BENNEHALLA

Raichur Rain 1

RAIN 1 2

Raichur Rain 5

Chikkaballapura Rain 16

Chikkaballapura Rain 17

Chikkaballapura Rain 12

Chikkaballapura Rain 13

Chikkaballapura Rain 14

Chikkaballapura Rain 7

Chikkaballapura Rain 8

Chikkaballapura Rain 9

Chikkaballapura Rain 2

Chikkaballapura Rain 6

Chikkaballapura Rain 20

Chikkaballapura Rain 1

Share This Article
Leave a Comment

Leave a Reply

Your email address will not be published. Required fields are marked *