ಬೆಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ಬಂಧಿತ ಆರೋಪಿ ಆದಿತ್ಯ ರಾವ್ ತಪ್ಪೊಪ್ಪಿಕೊಂಡಿದ್ದಾನೆ.
ಇಂದು ಮುಂಜಾನೆ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜ್ ಅವರ ಕಚೇರಿಗೆ ಆಗಮಿಸಿ ಆದಿತ್ಯ ರಾವ್ ಶರಣಾಗಿದ್ದಾನೆ. ಈ ವೇಳೆ ನಡೆದ ಪ್ರಾಥಮಿಕ ವಿಚಾರಣೆ ಸಮಯದಲ್ಲಿ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ

ಯೂ ಟ್ಯೂಬ್ ನೋಡಿಕೊಂಡು ಬಾಂಬ್ ತಯಾರಿಸಿದ್ದಾನೆ. ಒಂದು ಎರಡು ಬಾರಿ ತಯಾರಿಕೆಯ ವೇಳೆ ಬಾಂಬ್ ಸಿಡಿದು ಕೈಗೆ ಏಟು ಮಾಡಿಕೊಂಡಿದ್ದ. ಭಯ ಪಡುವ ವ್ಯಕ್ತಿತ್ವ ಹೊಂದಿದ್ದ ಈತನಿಗೆ ಧೈರ್ಯ ಇರಲಿಲ್ಲ ಎನ್ನುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳೂರು ಬಾಂಬರ್ ಅರೆಸ್ಟ್

ಸಿಸಿಟಿವಿಯಲ್ಲಿ ತನ್ನ ಫೋಟೋ ಪ್ರಕಟವಾಗುತ್ತಿದ್ದ ಭಯಗೊಂಡಿದ್ದ ಆದಿತ್ಯ ರಾವ್ ಉಡುಪಿಯಿಂದ ಆಗಮಿಸಿ ಇಂದು ಶರಣಾಗಿದ್ದಾನೆ. ಹಲಸೂರು ಪೊಲೀಸ್ ಠಾಣೆಯ ಕಸ್ಟಡಿಯಲ್ಲಿರುವ ಆದಿತ್ಯ ರಾವ್ ನನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಇಂದು ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇದನ್ನೂ ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ
Mangaluru city police investigation team is flying into Bengaluru shortly to investigate the developments in connection with MIA case.. the team will question the suspect and will initiate further necessary legal action..
— ಮಂಗಳೂರು ನಗರ ಪೊಲೀಸ್ MangaluruCityPolice (@compolmlr) January 22, 2020
ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಪ್ರತಿಕ್ರಿಯಿಸಿ, ಮಂಗಳೂರು ಪೊಲೀಸರ ತನಿಖಾ ತಂಡ ಶೀಘ್ರವೇ ಬೆಂಗಳೂರಿಗೆ ತೆರಳಲಿ ಆರೋಪಿಯನ್ನು ವಿಚಾರಣೆ ನಡೆಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.
