ಕೊಲಂಬೊ: ಡಂಬುಲ್ಲಾದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡವನ್ನು ಭಾರತ ಎ (India A vs Sri Lanka A) ತಂಡ 66 ರನ್‌ಗಳಿಂದ ಸೋಲಿಸಿ ತ್ರಿಕೋನ ಎ ಸರಣಿಯನ್ನು ಗೆದ್ದುಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ ನಿಗದಿತ 50 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿತು. 378 ರನ್ ಗುರಿ ಬೆನ್ನತ್ತಿದ ಶ್ರೀಲಂಕಾ ಎ ತಂಡ 47.1 ಓವರ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: 10 ಬೌಂಡರಿ, 8 ಸಿಕ್ಸ್, 11 ಎಸೆತಗಳಲ್ಲಿ ಫಿಫ್ಟಿ, – ಕೆಣಕಿದ ಲಂಕಾಗೆ ಬ್ಯಾಟ್‌ನಿಂದಲೇ ಬುದ್ಧಿ ಕಲಿಸಿ ಸೂರ್ಯವಂಶಿ ವಿಶ್ವದಾಖಲೆ
15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) 29 ಎಸೆತಗಳಲ್ಲಿ 94 ರನ್ (10 ಬೌಂಡರಿ, ಎಂಟು ಸಿಕ್ಸರ್) ಬಾರಿಸಿ ಭಾರತ ಎ ತಂಡ ಬೃಹತ್ ರನ್ ದಾಖಲಿಸಲು ಕೊಡುಗೆ ನೀಡಿದರು. ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಲಿಸ್ಟ್ ಎ ದಾಖಲೆಯಾಗಿದೆ. ನಾಯಕ ತಿಲಕ್ ವರ್ಮಾ (67) ಮತ್ತು ಅನುಕುಲ್ ರಾಯ್ (15 ಬಾಲ್‌ಗಳಿಗೆ 39 ರನ್) ಕೂಡ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಶ್ರೀಲಂಕಾ ಎ ತಂಡವನ್ನು 47.1 ಓವರ್‌ಗಳಲ್ಲಿ ಭಾರತ ಎ ತಂಡ 311 ರನ್‌ಗಳಿಗೆ ಆಲೌಟ್ ಮಾಡಿತು. ಸದೀರ ಸಮರವಿಕ್ರಮ (52) ಮತ್ತು ವನುಜಾ ಸಹನ್ (62) ಅರ್ಧಶತಕ ಗಳಿಸಿದರು. ಉಳಿದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ವೇಗಿ ಯಶ್ ಠಾಕೂರ್ ಮತ್ತು ಸ್ಪಿನ್ನರ್ ವಿಪ್ರಜ್ ನಿಗಮ್ ತಲಾ ಮೂರು ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿಗೆ ಕೊಡುಗೆ ನೀಡಿದರು. ಸದೀರ ಸಮರವಿಕ್ರಮ (52) ಮತ್ತು ವನುಜಾ ಸಹನ್ (62) ಅರ್ಧಶತಕಗಳನ್ನು ಬಾರಿಸಿ, ಎಸ್‌ಎಲ್ ಎ ಪರ ಉತ್ತಮ ಪ್ರದರ್ಶನ ನೀಡಿದರು. ಇದನ್ನೂ ಓದಿ: ಇಂಗ್ಲೆಂಡ್ ಸರಣಿಗೆ ಟೀಮ್ ಇಂಡಿಯಾ ಪ್ರಕಟ – ಐರ್ಲೆಂಡ್ ಸರಣಿಗೆ ಸೂರ್ಯವಂಶಿ ಎಂಟ್ರಿ!
