ಮುಂಬೈ: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ (Team India) ಏಕದಿನ ತಂಡ ಪ್ರಕಟವಾಗಿದೆ. ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಭಾರತ ತಂಡವನ್ನು ಶುಭ್‌ಮನ್ ಗಿಲ್ (Shubman Gill) ಮುನ್ನಡೆಸಲಿದ್ದಾರೆ.
ಶ್ರೇಯಸ್ ಅಯ್ಯರ್(Shreyas Iyer) ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ (Rohith Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಇಬ್ಬರೂ ತಂಡದಲ್ಲಿದ್ದು, ಕೊಹ್ಲಿ ಅವರ ಆಯ್ಕೆಯು ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ ಎಂದು ಬಿಸಿಸಿಐ ತಿಳಿಸಿದೆ.
ಭಾರತ ಏಕದಿನ ತಂಡ:
ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಫಿಟ್‌ನೆಸ್ ಆಧಾರಿತ), ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಗುರ್ನೂರ್ ಬ್ರಾರ್.

ಯಾವಾಗ ಪಂದ್ಯ?
1ನೇ ಏಕದಿನ ಪಂದ್ಯ —> ಜುಲೈ 14, ಎಡ್ಜ್‌ಬಾಸ್ಟನ್
2ನೇ ಏಕದಿನ ಪಂದ್ಯ —> ಜುಲೈ 16, ಸೋಫಿಯಾ ಗಾರ್ಡನ್ಸ್
3ನೇ ಏಕದಿನ ಪಂದ್ಯ —> ಜುಲೈ 19, ಲಾರ್ಡ್ಸ್
ಐರ್ಲೆಂಡ್ ಸರಣಿಗೆ ತಂಡ ಪ್ರಕಟ:
ಇದೇ ವೇಳೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೂ ಭಾರತದ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಟಾಟಾ ಐಪಿಎಲ್ 2026 ರ ವೇಳೆ ಎಡಗಾಲಿನ ಗಾಯಕ್ಕೆ ತುತ್ತಾಗಿದ್ದ ವರುಣ್ ಚಕ್ರವರ್ತಿ ಅವರು ಸದ್ಯ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ (BCCI COE) ಚಿಕಿತ್ಸೆ ಪಡೆಯುತ್ತಿದ್ದು, ಐರ್ಲೆಂಡ್ ಸರಣಿಯಿಂದ ಹೊರಗುಳಿದಿದ್ದಾರೆ. ಇದನ್ನೂ ಓದಿ: 10 ಬೌಂಡರಿ, 8 ಸಿಕ್ಸ್, 11 ಎಸೆತಗಳಲ್ಲಿ ಫಿಫ್ಟಿ, – ಕೆಣಕಿದ ಲಂಕಾಗೆ ಬ್ಯಾಟ್‌ನಿಂದಲೇ ಬುದ್ಧಿ ಕಲಿಸಿ ಸೂರ್ಯವಂಶಿ ವಿಶ್ವದಾಖಲೆ
ಟಿ20 ತಂಡ
ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ.
