LatestBengaluru CityCinemaDistrictsKarnatakaMain PostSandalwood

ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಗಲಾಟೆ ಮಾಡಿಕೊಂಡ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.

ಹೌದು. ನಗರದ ಸ್ಟಾರ್ ಹೋಟೆಲ್‍ನಲ್ಲಿ ನಟಿ ಸಂಜನಾ ಗಲ್ರಾನಿ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮಧ್ಯೆ ಜಗಳವಾಗಿದ್ದು, ಗಲಾಟೆ ತಾರಕಕ್ಕೇರಿ ಸಂಜನಾ ನಿರ್ಮಾಪಕಿ ಮೇಲೆ ಗ್ಲಾಸ್ ನಿಂದ ಹೊಡೆದಿದ್ದಾರೆ. ಈ ಸಂಬಂಧ ನಿರ್ಮಾಪಕಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಬಳಿಕ ರಾಜಿ ಪಂಚಾಯ್ತಿ ಮಾಡಿಕೊಂಡು ಕೇಸನ್ನು ಹಿಂಪಡೆದುಕೊಂಡಿದ್ದಾರೆ.

ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

ಹೋಟೆಲಿನಲ್ಲಿ ಏನಾಯ್ತು?
ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಅವರಿಗೆ ಬೆಂಗಳೂರು ಅಂದರೆ ಬಹಳ ಇಷ್ಟ. ಹೀಗಾಗಿ ಬೆಂಗಳೂರಿನಲ್ಲಿಯೇ ಕಾಲ ಕಳೆಯುತ್ತಿದ್ದ ಅವರಿಗೆ ಸ್ಯಾಂಡಲ್‍ವುಡ್ ನಟಿ ಸಂಜನಾ ಜೊತೆ ಸ್ನೇಹವಾಗಿದೆ. ಹೀಗೆ ಇಬ್ಬರೂ ಸ್ಟಾರ್ ಹೋಟೆಲ್‍ನಲ್ಲಿ ಪಾರ್ಟಿ ಮಾಡುತ್ತಿದ್ದರು. ಒಂದೇ ಟೇಬಲ್‍ನಲ್ಲಿ ಕುಳಿತು ಕುಡಿಯುತ್ತಾ ಇದ್ದ ಇಬ್ಬರ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಮಾತು ಅತಿರೇಕಕ್ಕೆ ಹೋಗಿದ್ದೇ ತಡ, ಇಬ್ಬರೂ ಪರಸ್ಪರ ಕೆಟ್ಟ ಮಾತುಗಳಿಂದ ಬೈದುಕೊಂಡರು.

ಎಣ್ಣೆ ಕಿಕ್‍ನಲ್ಲಿ ಗಲಾಟೆ ಮಾಡ್ಕೊಂಡ್ರಾ ಸಂಜನಾ ಗಲ್ರಾನಿ?

ಈ ವೇಳೆ ಸಿಟ್ಟಿಗೆದ್ದ ಸಂಜನಾ ಅವರು ವಂದನಾರಿಗೆ ಹೊಡೆಯಲು ಮುಂದಾಗಿದ್ದು, ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಬಿಸಾಕಿದ್ದಾರೆ. ನಟಿ ಬಿಸಾಡಿದ ವೇಗಕ್ಕೆ ಗ್ಲಾಸ್ ನಿರ್ಮಾಪಕಿಯ ಹಣೆಗೆ ಬಂದು ಬಡಿದಿದೆ. ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತ ನಿರ್ಮಾಪಕಿ ಗರಂ ಆಗಿದ್ದನ್ನು ಕಂಡ ಸಂಜನಾ ಫುಲ್ ಸೈಲೆಂಟ್ ಆಗಿದ್ದು, ಪೊಲೀಸ್ ಠಾಣೆಗೆ ಹೋಗಿ ರಾಜಿ ಪಂಚಾಯ್ತಿ ಮಾಡಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *