-ರೈಲ್ವೆ ಹಳಿಯ ಮೇಲೆ ಶವ ಬಿಸಾಕಿ ಹೋದ
ಮುಂಬೈ: ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯನ್ನು ಕೊಲೆ ಮಾಡಿ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನ ಮಾಡಿರುವ ಘಟನೆ ಮಹಾರಾಷ್ಟ್ರದ ಜಲ್ನಾದಲ್ಲಿ ನಡೆದಿದೆ.
ದೀಪಾಲಿ ರಮೇಶ್ ಶಿಂಡ್ಜ್ ಕೊಲೆಯಾದ ಮಹಿಳೆ. ಡಿಸೆಂಬರ್ 21 ರಂದು ರೈಲ್ವೆ ಹಳಿಯ ಬಳಿ ಈಕೆಯ ಶವ ಪತ್ತೆಯಾಗಿತ್ತು. ದೀಪಾಲಿಯನ್ನು ಜಲ್ನಾದ ಎಂಎಡಿಎ ಕಾಲೋನಿ ನಿವಾಸಿ ಸಚಿನ್ ಗೈಕ್ವಾಡ್ ಕೊಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಶ್ಯಾಮ್‍ಸುಂದರ್ ಕೌತಲೆ ತಿಳಿಸಿದ್ದಾರೆ.
Advertisement
Advertisement
ರೈಲ್ವೆ ಹಳಿಯ ಬಳಿ ಡೆತ್‍ನೋಟ್, ಮೃತ ದೀಪಾಲಿಯ ಫೋನ್ ಮತ್ತು ಆಕೆಯ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಡೆತ್‍ನೋಟಿನಲ್ಲಿ ದೀಪಾಲಿ, ಪತಿ ಅವಿನಾಶ್ ವಂಜರೆ ತುಂಬಾ ಕಿರುಕುಳ ನೀಡುತ್ತಿದ್ದಾನೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಳು. ಆರು ತಿಂಗಳ ಹಿಂದೆಯಷ್ಟೇ ಅವಿನಾಶ್ ವಂಜರೆಯನ್ನು ದೀಪಾಲಿ ಮದುವೆಯಾದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಮಹಿಳೆಯ ತಂದೆ ದಾಖಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಪತಿ ಅವಿನಾಶ್ ವಂಜಾರೆಯನ್ನು ಬಂಧಿಸಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹಿಳೆಯ ತಲೆಗೆ ತೀವ್ರವಾದ ಗಾಯಗಳಾಗಿದ್ದರಿಂದ ಮೃತಪಟ್ಟಿದ್ದಾಳೆ ಎಂದು ಬಂದಿತ್ತು. ತಕ್ಷಣ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಆಗ ವಿವಾಹಿತ ಸಚಿನ್ ಗೈಕ್ವಾಡ್ ಜೊತೆ ದೀಪಾಲಿ ಸಂಬಂಧ ಹೊಂದಿದ್ದಳು. ಜೊತೆಗೆ ಆಕೆಯ ಸಾವಿನ ನಂತರ ಸಚಿನ್ ಪರಾರಿಯಾಗಿದ್ದನು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
Advertisement
ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಸಚಿನ್ ಗೈಕ್ವಾಡ್ ಮತ್ತು ಮೃತ ಮಹಿಳೆ ದ್ವಿಚಕ್ರ ವಾಹನದಲ್ಲಿ ಹೋಗಿರುವುದು ಸೆರೆಯಾಗಿದೆ. ಅಲ್ಲದೇ ಅಂದಿನ ದಿನವೇ ದೀಪಾಲಿ ಕೊಲೆಯಾಗಿದೆ. ಪೊಲೀಸರು ಸಚಿನ್‍ನನ್ನು ವಿಚಾರಣೆ ಮಾಡಿದ್ದು, ನಡೆದ ಸತ್ಯಾಂಶವನ್ನು ಬಾಯಿಬಿಟ್ಟಿದ್ದಾನೆ.
ಮೃತ ದೀಪಾಲಿಯನ್ನು ಇನಿವಾಡಿಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದಿದೆ. ಆಗ ಆರೋಪಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ರೈಲ್ವೆ ಹಳಿಯ ಬಳಿ ಬಿಸಾಕಿದ್ದಾನೆ. ಅಲ್ಲದೇ ಇದು ಆತ್ಮಹತ್ಯೆ ಎಂದು ಬಿಂಬಿಸಲು ಆತ ಆಕೆಯ ಫೋನಿನಿಂದ ತಂದೆಗೆ ಮೆಸೇಜ್ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.