CinemaLatestMain PostSouth cinema

ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

ಕ್ಷಿಣದ ಖ್ಯಾತ ನಟಿ ಸಮಂತಾ (Samantha) ಅವರ ಆರೋಗ್ಯದ ಬಗ್ಗೆ ಹಲವು ದಿನಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸಮಂತಾ ಅವರ ಮ್ಯಾನೇಜರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ಅವರ ಆರೋಗ್ಯ ಚೆನ್ನಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದೂ ತಿಳಿಸಿದ್ದಾರೆ. ಆದರೂ, ಸಮಂತಾ ಅವರ ಆರೋಗ್ಯದ (Health) ಬಗ್ಗೆ ಅನುಮಾನ ಮೂಡುವುದು ನಿಂತಿಲ್ಲ. ಕಾರಣ, ಸಮಂತಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತು ಅವರ ಸಿನಿಮಾಗಳ ಕೆಲಸಗಳು ಅಲ್ಲಲ್ಲೇ ನಿಂತಿವೆ.

ಸಮಂತಾ ನಟನೆಯ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಎರಡೂ ಸಿನಿಮಾಗಳಲ್ಲೂ ಇವರೇ ಹೀರೋ, ಇವರೇ ಹಿರೋಯಿನ್. ಶಾಕುಂತಲಾ (Shakuntala) ಮತ್ತು ಯಶೋಧಾ (Yashodha) ಚಿತ್ರಗಳನ್ನು ಮುಗಿಸಿರುವ ಸಮಂತಾ, ಅದರ ಬಿಡುಗಡೆಗಾಗಿ ಕಾಯುತ್ತಿದ್ದರು. ಆದರೆ, ಎರಡೂ ಚಿತ್ರಗಳ ರಿಲೀಸ್ ಮುಂದಕ್ಕೆ ಹೋಗುತ್ತಿವೆ. ಈಗಾಗಲೇ ಚಿತ್ರದ ಪೋಸ್ಟರ್, ಫಸ್ಟ್ ಲುಕ್ ಹೀಗೆ ಏನೆಲ್ಲ ರಿಲೀಸ್ ಆಗುತ್ತಿವೆ. ಒಂದಕ್ಕೂ ಸಮಂತಾ ರಿಯ್ಯಾಕ್ಟ್ ಮಾಡಿಲ್ಲ. ಆಯಾ ಪೋಸ್ಟರ್ ಅನ್ನು  ಅವರು ಹಂಚಿಕೊಂಡಿಲ್ಲ.

ಅಂದುಕೊಂಡಂತೆ ಆಗಿದ್ದರೆ, ಶಾಕುಂತಲಾ ಸಿನಿಮಾ ರಿಲೀಸ್ ಇನ್ನಷ್ಟೇ ಆಗಬೇಕಿತ್ತು. ಆದರೆ, ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಮುಂದಕ್ಕೆ ಹಾಕಿದ್ದಾರೆ. ಕಾರಣವನ್ನು ಮಾತ್ರ  ಅವರು ನೀಡಿಲ್ಲ. ಹಾಗಾಗಿ ಸಮಂತಾ ಅವರ ಅನಾರೋಗ್ಯವೇ ಚಿತ್ರ ಮುಂದೂಡಲು ಕಾರಣ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಲ್ಲಿ (Fans) ಆತಂಕವೂ ಹೆಚ್ಚಾಗಿದೆ. ಈ ಕುರಿತು ಸ್ಪಷ್ಟನೆ ಸಿಗಬೇಕಿದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಇದನ್ನೂ ಓದಿ:ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

ಸಮಂತಾ ಚರ್ಮರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಅಮೆರಿಕಾಗೆ (America) ತೆರಳಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಹೀಗಾಗಿಯೇ ಅವರು ಯಾವುದೇ ಶೂಟಿಂಗ್ ಮತ್ತು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಎಲ್ಲದಕ್ಕೂ ಸಮಂತಾ ಅವರು ಉತ್ತರ ಕೊಡಬೇಕಿದೆ.

Live Tv

Leave a Reply

Your email address will not be published. Required fields are marked *

Back to top button