ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್(TMC) ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರ(Abhishek Banerjee) ಮೇಲೆ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ನಿರ್ಮಲ್ ಸೇನ್‌ಗುಪ್ತಾ, ದೇಬಾಶಿಶ್ ದತ್ತ ಮತ್ತು ಕಾಜಲ್ ದಾಸ್ ಸೋನಾರ್‌ಪುರದ ದಕ್ಷಿಣದ ಮಾಜಿ ಟಿಎಂಸಿ ಶಾಸಕಿ ಲವ್ಲಿ ಮೈತ್ರಾ ಅವರ ಆಪ್ತರು ಎಂದು ವರದಿಯಾಗಿದೆ.
ಶನಿವಾರ ಅಭಿಷೇಕ್ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದಿಂದ ಹಾನಿಗೊಳಗಾದ ಕುಟುಂಬಸ್ಥರನ್ನು ಭೇಟಿ ಮಾಡಲು ಹೋಗಿದ್ದಾಗ ಹಲ್ಲೆ ನಡೆದಿತ್ತು. ತಮ್ಮ ಪಕ್ಷದ ಕಾರ್ಯಕರ್ತರ ಭೇಟಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಲ್ಲಿದ್ದ ಜನರ ಗುಂಪೊಂದು ಟಿಎಂಸಿ ಸಂಸದನನ್ನು ತಡದು ಮೊಟ್ಟೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದರು. ಹಲವು ಮಹಿಳೆಯವರು ಟಿಎಂಸಿ ನಾಯಕನ ಮೇಲೆ ಕಳ್ಳ ಕಳ್ಳ ಎಂದು ಘೋಷಣೆ ಕೂಗಿದ್ದರು. ಘಟನೆಯ ಸಂಪೂರ್ಣ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಅಭಿ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ, ಮನೆಯಲ್ಲೇ ಚಿಕಿತ್ಸೆ ಕೊಡಿಸಲಾಗ್ತಿದೆ – ನನ್ನ ಅಳಿಯನ ಕೊಲೆಗೆ ಬಿಜೆಪಿ ಸಂಚು: ದೀದಿ ಗಂಭೀರ ಆರೋಪ
MAJOR TWIST:
The six people arrested in connection with the attack on Abhishek Banerjee were reportedly close associates of former TMC MLA Lovely Maitra until barely a month ago.
This revelation raises more questions than it answers.
Was this merely an isolated incident, or is… pic.twitter.com/QrCEuTnFTP
— Amit Malviya (@amitmalviya) May 31, 2026
ಬಿಜೆಪಿಯಿಂದ ಸಂಚು: ಅಭಿಷೇಕ್ ಬ್ಯಾನರ್ಜಿ
ಬಿಜೆಪಿಯವರು ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಘಟನೆ ನಡೆದ ವೇಳೆ ಪೊಲೀಸರು ಸ್ಥಳದಲ್ಲಿರಲಿಲ್ಲ. ಘಟನೆಯ ಇಡೀ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ಘಟನೆ ಬಗ್ಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಆರ್.ಎನ್ ರವಿಯವರಿಗೆ (RN Ravi)ತಿಳಿಸುತ್ತೇವೆ ಎಂದಿದ್ದಾರೆ.
ಇದು ಪೂರ್ವ ಯೋಜಿತ ಕೃತ್ಯ. ಬಿಜೆಪಿಗರು ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಲು ಸ್ಥಳೀಯ ಪೊಲೀಸರು ಅಲ್ಲಿನ ಜನರ ಗುಂಪನ್ನು ಕಳುಹಿಸಿ ಘಟನೆ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಬಳಿಕ ಟಿಎಂಸಿ ಸಂಸದರ ಮೇಲೂ ದಾಳಿ – ಕಲ್ಯಾಣ್ ಬ್ಯಾನರ್ಜಿ ತಲೆಗೆ ಗಂಭೀರ ಪೆಟ್ಟು
Staying true to his word, Shri @abhishekaitc REFUSED TO ABANDON the grieving family of Sanju Karmakar.
Even after a vicious attack by @BJP4Bengal-backed miscreants, our National General Secretary chose not to turn back. Instead, he stood beside a family devastated by an… pic.twitter.com/L11oo92AzQ
— All India Trinamool Congress (@AITCofficial) May 30, 2026
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲ್ಲೆ ನಡೆಸಿರುವ ವೀಡಿಯೊವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕೃತ್ಯ ನಡೆಸಿರುವುದಕ್ಕೆ ಬಿಜೆಪಿಗರಿಗೆ ನಾಚಿಕೆಯಾಗಬೇಕು. ಆಡಳಿತ ಪಕ್ಷದವರು ಕೊಲೆಗಾರರು ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
