Thursday, 22nd August 2019

ಕಾಸ್ಟಿಂಗ್ ಕೌಚ್ ಸಿನಿಮಾರಂಗ ಮಾತ್ರವಲ್ಲ, ಉದ್ಯಮದಲ್ಲೂ ಒಂದು ಪಾರ್ಟ್ ಆಗಿದೆ: ಸಮಂತಾ

ಹೈದರಾಬಾದ್: ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಕೆಲವು ನಟಿಯರು ತಮ್ಮ ತಮ್ಮ ಅಭಿಪ್ರಾಯ, ಅನುಭವವನ್ನು ಹೇಳಿದ್ದಾರೆ. ಈಗ ಸೌತ್ ಸಿನಿಮಾರಂಗದ ಬಹು ಬೇಡಿಕೆಯ ನಟಿ ಸಮಂತಾ ಅಕ್ಕಿನೇನಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

ಸಮಂತಾ ಅಕ್ಕಿನೇನಿ ಸೌತ್ ಸಿನಿಮಾರಂಗದ ಮಿನುಗುತಾರೆ. ನೋಡುವುದಕ್ಕೆ ತುಂಬಾ ಸೈಲೆಂಟ್. ಆದರೆ ಸಿಕ್ಕಾಪಟ್ಟೆ ಬೋಲ್ಡ್. ಅಭಿನಯ ಹಾಗೂ ಸೌಂದರ್ಯ ಎರಡರಲ್ಲೂ ಕಮ್ಮಿಯಿಲ್ಲದ ಸಮಂತಾ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ರನ್ನನ ಜತೆ ತೆಲುಗಿನ ಈಗ ಸಿನಿಮಾದಲ್ಲಿ ಮಿಂಚಿದ್ದರು. 8 ವರ್ಷಗಳಿಂದ ಬಣ್ಣದ ಜಗತ್ತಿನಲ್ಲಿ ಇದ್ದಾರೆ. ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಈ ಹಿಂದೆ ಸಾಮಾಜಿಕ ಜಾಲತಾಣಗಳಲಿ ಟ್ರೋಲ್ ಆಗಿದ್ದು, `ಊಟ ಇಲ್ಲದಿದ್ದರೂ ಪರವಾಗಿಲ್ಲ ದಿನಕ್ಕೊಮ್ಮೆ ಸೆಕ್ಸ್ ಬೇಕೆ ಬೇಕು ಅಂತ ಖಾಸಗಿ ಸಂದರ್ಶನವೊಂದರಲ್ಲಿ, ಜಸ್ಟ್ ಫನ್ ರೌಂಡ್‍ನಲ್ಲಿ ಹೇಳಿಕೆ ಕೊಟ್ಟು ಟ್ರೋಲ್ ಆಗಿದ್ದರು. ಈಗ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

ಕಾಸ್ಟಿಂಗ್ ಕೌಚ್ ಅನ್ನೋದು ಸಿನಿಮಾರಂಗ ಮಾತ್ರವಲ್ಲಾ ಉದ್ಯಮದಲ್ಲೂ ಒಂದು ಪಾರ್ಟ್ ಆಗಿ ಬಿಟ್ಟಿದೆ. ನಾನು ಎಂಟು ವರ್ಷಗಳಿಂದ ತೆಲುಗು, ತಮಿಳು ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದೇನೆ. ಆದರೆ ಯಾವುದೇ ರೀತಿಯಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ. ಚಿತ್ರರಂಗದಲ್ಲಿ ಒಳ್ಳೆಯ ಮನಸ್ಸಿರುವ ಸಾಕಷ್ಟು ಜನರು ಇದ್ದಾರೆ. ಅವರನ್ನ ಭೇಟಿ ಕೂಡ ಮಾಡಿದ್ದೇನೆ. ಇಂಟ್ರೆಸ್ಟಿಂಗ್ ಅಂದರೆ ನಾನು ಮಗುವಿಗೆ ಜನ್ಮ ನೀಡಿದ ನಂತರವೂ ಕೂಡ ಸಿನಿಮಾರಂಗದಲ್ಲಿ ಮುಂದುವರೆಯಲು ಆಸೆ ಪಡುತ್ತೇನೆ ಎಂದು ಸಮಂತಾ ಹೇಳಿದ್ದಾರೆ.

ಸದ್ಯಕ್ಕೆ ಸಮಂತಾ ರಂಗಸ್ಥಳಂ ಯಶಸ್ಸಿನಲ್ಲಿದ್ದು, ಮಹಾನಟಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *