ಕನ್ನಡದ `ಕಿರಿಕ್ ಪಾರ್ಟಿ’ (Kirik Party) ಚಿತ್ರದಿಂದ ಸಿನಿ ಕೆರಿಯರ್ ಶುರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಸೌತ್ ಮತ್ತು ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. `ಪುಷ್ಪ’ (Pushpa) ಸಕ್ಸಸ್ ನಂತರ ಕೊಡಗಿನ ಕುವರಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರು ಕೂಡ ಪಾಲಕರಿಗೆ (Parents) ರಶ್ಮಿಕಾ ಬಗ್ಗೆ ಹೆಮ್ಮೆ ಇಲ್ವಂತೆ ಈ ಕುರಿತು ನಟಿಯೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಲ್ಲಿಯವರೆಗೂ ನಟಿಸಿರುವ ಫ್ಲಾಪ್ ಆಗಿರೋದಕ್ಕಿಂತ ಸೂಪರ್ ಹಿಟ್ ಆಗಿರೋದೇ ಜಾಸ್ತಿ. ರಶ್ಮಿಕಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ ಆ ಚಿತ್ರದ ಹಿಟ್ ಎಂದರ್ಥ. ನಿರ್ಮಾಪಕರ ಪಾಲಿಗೆ ಲಕ್ಕಿ ನಟಿಯಾಗಿರುವ ರಶ್ಮಿಕಾ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ. ಇದೀಗ ರಶ್ಮಿಕಾ ತಂದೆ- ತಾಯಿ ಅವರ ಸಾಧನೆ ಬಗ್ಗೆ ಯಾವ ರೀತಿಯ ಅಭಿಪ್ರಾಯವಿದೆ ಎಂಬುದನ್ನ ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Weekend With Ramesh: ರಕ್ಷಿತಾ ಜೊತೆಗಿನ ಸ್ಪರ್ಧೆ ಬಗ್ಗೆ ರಮ್ಯಾ ಮಾತು
ನಿಮ್ಮ ನಟನೆ ಬಗ್ಗೆ ತಂದೆ-ತಾಯಿಗೆ ತುಂಬಾ ಹೆಮ್ಮೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದಾರೆ. `ಹೆಮ್ಮೆʼ ಇಲ್ಲ. ಯಾಕೆಂದರೆ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಗಳು ಏನು ಮಾಡುತ್ತಿದ್ದಾಳೆ ಎಂಬುದು ಅವರಿಗೆ ಅರ್ಥ ಆಗುವುದಿಲ್ಲ. ಆದರೆ ನಾನು ಪ್ರಶಸ್ತಿ ಗೆದ್ದಾಗ ಅವರಿಗೆ ತುಂಬ ಹೆಮ್ಮೆ ಆಗುತ್ತದೆ. ಅವರು ನನ್ನ ಬಗ್ಗೆ ನಿಜಕ್ಕೂ ಹೆಮ್ಮೆಪಡಬೇಕು ಎಂದರೆ ನಾನು ಇನ್ನೂ ಸಾಧನೆ ಮಾಡಬೇಕು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಯಾವುದೇ ಕೊರತೆ ಆಗದ ರೀತಿಯಲ್ಲಿ ನನ್ನ ತಂದೆ-ತಾಯಿ ನನ್ನನ್ನು ಬೆಳೆಸಿದರು. ಕೇಳಿದ್ದೆಲ್ಲವನ್ನೂ ಅವರು ನನಗೆ ನೀಡಿದರು. ಅದಕ್ಕೆ ನಾನು ಚಿರಋಣಿ. ಈಗ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಕರ್ತವ್ಯ ನನ್ನದು ಎಂದು ರಶ್ಮಿಕಾ ಮಾತನಾಡಿದ್ದಾರೆ ಸದ್ಯ `ಪುಷ್ಪ 2′ (Pushpa 2) ಮತ್ತು `ಅನಿಮಲ್’ (Animal) ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿದೆ. ಈ ಸಿನಿಮಾದ ಶೂಟಿಂಗ್‌ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.