ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಅವರ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎನ್ನುವ ಕೊರಗು ಅವರ ಅಭಿಮಾನಿಗಳಲ್ಲಿತ್ತು. ಆ ಕೊರಗನ್ನು ಹೋಗಲಾಡಿಸಿದ್ದಾರೆ ನಟ ಯಶ್. ಹೊಸ ಸಿನಿಮಾ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಶೀಘ್ರದಲ್ಲೇ ಹೊಸ ಚಿತ್ರದ ಬಗ್ಗೆ ಮತ್ತಷ್ಟು ವಿಷಯಗಳನ್ನೂ (Update) ಹೇಳುವುದಾಗಿ ತಿಳಿಸಿದ್ದಾರೆ.
ಕುಟುಂಬ ಸಮೇತ ಅವರ ಮನೆ ದೇವರು ನಂಜನಗೂಡಿನ (Nanjangudu) ನಂಜುಂಡೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್, ಈ ಸಂದರ್ಭದಲ್ಲಿ ತಮ್ಮ ಹೊಸ ಸಿನಿಮಾದ (New Movie) ಬಗ್ಗೆ ಮಾತನಾಡಿದರು. ‘ದೇವರ ಸನ್ನಿದಿಯಲ್ಲಿ ಇದ್ದೀನಿ. ಸುಖಾ ಸುಮ್ಮನೆ ತೇಲಿಸುವ ಮಾತುಗಳನ್ನು ಆಡುವುದಿಲ್ಲ. ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಉಚಿತವಾಗಿ ಸಿನಿಮಾ ನೋಡುವುದಿಲ್ಲ. ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತೆ ಸಿನಿಮಾ ಮಾಡಬೇಕು. ಅದು ಈಗ ನಡೆಯುತ್ತಿದೆ’ ಎಂದರು.
ಮುಂದುವರೆದು ಮಾತನಾಡಿದ ಯಶ್, ‘ನಾನು ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ. ಸಿನಿಮಾಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಸ್ಕ್ರೀಪ್ಟ್ ಕೂಡ ಸಿದ್ಧವಾಗ್ತಿದೆ. ಆದಷ್ಟು ಬೇಕು ಹೊಸ ಚಿತ್ರದ ಮಾಹಿತಿ ನೀಡುವೆ. ಆದಷ್ಟು ಬೇಗನೇ ಹೊಸ ಚಿತ್ರದ ಬಗ್ಗೆ ಹೇಳುತ್ತೇವೆ. ಕಾಯಿಸುವುದಿಲ್ಲ’ ಎಂದರು. ಇದನ್ನೂ ಓದಿ:ಫ್ಯಾಷನ್ ರೂಲ್ಸ್ ಬ್ರೇಕ್ ಮಾಡಿ, ನೆಕ್ಲೇಸ್ ಧರಿಸಿ ಹಾಡಿದ ಸಂಜಿತ್ ಹೆಗ್ಡೆ
ಇತ್ತೀಚಿನ ದಿನಗಳಲ್ಲಿ ಯಶ್ ಬಾಲಿವುಡ್ ಗೆ ಹೋಗಲಿದ್ದಾರೆ ಎನ್ನುವ ಸುದ್ದಿಯಿತ್ತು. ರಣವೀರ್ ಕಪೂರ್ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅದರಲ್ಲೂ ಯಶ್ ಬಾಲಿವುಡ್ ಚಿತ್ರದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಕುರಿತು ಯಶ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ಈ ಸಂದರ್ಭದಲ್ಲಿ ಬಾಲಿವುಡ್ ಗೆ ಹೋಗುವ ವಿಚಾರ ಕೂಡ ಬಂತು. ಅದಕ್ಕೆ ಪ್ರತಿಕ್ರಿಯೆ ನೀಡಿ ‘ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ. ನಾನು ಎಲ್ಲೂ ಹೋಗುವುದಿಲ್ಲ. ಡೋಂಟ್ ವರಿ’ ಎಂದರು ಯಶ್.