ಸ್ಯಾಂಡಲ್‌ವುಡ್‌ನ (Sandalwood) ಸಿಂಹಪ್ರಿಯಾ (Simha Priya) ಜೋಡಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಈ ಕುರಿತು ಮಾಧ್ಯಮ ಸುದ್ದಿಗೋಷ್ಠಿ ಕೂಡ ಮಾಡಲಾಯಿತು. ಈ ವೇಳೆ ತಮ್ಮ ಲವ್ ಕಹಾನಿ ಬಗ್ಗೆ ಇಂಟ್ರರೆಸ್ಟಿಂಗ್ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
Advertisement
ಚಂದನವನದ ಚೆಂದದ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಈ ವೇಳೆ ತಮ್ಮಿಬ್ಬರಿಗೂ ಹೇಗೆ ಪ್ರೇಮಾಂಕುರವಾಯಿತು ಎಂಬುದನ್ನ ಈ ಜೋಡಿ ರಿವೀಲ್ ಮಾಡಿದ್ದಾರೆ. ಎಂಗೇಜ್‌ಮೆಂಟ್ ಫೋಟೋ ಹೊರ ಬಂದಿದ್ದು ನೋಡಿದೆ. ನಾನು ನಾಯಿ ಮರಿ ಕೊಟ್ಟು ಪಟಾಯಿಸಿ ಬಿಟ್ಟೆ ಅಂತ ಅಂದ್ರು. ನಾನು ಪ್ರೀತಿಸಿ ಆ ನಂತರ ನಾಯಿಮರಿ ಕೊಟ್ಟೆ. 2016ರಲ್ಲಿ ಇಬ್ಬರ ಸ್ನೇಹ ಶುರುವಾಯ್ತು. ನನ್ನ ಗೋಧಿಬಣ್ಣ ಸಿನಿಮಾ ನೋಡಿ ಬಂದು ಹರಿಪ್ರಿಯಾ ವಿಶ್ ಮಾಡಿದ್ರು. ಆ ನಂತರ ಇಬ್ರ ಮಧ್ಯೆ ಪ್ರೀತಿ ಶುರುವಾಯ್ತು. ಮದುವೆ ಪ್ರೀತಿ ವಿಚಾರದಲ್ಲಿ ನಮ್ಮದೇ ಪ್ಯಾಟ್ರನ್ ರೂಢಿಸಿಕೊಂಡಿದ್ದೇವೆ. ನಾನು ಮೈಸೂರು ಹುಡುಗ ಹಾಗಾಗಿ ಅಲ್ಲೆ ಮದುವೆ ಆಗುತ್ತೇನೆ. ನನ್ನ ಜೀವನದಲ್ಲಿ ಕಷ್ಟದ ದಿನಗಳಲ್ಲಿ ಗೆಳತಿಯಾಗಿ ಹರಿಪ್ರಿಯಾ ಶಕ್ತಿ ಎಂದು ಸಿಂಹ ತಿಳಿಸಿದರು. ಇದನ್ನೂ ಓದಿ: ಸಿಂಹಪ್ರಿಯ ಮ್ಯಾರೇಜ್: ಜನವರಿ 26ಕ್ಕೆ ಮದುವೆ, 28ಕ್ಕೆ ಆರತಕ್ಷತೆ
Advertisement
Advertisement
ಗೋಧಿಬಣ್ಣ ಸಿನಿಮಾ ನೋಡಿ ನಾನು ಕುಟುಂಬದ ಜೊತೆ ವಸಿಷ್ಠ ಸಿಂಹನ ಬಗ್ಗೆ ಹೇಳಿದ್ದೆ. ನಮ್ಮಿಬ್ಬರ ಪ್ರೀತಿಗೆ ಲಾಕ್‌ಡೌನ್ ಕೂಡ ಕಾರಣ ಆಯಿತು. ಸಮಯ ಸಿಕ್ತಾ ಇತ್ತು. ದಿನ ಮಾತಾಡುತ್ತಿದ್ವಿ. ಹರಿಪ್ರಿಯಾ ಮಾತು ಅವರ ನಡವಳಿಕೆ, ಅವರಲ್ಲಿರೋ ಟ್ಯಾಲೆಂಟ್ ನನ್ನನ್ನ ತುಂಬಾ ಇಂಪ್ರೆಸ್ ಮಾಡಿದೆ. ನಾನು ಮಾನಸಿಕವಾಗಿ ಕಷ್ಟದಲ್ಲಿದ್ದಾಗ ಅದರಿಂದ ಹೊರಗೆ ಕರೆದುಕೊಂಡು ಬಂದಿದ್ದು ಹರಿಪ್ರಿಯಾ. ಇಬ್ಬರಿಗೂ ಇಷ್ಟ ಇತ್ತು. ಲಾಕ್‌ಡೌನ್‌ನಲ್ಲಿ ಇಬ್ಬರು ಪ್ರೀತಿಯನ್ನ ಹೇಳಿಕೊಂಡ್ವಿ.
Advertisement
ಹರಿಪ್ರಿಯಾಗೆ ನಾನೆ ಮೊದಲು ಪ್ರಪೋಸ್ ಮಾಡಿದೆ. ಸಿಂಹ ಪ್ರಪೋಸ್ ಮಾಡಿದಾಗ ನನಗೂ ಹೇಳಿಕೊಳ್ಳಬೇಕು ಅಂತ ಇತ್ತು.ಅಪ್ಪ ತೀರಿ ಹೋದ ದಿನ ನನಗೆ ಸಿಂಹ ಪ್ರಪೋಸ್ ಮಾಡಿದ್ರು. ಯಾರಿಗೂ ಗೊತ್ತಾಗದ ಹಾಗೆ ಬಹಳ ಪಟ್ಟು ಪ್ರೀತಿ ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಪ್ರೀತಿಗೆ ಎರಡುವರೆ ಮೂರು ವರ್ಷ ಆಗಿದೆ. ನಾಯಿ ಕೊಟ್ಟು ನಾನು ಹರಿಪ್ರಿಯಾರನ್ನ ಪಟಾಯಿಸಿಲ್ಲ ಎಂದು ವಸಿಷ್ಠ ಸಿಂಹ ಹೇಳಿದರು. ಇನ್ನು ನನಗೆ ತುಂಬಾ ಖುಷಿ ಆಗುತ್ತಿದೆ. ಇವತ್ತು ಮದುವೆ ಬಗ್ಗೆ ಮಾತಾಡೋಕೆ ತುಂಬಾ ಭಯ ಆಗ್ತಿದೆ. ನಮ್ಮಿಬ್ಬರ ಬೆಳವಣಿಗೆಯಲ್ಲಿ ಮಾಧ್ಯಮ ದೊಡ್ಡ ಪಾತ್ರ ವಹಿಸಿದೆ. ನಮ್ಮ ಪ್ರೀತಿನ ಹೇಳಿಕೊಳ್ಳೋಣ ಅಂತ ಅಂದುಕೊಂಡ್ವಿ. ಆದರೆ ಅದು ಆಗಲಿಲ್ಲ ಎಂದು ಹರಿಪ್ರಿಯಾ ತಿಳಿಸಿದರು.
ಇನ್ನು ನಾನು ಏನೆ ಕೆಲಸ ಮಾಡಿದ್ರು ನನ್ನನ್ನ ನಾನು ತೊಡಗಿಸಿಕೊಳ್ತೇನೆ. ನಾನು ಮದುವೆ ಆದ ಮೇಲೆ ಒಳ್ಳೆ ಕಥೆ ಬಂದ್ರೆ ಸಿನಿಮಾ ಮಾಡುತ್ತೇನೆ. ಮೊದಲು ಹೆಂಡತಿಯಾಗಿ ಮಾನು ಸಕ್ಸಸ್ ಆಗುತ್ತೇನೆ. ಮದುವೆ ಆದ ಮೇಲೆ ಚಿಕ್ಕ ಬ್ರೇಕ್ ನನಗೆ ಬೇಕು. ಸದ್ಯಕ್ಕೆ ನಾನು ಮದುವೆ ಸಂಸಾರವನ್ನ ಎಂಜಾಯ್ ಮಾಡುತ್ತೇವೆ. ಮನಸುಗಳ ಮಾತು ಮಧುರ ಸಿನಿಮಾದ ಹಾಡು ನೋಡಿದಾಗಿನಿಂದ ನಾನು ಹರಿಪ್ರಿಯಾ ಅಭಿಮಾನಿ. ʻಉಗ್ರಂʼ (Ugram) ಸಿನಿಮಾ ನೋಡಿದಾಗ್ಲು ಹರಿಪ್ರಿಯಾ ಮೇಲೆ ಅಭಿಮಾನ ಹೆಚ್ಚಾಯ್ತು. ಸೂಜಿದಾರ ಸಿನಿಮಾ ನೋಡಿ ನಾನು ಕಳೆದು ಹೋಗಿದ್ದೆ ಎಂದು ಸಿಂಹ ತಿಳಿಸಿದರು.
ಇನ್ನೂ ಗುರುಹಿರಿಯರ ಸಮ್ಮುಖದಲ್ಲಿ ಇದೇ ಜನವರಿ 26ರಂದು ಮೈಸೂರಿನಲ್ಲಿ ಸಿಂಹಪ್ರಿಯಾ ಜೋಡಿ ಹಸೆಮಣೆ ಏರುತ್ತಿದ್ದಾರೆ. ಜನವರಿ 28ರಂದು ಬೆಂಗಳೂರಿನಲ್ಲಿ ಸಿನಿಮಾರಂಗ ಸ್ನೇಹಿತರಿಗೆ, ಗಣ್ಯರಿಗೆ ಆರತಕ್ಷತೆ ಇರಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k