Bengaluru CityCinemaDistrictsKarnatakaLatestMain Post

ಹೊಸ ಮನೆ ಖರೀದಿಸಿದ ನಟಿ ವೈಷ್ಣವಿ ಗೌಡ – ಅಗ್ನಿಸಾಕ್ಷಿ ಚೆಲುವೆಯ ಗೃಹ ಪ್ರವೇಶಕ್ಕೆ ದೊಡ್ಮನೆ ಮಂದಿ ಸಾಕ್ಷಿ

ನ್ನಡ ಕಿರುತೆರೆಯ ಖ್ಯಾತ ನಟಿ ಹಾಗೂ ಬಿಗ್‍ಬಾಸ್ ಸೀಸನ್-8ರ ಸ್ಪರ್ಧಿ ವೈಷ್ಣವಿ ಗೌಡ ಅವರ ಹೊಸ ಮನೆಯ ಗೃಹ ಪ್ರವೇಶ ಸಮಾರಂಭ ಭಾನುವಾರ ಅದ್ದೂರಿಯಾಗಿ ನೆರವೇರಿದೆ. ನಗರದಲ್ಲಿ ಹೊಸ ಮನೆಯನ್ನು ಖರೀದಿಸಿರುವ ವೈಷ್ಣವಿ ಗೃಹಪ್ರವೇಶ ಕಾರ್ಯಕ್ರಮ ಸಂಪ್ರದಾಯಬದ್ಧವಾಗಿ ಶಾಸ್ತ್ರೋಕ್ತವಾಗಿ ನಡೆಸಿದ್ದಾರೆ. ಈ ವಿಶೇಷ ಸಮಾರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಸೇರಿದಂತೆ ಹಲವಾರು ಕಲಾವಿದರು ಪಾಲ್ಗೊಂಡು ವೈಷ್ಣವಿ ಅವರಿಗೆ ಶುಭ ಹಾರೈಸಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳು ಹರಿದಾಡುತ್ತಿದ್ದು, ಫೋಟೋದಲ್ಲಿ ವೈಷ್ಣವಿ ರೇಷ್ಮೆ ಸೀರೆಯುಟ್ಟು ಟ್ರೆಡಿಶನಲ್ ಲುಕ್‍ನಲ್ಲಿ ಮಿಂಚಿದ್ದಾರೆ. ಕೇವಲ ಆಪ್ತರು ಮತ್ತು ಕುಟುಂಬಸ್ಥರಿಗಷ್ಟೇ ಆಹ್ವಾನಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ನಟ ರಾಜೀವ್ ಮತ್ತು ಅವರ ಪತ್ನಿ, ದಿವ್ಯ ಉರುಡುಗ, ಅರವಿಂದ್ ಕೆಪಿ, ರಘು ವೈನ್ ಸ್ಟೋರ್, ಪ್ರಶಾಂತ್ ಸಂಬರಗಿ ಸೇರಿದಂತೆ ಹಲವರು ಮಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ಬೆರಳಿಗೆ ವಜ್ರದುಂಗುರ: ಸದ್ದಿಲ್ಲದೇ ನಡೆದೇ ಹೋಯ್ತಾ ಗಿಣಿಮೂಗ ಸುಂದರಿಯ ಎಂಗೇಜ್ಮೆಂಟ್

 

View this post on Instagram

 

A post shared by Rajeev Hanu (@rajeevhanuofficial)

ಕಾರ್ಯಕ್ರಮದಲ್ಲಿ ವೈಷ್ಣವಿ ಗೌಡ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿರುವ ರಾಜೀವ್ ಅವರು, ಅಭಿನಂದನೆಗಳು ವೈಷ್ಣವಿ. ಇದು ಅದ್ಭುತವಾದ ಗೃಹಪ್ರವೇಶದ ಕಾರ್ಯಕ್ರಮವಾಗಿತ್ತು. ಇಡೀ ಕುಟುಂಬಕ್ಕೆ ಒಳ್ಳೆಯದಾಗಲಿ. ನನ್ನ ಎಲ್ಲಾ ಸ್ನೇಹಿತರನ್ನು ಭೇಟಿ ಮಾಡಿದ್ದು ತುಂಬಾ ಸಂತೋಷವಾಗಿದೆ. ಲವ್ ಯು ಆಲ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದೆಡೆ ನಟ ವಿಜಯ್ ಸೂರ್ಯ ಅವರು ಕೂಡ ವೈಷ್ಣವಿ ಗೌಡ ಅವರ ಮನೆಯ ಗೃಹ ಪ್ರವೆಶಕ್ಕೆ ಆಗಮಿಸಿ ವಿಶ್ ಮಾಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ವೈಷ್ಣವಿ ಗೌಡ ಮತ್ತು ವಿಜಯ್ ಸೂರ್ಯ ಎಲ್ಲರ ಅಚ್ಚುಮೆಚ್ಚಿನ ಜೋಡಿಯಾಗಿದ್ದರು. ರೀಲ್‍ನಲ್ಲಿ ಮಾತ್ರವಲ್ಲದೇ ರಿಯಲ್ ಲೈಫ್‍ನಲ್ಲೂ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ವಿಜಯ್ ಸೂರ್ಯ ಅವರು ಮದುವೆಯಾಗುವ ಮೂಲಕ ಗಾಸಿಪ್‍ಗಳಿಗೆ ಫುಲ್ ಸ್ಟಾಪ್ ಇಟ್ಟರು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

Leave a Reply

Your email address will not be published.

Back to top button