ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಲವು ತಿಂಗಳಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಖ್ಯಾತ ನಟಿ ನಯನತಾರಾ ಕೊನೆಗೂ ಮದುವೆ ಆಗುತ್ತಿದ್ದಾರೆ. ಅನೇಕ ದಿನಗಳಿಂದ ಈ ಜೋಡಿಯ ವಿವಾಹದ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿದ್ದವು. ಮೂರ್ನಾಲ್ಕು ಬಾರಿ ಮದುವೆ ದಿನಾಂಕ ಕೂಡ ಬಹಿರಂಗವಾಗಿತ್ತು. ಆದರೆ, ಅದೆಲ್ಲವೂ ಸುಳ್ಳಾಗಿತ್ತು. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ
ಇದೀಗ ಮತ್ತೊಂದು ದಿನಾಂಕ ನಿಗದಿಯಾಗಿದ್ದು, ಜೂನ್ 9 ಕ್ಕೆ ಈ ಜೋಡಿ ಹಸೆಮಣೆ ಏರಲಿದೆ ಎನ್ನುವುದು ಅವರ ಆಪ್ತರು ಖಚಿತ ಪಡಿಸಿರುವ ಮಾಹಿತಿ. ವಿಘ್ನೇಶ್ ಶಿವನ್ ಕುಟುಂಬ ಕೂಡ ತಿರುಪತಿಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಮಾಹಿತಿಯನ್ನು ಖಚಿತ ಪಡಿಸಿದೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?
ವಿಘ್ನೇಶ್ ಶಿವನ್ ಮತ್ತು ನಯನತಾರಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿತ್ತು. ದೇಶ ವಿದೇಶಗಳ ಸುತ್ತಾಟ, ದೇವಸ್ಥಾನಗಳಿಗೆ ಭೇಟಿ. ಖಾಸಗಿ ಸಮಾರಂಭದಲ್ಲಿ ಭಾಗಿಯಾಗಲು ಇಬ್ಬರೂ ಒಟ್ಟಾಗಿಯೇ ಹೋಗುತ್ತಿದ್ದರು. ಹಾಗಾಗಿ ಈ ಜೋಡಿ ಮುಂದೊಂದು ದಿನ ಮದುವೆಯಾಗಲಿದೆ ಎನ್ನುವ ಸುದ್ದಿಯೂ ಇತ್ತು. ಇದೀಗ ಅದನ್ನು ನಿಜವಾಗಿಸಿದ್ದಾರೆ ನಯನತಾರಾ. ಇದನ್ನೂ ಓದಿ : ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ
ನಯನಾ ತಾರಾ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್ ನ ಹೊಸ ಸಿನಿಮಾ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದ ನಿರ್ದೇಶನವನ್ನು ವಿಘ್ನೇಶ್ ಶಿವನ್ ಅವರೇ ಮಾಡಿದ್ದರು. ನಿರ್ಮಾಪಕರು ಕೂಡ ಇವರೇ ಆಗಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದೆ. ಇದೇ ಖುಷಿಯಲ್ಲೇ ಮೊನ್ನೆಯಷ್ಟೇ ತಿರುಪತಿಗೆ ನಯನಾ ತಾರಾ ಮತ್ತು ವಿಘ್ನೇಶ್ ಭೇಟಿ ನೀಡಿದ್ದರು. ಅದೇ ಸಂದರ್ಭದಲ್ಲಿ ಮದುವೆ ದಿನಾಂಕವನ್ನು ನಿಗದಿ ಮಾಡಿಸಿದ್ದಾರಂತೆ.