CinemaDistrictsKarnatakaLatestMain PostSandalwood

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

ವೀಕೆಂಡ್ ನಲ್ಲಿ ರಿಲ್ಯಾಕ್ಸ್ ಆಗಿದ್ದ ಅಭಿಮಾನಿಗಳ ಮೆದುಳಿಗೆ ಸಖತ್ ಕೆಲಸ ಕೊಟ್ಟಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ. ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಮತ್ತು ಕರಣ್ ಜೋಶಿ ಅವರೊಂದಿಗಿರುವ ಫೋಟೋ ವೈರಲ್ ಆಗಿದ್ದು, ಆತ್ಮೀಯವಾಗಿರುವ ಈ ಫೋಟೋ ಕುರಿತು ಏನೆಲ್ಲ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್ 

ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿಯಂತೂ ಹಲವು ದಿನಗಳಿಂದ ಹರಿದಾಡುತ್ತಿದೆ. ಅದಕ್ಕೆ ಪುಷ್ಠಿ ಎನ್ನುವಂತೆ ರಮ್ಯಾ ಕೂಡ ಸಿನಿಮಾ ಸಂಬಂಧಿ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಫಸ್ಟ್ ಲುಕ್, ಟ್ರೇಲರ್ ರಿಲೀಸ್, ಪ್ರಶಸ್ತಿ ಪ್ರದಾನ ಸಮಾರಂಭ ಹೀಗೆ ಸಿನಿಮಾ ರಂಗದ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ಕುರಿತೂ ಹಲವು ಮಾತುಗಳು ಕೇಳಿ ಬರುತ್ತಿವೆ.

ಕರಣ್ ಜೋಶಿ ಅವರ ಜೊತೆ ಇರುವ ರಮ್ಯಾ ಫೋಟೋ ಹಿಂದಿನ ಉದ್ದೇಶವೇನು? ಯಾರದು ಈ ಕರಣ್ ಜೋಶಿ ಹೀಗೆ ಅನೇಕ ಮಾರ್ಗದಲ್ಲಿ ಹುಡುಕಾಟ ಆರಂಭಿಸಿದ್ದಾರೆ ಅಭಿಮಾನಿಗಳು. ನಿನ್ನೆಯಷ್ಟೇ ರಮ್ಯಾ ಅವರು ಈ ಫೊಟೋವನ್ನು ಇನ್ಸ್ಟ್  ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು. ಆ ನಂತರ ರಮ್ಯಾ ಆಫೀಸಿಯಲ್ ಪೇಜ್ ನಲ್ಲೂ ಅದನ್ನು ಶೇರ್ ಮಾಡಲಾಗಿದೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ ಫೋಟೋ ಶೇರ್ ಮಾಡಿದ ಸಿಂಡ್ರೆಲಾ 

ರಮ್ಯಾ ಏನೇ ಮಾಡಿದರೂ ಅಲ್ಲೊಂದು ದೊಡ್ಡ ಸುದ್ದಿ ಆಗುತ್ತದೆ. ಹಾಗಾಗಿ ಈ ಫೋಟೋ ಕುರಿತಾಗಿಯೂ ಸಖತ್ ಸುದ್ದಿಯಾಗಿದೆ. ಆ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಅನ್ನುವುದನ್ನು ಸ್ವತಃ ರಮ್ಯಾ ಅವರೇ ಹೇಳಬೇಕಿದೆ.

Leave a Reply

Your email address will not be published.

Back to top button