ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ತುಂಬಾ ಖುಷಿ ತಂದಿದೆ: ಸುದೀಪ್

ಬೆಂಗಳೂರು: ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕನ್ನಡ ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ನನಗೆ ತುಂಬಾ ಖುಷಿಯಾಗಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಹೌದು…ಶನಿವಾರ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಹಿಂದಿ ಬಿಗ್‍ಬಾಸ್ ವೇದಿಕೆಯಿಂದ ನಟ ಸಲ್ಮಾನ್ ಖಾನ್ ಕನ್ನಡ ಬಿಗ್‍ಬಾಸ್ ಶೋನಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

“ಬಿಗ್‍ಬಾಸ್ ವೇದಿಕೆಯಿಂದ ಸಲ್ಮಾನ್ ಖಾನ್ ಸರ್ ಅವರನ್ನು ಸಂಪರ್ಕಿಸಲಾಗಿತ್ತು. ನಿಜಕ್ಕೂ ಹಿಂದಿ ಬಿಗ್‍ಬಾಸ್ ವೇದಿಕೆಯಿಂದ ಕನ್ನಡ ಬಿಗ್‍ಬಾಸ್‍ಗೆ ಇದೇ ಮೊದಲ ಬಾರಿಗೆ ವಿಡಿಯೋ ಕಾಲ್ ಬಂದಿತ್ತು. ಅದರಲ್ಲೂ ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ನನಗೆ ತುಂಬಾ ಖುಷಿ ತಂದಿದೆ. ‘ದಬಾಂಗ್3’ ಸಿನಿಮಾ ಯಾವಾಗಲು ನನಗೆ ಬಹಳ ವಿಶೇಷವಾಗಿರುತ್ತದೆ” ಎಂದು ಬರೆದುಕೊಂಡಿದ್ದಾರೆ.

ಸಲ್ಮಾನ್ ಖಾನ್ ಜೊತೆಗೆ ಪ್ರಭುದೇವ, ಸೋನಾಕ್ಷಿ ಸಿನ್ಹಾ ಕೂಡ ವಿಡಿಯೋ ಕಾಲ್ ಮೂಲಕ ಕನ್ನಡ ಬಿಗ್‍ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಸುದೀಪ್ ಬಳಿ ಕನ್ನಡವನ್ನು ಹೇಳಿಸಿಕೊಂಡು ಮಾತನಾಡಿದ್ದಾರೆ. ಜೊತೆಗೆ ಸುದೀಪ್ ಅವರನ್ನು ಹೊಗಳಿದ್ದಾರೆ.

ಸಲ್ಮಾನ್ ಖಾನ್ ಮತ್ತು ಸುದೀಪ್ ‘ದಬಾಂಗ್3’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಸಲ್ಲು ಮುಂದೆ ವಿಲನ್ ಆಗಿ ಸುದೀಪ್ ಅಬ್ಬರಿಸಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬಿಗ್‍ಬಾಸ್ ವೇದಿಕೆಯ ಮೇಲೆ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಪ್ರಭುದೇವ ಅವರು ನಿರ್ದೇಶನ ಮಾಡಿದ್ದು, ಇದೇ ಡಿಸೆಂಬರ್ 20 ರಂದು ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.

Leave a Reply

Your email address will not be published. Required fields are marked *