Districts
ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಅಪರೂಪದ ಬಿಳಿ ಜಿಂಕೆ ಪತ್ತೆ

ಮೈಸೂರು: ಚಿನ್ನದ ಬಣ್ಣದ ಜಿಂಕೆಯನ್ನು ಯಾರು ತಾನೆ ನೋಡಿಲ್ಲ? ಆದರೆ ಬಿಳಿ ಬಣ್ಣದ ಜಿಂಕೆಯನ್ನು ನೀವೆಲ್ಲಾದರೂ ನೋಡಿದ್ದಿರಾ? ಮೈಸೂರು ಜಿಲ್ಲೆಯ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಇಂತಹದ್ದೊಂದು ಅಪರೂಪದ ಬಿಳಿ ಜಿಂಕೆ ಕಾಣಿಸಿಕೊಂಡಿದೆ.
ನಾಗರಹೊಳೆ ಅರಣ್ಯ ಪ್ರದೇಶದ ಹೆಚ್.ಡಿ. ಕೋಟೆ ತಾಲೂಕಿನ ಭಾಗದ ಗಂಡತ್ತೂರು ಪ್ರದೇಶದಲ್ಲಿ ನೂರಾರು ಜಿಂಕೆಗಳ ನಡುವೆ ಈ ಬಿಳಿ ಜಿಂಕೆ ಕಾಣಿಸಿಕೊಂಡಿದೆ. ಇವತ್ತಿನವರೆಗೆ ಇಂತಹ ಬಿಳಿ ಬಣ್ಣದ ಜಿಂಕೆ ಈ ಭಾಗದಲ್ಲಿ ಎಲ್ಲೂ ಕಾಣಿಸಿರಲಿಲ್ಲ. ಜೊತೆಗೆ ಅಂತಹ ಬಣ್ಣದ ಜಿಂಕೆ ಕೂಡ ಇರಲಿಲ್ಲ. ಆದರೆ, ಈಗ ಬಿಳಿ ಬಣ್ಣದ ಜಿಂಕೆ ಸಂತತಿ ಇಲ್ಲಿ ಶುರುವಾಗಿದೆ. ಈ ಬಿಳಿ ಜಿಂಕೆಯನ್ನು ಎಲ್ಲರೂ ನೋಡಿ ಸಂಭ್ರಮಿಸುತ್ತಿದ್ದಾರೆ.
ಕಾಡಿನಲ್ಲಿ ನೀರು ಇಲ್ಲದ ಕಾರಣ ಕಬಿನಿ ಜಲಾಶಯದ ಹಿನ್ನಿರಿನಲ್ಲಿ ನೀರು ಕುಡಿಯುಲು ದಿನವೂ ನೂರಾರು ಜಿಂಕೆಗಳು ಬರುತ್ತವೆ. ಅವುಗಳ ನಡುವೆ ಈ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
