ಚಿಕ್ಕಬಳ್ಳಾಪುರ: ವಿವಾಹವಾದ ನಂತರವೂ ಪತ್ನಿ ಪ್ರಿಯಕರನ ಜೊತೆ ಪರಾರಿಯಾಗಿದ್ದಕ್ಕೆ, ಬೇಸತ್ತ ಪತಿ ತನ್ನ ಪತ್ನಿ ಸೇರಿ ಆಕೆಯ ಪ್ರಿಯಕರ ಹಾಗೂ ಪ್ರಿಯಕರನ ತಾಯಿಯನ್ನು ಹತ್ಯೆ ಮಾಡಿರೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ ಆರೋಪಿ ಪತಿ ವೆಂಕಟರೆಡ್ಡಿ ಕಾಡುಗೋಡಿ ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮೂವರನ್ನ ಕೊಂದನಾ ಪತಿ? – ಪೊಲೀಸರಿಗೆ ಇನ್ನೂ ಸಿಕ್ತಿಲ್ಲ ಸ್ಪಷ್ಟ ಮಾಹಿತಿ
Advertisement
ಪತ್ನಿ ಪ್ರೇಮಾಳನ್ನ ತಾನೇ ಕೊಲೆ ಮಾಡಿರುವುದಾಗಿ ಓಪ್ಪಿಕೊಂಡಿದ್ದಾನೆ. ಜುಲೈ 21 ರಂದು ಕಾರಿನಲ್ಲಿ ತನ್ನ ಸಂಬಂಧಿ ಬಾಬು ಹಾಗೂ ಮುಳಬಾಗಿಲು ಮೂಲದ ಸ್ನೇಹಿತ ಸುರೇಶ್ ಜೊತೆ ಸೇರಿ ಕಾರಿನಲ್ಲೇ ಪತ್ನಿ ಪ್ರೇಮಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಪತಿ ವೆಂಕಟರೆಡ್ಡಿ ಪೊಲೀಸರ ಬಳಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ.
Advertisement
Advertisement
ನಾಪತ್ತೆಯಾಗಿರೋ ಶ್ರೀನಾಥ್ ವಿಚಾರದಲ್ಲಿ ಯಾವುದೇ ಮಾಹಿತಿಯನ್ನ ನೀಡುತ್ತಿಲ್ಲ. ಆದರೆ ಶ್ರೀನಾಥ್ ತಾಯಿ ಭಾಗ್ಯಮ್ಮ ವಿಷ ಕುಡಿಯಲು ಕೂಡ ತಾನೇ ಕಾರಣ ಎಂದು ಒಪ್ಪಿಕೊಂಡಿದ್ದಾನೆ. ಪ್ರೇಮಾ ಹಾಗೂ ಶ್ರೀನಾಥ್ ಪರಾರಿಯಾದ ನಂತರ ತಾನು ಭಾಗ್ಯಮ್ಮಳ ಮನೆಗೆ ಹೋಗಿ ನಿನ್ನ ಮಗ ಎಲ್ಲಿ ಎಂದು ಪದೇ ಪದೇ ಕಿರುಕುಳ ಕೊಟ್ಟಿದ್ದೇನೆ. ಆಗ ಭಾಗ್ಯಮ್ಮ ನನ್ನೇದುರೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಳು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
Advertisement
ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಕೊಲೆ: ಅಂಬಾಜಿ ದುರ್ಗ ಬೆಟ್ಟದಲ್ಲಿ ಪತ್ತೆಯಾದ ಶವದ ಡಿಎನ್‍ಎ ಪರೀಕ್ಷೆಗೆ ಮುಂದಾದ ಪೊಲೀಸ್ರು!
ಸದ್ಯ ವೆಂಕಟರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕಾಡುಗೋಡಿ ಪೊಲೀಸರು ಮತ್ತಷ್ಟು ವಿಚಾರಣೆ ಮುಂದುವರೆಸಿದ್ದಾರೆ.