Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಕ್ತ ಸಂಗ್ರಹಿಸುತ್ತಿದ್ದಾಗ 3 ತಿಂಗಳ ಮಗು ಸಾವು – ದಾದಿ ವಿರುದ್ಧ ಪೋಷಕರ ಆಕ್ರೋಶ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | ರಕ್ತ ಸಂಗ್ರಹಿಸುತ್ತಿದ್ದಾಗ 3 ತಿಂಗಳ ಮಗು ಸಾವು – ದಾದಿ ವಿರುದ್ಧ ಪೋಷಕರ ಆಕ್ರೋಶ

Chikkaballapur

ರಕ್ತ ಸಂಗ್ರಹಿಸುತ್ತಿದ್ದಾಗ 3 ತಿಂಗಳ ಮಗು ಸಾವು – ದಾದಿ ವಿರುದ್ಧ ಪೋಷಕರ ಆಕ್ರೋಶ

Public TV
Last updated: November 7, 2022 4:48 pm
Public TV
Share
2 Min Read
chikkaballapura 2 1
SHARE

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಮೂರು ತಿಂಗಳ ಗಂಡು ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಕೋರೇನಹಳ್ಳಿ (Korenahalli) ಗ್ರಾಮದ ಗಂಗರಾಜು, ಸಂಧ್ಯಾ ದಂಪತಿಯ ಮೂರು ತಿಂಗಳ ಗಂಡು ಮಗು ಮೂತ್ರ ವಿಸರ್ಜನೆ ಸಮಸ್ಯೆ ಹಾಗೂ ಪದೇ, ಪದೇ ವಾಂತಿ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಚಿಕಿತ್ಸೆಗೆಂದು ಶನಿವಾರ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಹೃದಯ ಸಮಸ್ಯೆ ಇರಬಹುದು ಅಂತ ಜಯದೇವ ಆಸ್ಪತ್ರೆಗೆ (Jayadeva Hospital) ಕಳುಹಿಸಿ ಪರೀಕ್ಷೆಗಳನ್ನು ಮಾಡಿಸಿಕೊಂಡು ಬರಲು ತಿಳಿಸಿಲಾಗಿತ್ತು. ನಂತರ ಎಲ್ಲಾ ಪರೀಕ್ಷೆಗಳನ್ನು ನಡೆಸಿದ ಬಳಿಕ ಹೃದಯ ಸಮಸ್ಯೆ ಇಲ್ಲ ಅಂತ ವರದಿ ಬಂದಿದೆ. ಆದರೆ ತದನಂತರ ತಡರಾತ್ರಿ ಸಹ ಮಗು ಅದೇ ರೀತಿ ವಾಂತಿ ಸಮಸ್ಯೆಯಿಂದ ಪುನಃ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: EDಗೆ ಕಿರುಕುಳ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕು: ಡಿ.ಕೆ ಸುರೇಶ್

chikkaballapura 4

ಬೆಳಗ್ಗೆ ಚೆನ್ನಾಗಿಯೇ ಇದ್ದ ಮಗುವಿಗೆ ಯಾಕೆ ಪದೇ, ಪದೇ ವಾಂತಿ ಆಗುತ್ತಿದೆ ಎಂಬುದನ್ನು ಅರಿಯಲು ವೈದ್ಯರು ರಕ್ತ ಪರೀಕ್ಷೆಗೆ ಒಳಪಡಿಸಲು ತಿಳಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ದಾದಿ ರಕ್ತ ಸಂಗ್ರಹಣೆ ಮಾಡುವಾಗ ಮಗುವಿಗೆ ಏಕಾಏಕಿ ಮೂರ್ಛೆ ರೋಗದ ಲಕ್ಷಣಗಳು ಕಂಡು ಬಂದಿದೆ. ನಂತರ ದಿಢೀರನೇ ಹೃದಯ ಬಡಿತ ನಿಂತಿದ್ದು ಮಗು ಸಾವನ್ನಪ್ಪಿದೆ. ಇದರಿಂದ ಚೆನ್ನಾಗಿಯೇ ಇದ್ದ ಮಗು ರಕ್ತ ಸಂಗ್ರಹಣೆ ಮಾಡಿದ ಕಾರಣ ಸಾವನ್ನಪ್ಪಿದೆ. ಸರಿಯಾಗಿ ರಕ್ತ ತೆಗೆದುಕೊಂಡಿಲ್ಲ ಅಂತ ಪೋಷಕರು ದಾದಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

chikkaballapura 1 1

ತಮ್ಮ ಮಗು ಚೆನ್ನಾಗಿತ್ತು. ರಾತ್ರಿ ಸಿರಪ್ ಚಿಕಿತ್ಸೆ ಕೊಟ್ಟ ನಂತರ ಮೂತ್ರ ವಿಸರ್ಜನೆ ಆಗುತ್ತಿತ್ತು. ಡಿಸ್ಚಾರ್ಜ್ ಮಾಡುತ್ತೇವೆ ಅಂತ ಸಹ ವೈದ್ಯರು ಹೇಳಿದ್ದರು. ಆದರೆ ಈಗ ಏಕಾಏಕಿ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಪಾರದರ್ಶಕ ಪಕ್ಷ, ಭ್ರಷ್ಟಾಚಾರದಿಂದ ಹಣ ಸಂಗ್ರಹಿಸಿಲ್ಲ: ಸಲೀಂ ಅಹ್ಮದ್

ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ರಾಜಾರೆಡ್ಡಿ, ಮಗುವಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ಲೋಪವಾಗಿಲ್ಲ. ಸಮಪರ್ಕವಾಗಿಯೇ ಚಿಕಿತ್ಸೆ ಕೊಡಲಾಗಿದೆ. ವೈದ್ಯರ ಸೂಚನೆ ಮೇರೆಗೆ ದಾದಿ ರಕ್ತ ಸಂಗ್ರಹಣೆ ಮಾಡಿದ್ದಾರೆ. ಆದರೆ ಮಗುವಿನ ಸಾವಿಗೆ ನಿಖರ ಕಾರಣ ಏನು ಎಂಬುದು ಅರಿಯಲು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತಿಳಿಯಲಿದೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

TAGGED:BabyChikkaballapuradoctornurseparentsಚಿಕ್ಕಬಳ್ಳಾಪುರನರ್ಸ್ಪೋಷಕರುಮಗುವೈದ್ಯರು
Share This Article
Facebook Whatsapp Whatsapp Telegram

Cinema news

Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema

You Might Also Like

Udupi SI Death
Districts

ಪೊಲೀಸ್ ಮ್ಯಾರಥಾನ್ ವೇಳೆ ಕುಸಿದು ಬಿದ್ದು ಎಸ್‌ಐ ಸಾವು

Public TV
By Public TV
15 minutes ago
Ayatollah Ali Khamenei
Latest

ಪವಾಡವೇ ನಡೆದಿತ್ತು… ಬಾಂಬ್‌ ದಾಳಿಯಲ್ಲೂ ಬದುಕುಳಿದಿದ್ದ ಖಮೇನಿ – ಜೀವನದ ಪ್ರಮುಖ ಘಟ್ಟಗಳು ಹೇಗಿತ್ತು?

Public TV
By Public TV
20 minutes ago
UAE Ballistic Missiles
Latest

ಗಲ್ಫ್ ರಾಷ್ಟ್ರಗಳ ಮೇಲೆ ಸಮರ ಸಾರಿದ ಇರಾನ್‌ – ಯುಎಇ ಮೇಲೆ 208 ಡ್ರೋನ್‌, 137 ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ

Public TV
By Public TV
47 minutes ago
Dubai Kannadigas
Bellary

Iran Israel War | 50ಕ್ಕೂ ಹೆಚ್ಚು ಕನ್ನಡಿಗರು ದುಬೈ, ಬಹ್ರೇನ್‌ನಲ್ಲೇ ಲಾಕ್‌

Public TV
By Public TV
1 hour ago
Iran Women Celebration On Ayatollah Ali Khamenei Death
Latest

ಇರಾನ್ ಸರ್ವೋಚ್ಛ ನಾಯಕನ ಹತ್ಯೆ – ಖಮೇನಿ ಸಾವನ್ನ ಸಂಭ್ರಮಿಸಿದ ಇರಾನ್ ಮಹಿಳೆಯರು

Public TV
By Public TV
2 hours ago
iran israel war
Latest

30 ಬಾಂಬ್‌ಗಳಿಂದ ದಾಳಿ – ತನ್ನ ಮನೆಯಲ್ಲೇ ಖಮೇನಿ ಹತ್ಯೆಗೆ ಅಮೆರಿಕ-ಇಸ್ರೇಲ್‌ ರೂಪಿಸಿದ್ದ ರಣತಂತ್ರ ಹೇಗಿತ್ತು?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?