Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗಾಳಿಯ ಗುಣಮಟ್ಟ ಹೆಚ್ಚಿಸಲು 6 ವಾಹನ ಖರೀದಿಗೆ ಮುಂದಾದ ಬಿಬಿಎಂಪಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಗಾಳಿಯ ಗುಣಮಟ್ಟ ಹೆಚ್ಚಿಸಲು 6 ವಾಹನ ಖರೀದಿಗೆ ಮುಂದಾದ ಬಿಬಿಎಂಪಿ

Bengaluru City

ಗಾಳಿಯ ಗುಣಮಟ್ಟ ಹೆಚ್ಚಿಸಲು 6 ವಾಹನ ಖರೀದಿಗೆ ಮುಂದಾದ ಬಿಬಿಎಂಪಿ

Public TV
Last updated: July 12, 2021 6:44 pm
Public TV
Share
3 Min Read
improve air quality BBMP will purchase 6 vehicles Bengaluru 2 e1626094902162
SHARE

ಬೆಂಗಳೂರು: ನಗರದ ವಾಯುಮಾಲಿನ್ಯ ಕಡಿಮೆ ಮಾಡಿ, ಗಾಳಿಯ ಗುಣಮಟ್ಟ ಹೆಚ್ಚಿಸಲು ವಾಹನ ಖರೀದಿಗೆ ಬಿಬಿಎಂಪಿ ಮುಂದಾಗಿದೆ.

ರಸ್ತೆ ಕಾಮಗಾರಿಗಳು, ಕಟ್ಟಡ ಕಾಮಗಾರಿಗಳು, ಹೆಚ್ಚು ವಾಹನಗಳು ಓಡಾಡುವ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಪ್ರತ್ಯೇಕ ವಾಹನದ ಮೂಲಕ ನೀರನ್ನು ಸ್ಪ್ರೇ ಮಾಡಲು ಆರು ವಾಹನಗಳ ಖರೀದಿಗೆ ಬಿಬಿಎಂಪಿ ಮುಂದಾಗಿದ್ದು, ಇನ್ನೆರಡು ವಾರದಲ್ಲಿ ಈ ವಾಹನಗಳು ರಸ್ತೆಗಿಳಿಯಲಿವೆ.

ಈಗಾಗಲೇ ಕೋವಿಡ್ ಮೊದಲನೇ ಅಲೆಯಲ್ಲಿ ಆರೋಗ್ಯ ವಿಭಾಗ ಖರೀದಿಸಿದ್ದ ಎರಡು ಸ್ಯಾನಿಟೈಸೇಷನ್ ವಾಹನಗಳನ್ನು ಘನತ್ಯಾಜ್ಯ ಹಾಗೂ ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಹಸ್ತಾಂತರಿಸಿದ್ದು, ಈಗಾಗಲೇ ನಗರದ ರಸ್ತೆಗಳಲ್ಲಿ ನೀರು ಚಿಮ್ಮಿಸುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ.

improve air quality BBMP will purchase 6 vehicles Bengaluru 1 medium

ಪಂಪ್ ಮೂಲಕ ಹೆಚ್ಚಿನ ಒತ್ತಡದಲ್ಲಿ ನೀರನ್ನು ಚಿಮ್ಮಿಸಿ, ಆ ಮೂಲಕ ಗಾಳಿಯಲ್ಲಿರುವ ಧೂಳನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: ಸಮುದ್ರದ ಅಬ್ಬರಕ್ಕೆ ಕೊಚ್ಚಿ ಹೋದ ಮರಗಳು – ರಾಯಚೂರಿನಲ್ಲಿ ಹಳ್ಳಕೊಳ್ಳಗಳು ಭರ್ತಿ

ನೀರು ಚಿಮ್ಮಿಸುವ ವಾಹನಗಾಳಿಯಲ್ಲಿರುವ ಬಿಡಿ ಧೂಳಿನ ಕಣ (ಸಸ್ಪೆಂಡೆಡ್ ಪಾರ್ಟಿಕ್ಯುಲೇಟ್ ಮ್ಯಾಟರ್) ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅಲ್ಲದೇ 6 ವಾಹನಗಳ ಖರೀದಿಗೆ 1 ಕೋಟಿ 80 ಲಕ್ಷ ರೂ. ಅನುದಾನವನ್ನು ಪಾಲಿಕೆಗೆ ಬಿಡುಗಡೆ ಮಾಡಿದೆ.

improve air quality BBMP will purchase 6 vehicles Bengaluru 2 medium

ವಾಹನವೊಂದಕ್ಕೆ 24 ಲಕ್ಷ ರೂ. ಖರೀದಿ ವೆಚ್ಚ ಹಾಗೂ 6 ಲಕ್ಷ ರೂ. ವರ್ಷದ ನಿರ್ವಹಣೆಗೆ ವೆಚ್ಚ ಮಾಡಲಾಗುತ್ತದೆ. ಈಗಿರುವ ಎರಡು ವಾಹನಗಳಿಂತಲೂ ಹೆಚ್ಚು ಅಭಿವೃದ್ಧಿ ಹೊಂದಿರುವ ವಾಹನಗಳಾಗಿವೆ. ಸದ್ಯ ಇರುವ ಎರಡು ವಾಹನಗಳನ್ನು ಕೋವಿಡ್ ಸಮಯದಲ್ಲಿ ಸ್ಯಾನಿಟೈಸೇಷನ್ ಮಾಡಲು 1.2 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿತ್ತು. ಸದ್ಯ ಸ್ಯಾನಿಟೈಸೇಷನ್ ಉಪಯುಕ್ತವಲ್ಲದ ಕಾರಣ ಧೂಳು ಕಡಿಮೆ ಮಾಡುವ ಉದ್ದೇಶಕ್ಕೆ ಬಳಸಲಾಗ್ತಿದೆ.

ವಾಹನಗಳ ಮೂಲಕ ರಸ್ತೆಗಳಲ್ಲಿ ನೀರನ್ನು ಸ್ಪ್ರೇ ಮಾಡಲು, ಜಲಮಂಡಳಿ ಸಂಸ್ಕರಿಸಿದ ತ್ಯಾಜ್ಯ ನೀರನ್ನೇ ಮರುಬಳಕೆ ಮಾಡಲಾಗ್ತಿದೆ. ಕಬ್ಬನ್ ಪಾರ್ಕ್ ನಲ್ಲಿ ಅಳವಡಿಸಿರುವ ಎಸ್‍ಟಿಪಿ ನೀರನ್ನು ಸದ್ಯ ಬಳಸಿಕೊಳ್ಳಲಾಗ್ತಿದೆ ಎಂದು ರಸ್ತೆ ಮೂಲಭೂತ ಸೌಕರ್ಯದ ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದರು. ವಾಹನಗಳ ಮೂಲಕ ನೀರು ಚಿಮ್ಮಿಸಿ ಧೂಳು ಕಡಿಮೆ ಮಾಡುವುದರ ಜೊತೆಗೆ ನಗರದ 40 ಜಂಕ್ಷನ್ ಗಳಲ್ಲಿ ನೀರಿನ ಕಾರಂಜಿ ನಿರ್ಮಾಣ ಮಾಡುವ ಯೋಜನೆಗೂ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದ್ದು, ನಂತರ ಟೆಂಡರ್ ಕರೆಯಲಾಗುತ್ತದೆ.

improve air quality BBMP will purchase 6 vehicles Bengaluru 3 medium

ಮಾಲಿನ್ಯ ತಗ್ಗಿಸಲು ಈ ಯೋಜನೆ ಎಷ್ಟು ಉಪಕಾರಿ? ಪರಿಸರ ತಜ್ಞರ ಪ್ರಕಾರ ಸರ್ಕಾರಗಳ ಈ ಯೋಜನೆಗಳು ಮಾಲಿನ್ಯ ತಗ್ಗಿಸುವಲ್ಲಿ ಹೆಚ್ಚು ಪ್ರಯೋಜನವಾಗಲಾರದು. ಇದು ಕೇವಲ ಹಣ ಖರ್ಚು ಮಾಡುವ ಯೋಜನೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಈಗಾಗಲೇ ಕಟ್ಟಡ ಕಾಮಗಾರಿ ನಡೆಯುವ ಜಾಗದಲ್ಲಿ, ಕ್ವಾರಿಗಳು, ಗಣಿಗಾರಿಕೆ ಜಾಗಗಳಲ್ಲಿ ಸಣ್ಣ ಧೂಳಿನ ಕಣಗಳನ್ನು ಕಡಿಮೆ ಮಾಡಲು, ಧೂಳು ಹರಡದೇ ಇರಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಸಾಕಷ್ಟು ಟ್ರಾಫಿಕ್ ಜಾಂ ಇರುವ ನಗರದಲ್ಲಿ ವಾಹನಗಳ ಮೂಲಕ ರಸ್ತೆಯಲ್ಲಿ ಈ ರೀತಿ ನೀರು ಚಿಮ್ಮಿಸುವುದು ಎಷ್ಟು ಪ್ರಮಾಣದಲ್ಲಿ ಪರಿಣಾಮಕಾರಿಯಾಗಬಹುದು.

improve air quality BBMP will purchase 6 vehicles Bengaluru 1 medium

ಗಾಳಿಯಲ್ಲಿನ ಧೂಳಿಗೆ ನೀರು ಚಿಮ್ಮಿಸಿದಾಗ ನೆಲಮಟ್ಟಕ್ಕೆ ಬಂದರೂ, ಮತ್ತೆ ವಾಹನಗಳು ಓಡಾಡುವುದರಿಂದ ಧೂಳು ಏಳುವ ಸಾಧ್ಯತೆ ಇರುತ್ತದೆ. ನೀರಿನ ಕಾರಂಜಿಗಳಿಂದಲೂ ಇದು ಅಸಾಧ್ಯ. ಪರಿಸರ ರಕ್ಷಣೆಯನ್ನು ಅದಕ್ಕೆ ಪೂರಕವಾದ ವಿಧಾನಗಳಿಂದಲೇ ಅಂದರೆ ಕೆರೆ ಸಂರಕ್ಷಣೆ, ಗಿಡ ನೆಡುವುದರಿಂದ ಮಾತ್ರ ಉಳಿಸಲು ಸಾಧ್ಯ ಎಂದು ಹೆಸರು ಹೇಳಲು ಇಷ್ಟ ಪಡದ ಹಿರಿಯ ಪರಿಸರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆರೆಗಳು, ಮರಗಳು ವಾತಾವರಣವನ್ನು ತಂಪು ಇಡುವಲ್ಲಿ ಸಹಕಾರಿ. ಆದರೆ ನಗರದಲ್ಲಿ ಮರಗಳ ನಾಶದಿಂದ ನಗರದ ಉಷ್ಣಾಂಶ ಏರಿಕೆಯಾಗುತ್ತಲೇ ಇದೆ. ಇದರಿಂದಾಗಿ (ಹೀಟ್ ಲ್ಯಾಂಡ್ ಪರಿಣಾಮದಿಂದ) ಬಿಸಿ ಗಾಳಿ ಹಗುರವಾಗಿದ್ದು, ಇದರೊಂದಿಗೆ ಧೂಳು ಸೇರಿ ವಾತಾವರಣದಲ್ಲಿ ಹೆಚ್ಚು ವಾಯುಮಾಲಿನ್ಯವಾಗಲು ಕಾರಣವಾಗುತ್ತದೆ. ಪ್ರಕೃತಿದತ್ತವಾಗಿ ವಾತಾವರಣ ತಂಪಾಗಿದ್ದರೆ ಈ ವಾತಾವರಣದ ಗಾಳಿ ಭಾರವಾಗಿ ಇರುವುದರಿಂದ ಧೂಳಿನ ಪ್ರಮಾಣವೂ ಕಡಿಮೆ ಇರುತ್ತದೆ ಎಂದು ಅವರು ವಿವರಿಸಿದರು. ಒಟ್ಟಿನಲ್ಲಿ ಪರಿಸರ ರಕ್ಷಣೆ ಹೆಸರಲ್ಲಿ ಸರ್ಕಾರ, ಸ್ಥಳೀಯ ಆಡಳಿತಗಳು ದುಂದು ವೆಚ್ಚಕ್ಕೆ ಮುಂದಾಗುತ್ತಿವೆಯಾ ಎಂಬ ವಾದಗಳೂ ಕೇಳಿಬಂದಿವೆ.

TAGGED:air pollutionbbmpbengaluruvehicleಬಿಬಿಎಂಪಿಬೆಂಗಳೂರುವಾಯು ಮಾಲಿನ್ಯವಾಹನ
Share This Article
Facebook Whatsapp Whatsapp Telegram

Cinema news

mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories
samhita vinya
ಲಕ್ಕಿ ಹೀರೋಯಿನ್ ಸಂಹಿತಾ ವಿನ್ಯಾ ಮಿಂಚಿಂಗು
Cinema Latest Sandalwood Top Stories
Rakshita Prem and saptami gowda
ಪಾಪರಾಜಿಗಳ ವಿರುದ್ಧ ಸಿಡಿದೆದ್ದ ಚಂದನವನದ ತಾರೆಯರು
Cinema Latest Sandalwood Top Stories
Rashmika Mandanna Vijay Deverakonda Wedding
ರಶ್ಮಿಕಾ ಗೃಹಲಕ್ಷ್ಮಿಯಾದ ಖುಷಿಯಲ್ಲಿ ಬಡವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಘೋಷಿಸಿದ ವಿಜಯ್ ದೇವರಕೊಂಡ
Cinema Latest Sandalwood South cinema Top Stories

You Might Also Like

Puneet MANGALURU
Crime

ಕಾಲ್, ಮೆಸೇಜ್‍ಗೆ ಪ್ರೇಯಸಿಯಿಂದ ನೋ ರಿಪ್ಲೈ – ಸೋಮೇಶ್ವರದ ಯುವಕ ಒಮನ್‍ನಲ್ಲಿ ಆತ್ಮಹತ್ಯೆ

Public TV
By Public TV
3 minutes ago
Donald Trump 2
Latest

ಹಾರ್ಮೂಜ್‌ ಬಿಕ್ಕಟ್ಟಿನ ಬಗ್ಗೆ ದೊಡ್ಡ ನಿರ್ಧಾರ – ತೈಲ ಟ್ಯಾಂಕರ್‌ಗಳಿಗೆ ರಕ್ಷಣೆ ನೀಡುವಂತೆ ಟ್ರಂಪ್‌ ಆದೇಶ

Public TV
By Public TV
1 hour ago
Madhu Bangarappa Birthday free flights for civil servants government school children
Districts

ಸಚಿವ ಮಧು ಬಂಗಾರಪ್ಪ ಜನ್ಮದಿನ – ಪೌರಕಾರ್ಮಿಕರು, ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ವಿಮಾನಯಾನ

Public TV
By Public TV
2 hours ago
Udupi Malpe Fishermen Leader Stabbed
Crime

ಪ್ರೇಮ ಪ್ರಕರಣ ರಾಜಿ ಪಂಚಾಯ್ತಿ ವೇಳೆ ಮಲ್ಪೆ ಮೀನುಗಾರರ ಮುಖಂಡನಿಗೆ ಚಾಕು ಇರಿತ

Public TV
By Public TV
2 hours ago
Nanjangudu 1
Districts

Video Viral | ನಂಜನಗೂಡು ದೇವಸ್ಥಾನದ ದಾಸೋಹ ಭವನದ ಬಳಿ ಮಾಂಸಹಾರ ಸೇವನೆ

Public TV
By Public TV
2 hours ago
Congress MLAs return from foreign tour
Bengaluru City

ಆಸ್ಟ್ರೇಲಿಯಾ ಪ್ರವಾಸದಿಂದ ಕಾಂಗ್ರೆಸ್ ಶಾಸಕರು ವಾಪಸ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?