ಚಾಮರಾಜನಗರ: ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಹೊರವಲಯದಲ್ಲಿರುವ ಮುಡಿಗುಂಡ ಸೇತುವೆ ಬಳಿ ರಾತ್ರಿ ಭೀಕರ ಕಾರು ಅಪಘಾತ (Car Accident) ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಕೊಳ್ಳೇಗಾಲ ನ್ಯಾಯಾಲಯ (Kollegala Court) ಶಿರಸ್ತೆದಾರ ನಂಜುಂಡಪ್ಪ ಹಾಗೂ ಸಿಬ್ಬಂದಿ ಯಮುನಪ್ಪ ಎಂದು ಹೇಳಲಾಗುತ್ತಿದ್ದು, ಕಾರಿನಲ್ಲಿದ್ದ ಕೃಷ್ಣಪ್ಪ, ಲೋಕೇಶ್ ಹಾಗೂ ಶಂಕರಪ್ಪ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆ ಸಲುಗೆ ಬೆಳೆಸಿದ್ದಕ್ಕೆ ಮಹಿಳೆಯ ಖಾಸಗಿ ಫೋಟೋ ವೈರಲ್ ಬೆದರಿಕೆ – ಸ್ನೇಹಿತೆ ಅರೆಸ್ಟ್

ಘಟನಾಸ್ಥಳಕ್ಕೆ ಪಟ್ಟಣ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ, ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ: ಅಡ್ಡ ಮತದಾನದ ಬಗ್ಗೆ ಮೊದಲೇ ಮಾಹಿತಿ ಇತ್ತು, ಪರೀಕ್ಷಿಸಲೆಂದೇ ಅಭ್ಯರ್ಥಿ ಹಾಕಿದೆ: ಹೆಚ್‌ಡಿಕೆ
