ಕಳೆದುಹೋದ ಗೆಳತಿಗೆ
ಇವತ್ತು ಯಾವುದೋ ಕೆಲಸದ ಮೇಲೆ ನಾನು ಓದಿದ ಕಾಲೇಜಿನ ದಾರಿಯಲ್ಲಿ ಹೋಗಿದ್ದೆ. ಸುಮಾರು 20 ವರ್ಷಗಳೇ ಕಳೆದಿದ್ವು, ಆ ದಾರಿಯಲ್ಲಿ ಓಡಾಡದೆ. ಅಲ್ಲಿ ಎಷ್ಟೊಂದು ನೆನಪುಗಳಿವೆ ಅಲ್ವಾ ನಮ್ಮಿಬ್ಬರದ್ದು. ಆ ನೆನಪಿನ ಪುಸ್ತಕದ ಪುಟಗಳೆಲ್ಲ ಇವತ್ತು ಒಂದೊಂದೇ ಆಗಿ ತೆರೆದ್ಕೊಂಡ್ವು.
ಆ ರಸ್ತೆಯ ಪಕ್ಕದಲ್ಲಿದ್ದ ಗುಲ್‌ಮೊಹರ್ ಮರಗಳು ಹೂ ಬಿಟ್ಟಾಗ ನೀನು ಸೈಕಲ್ ತುಳಿದ್ಕೊಂಡು ಬರ್ತಿದ್ರೆ, ಉದ್ಯಾನವನದಲ್ಲಿ ರಾಜಕುಮಾರಿನೇ ಬರ್ತಿರೋ ಹಾಗೆ ಕಾಣ್ತಿತ್ತು. ಅದನ್ನ ನೋಡೋಕೆ ಅಂತಾನೆ ನಾನು ಮೊದಲೇ ಬಂದು ಕಾದು ನಿಂತಿರ್ತಿದ್ದೆ. ಆಗ ಮನಸ್ಸಿಗೆ ಬರ್ತಿದ್ದ ಹಾಡು ನನಗೆ ಈಗಲೂ ಫೇವರೆಟ್! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
“ಬಹಾರೋ ಫೂಲ್.. ಬರಸಾವೋ, ಮೇರಾ ಮೆಹಬೂಬ್ ಆಯಾಹೆ
ಮೇರಾ ಮೆಹಬೂಬ್ ಆಯಾಹೆ…”

ಕವಿ `ಹಸ್ರತ್ ಜೈಪುರಿ’ ಅದೆಷ್ಟು ಸೊಗಸಾದ ಸಾಲುಗಳನ್ನ ಬರೆದಿದ್ದಾರೆ ಅಲ್ವಾ? ಬಹುಶಃ ಪ್ರತಿ ಪ್ರೇಮಿಯೂ ತನ್ನ ಗೆಳತಿಗಾಗಿ ಪ್ರಕೃತಿ ಜೊತೆ ಹೀಗೆ ಬೇಡ್ಕೊಳ್ತಾನೇನೋ? ನಾನಂತೂ ನಿನ್ನ ಪ್ರತಿ ಹೆಜ್ಜೆಗೂ ಹೀಗೆ ಹೂಗಳೇ ಇರಲಿ ಅಂತಾನೇ ಬಯಸೋದು.
ಇವತ್ತು ಆ ರಸ್ತೆಯಲ್ಲಿ ನಿಂತಾಗ ನೀನೇ ಬಂದಂಗೆ ಅನ್ಸೋದು. ಇನ್ನೇನೂ ಬಂದು ಹೆಸರು ಕೂಗ್ತೀಯಾ ಅಂತೆಲ್ಲ ಫೀಲ್ ಆಗೋದು. ಆ ದಿನಗಳೆಲ್ಲ ಮತ್ತೆ ಬಂದಿದ್ರೆ ಎಷ್ಟು ಚೆಂದ ಅಲ್ವಾ? ಈಗಿನ ಹಾಗೇ ಅವತ್ತು ಮೊಬೈಲ್ ಇದ್ದಿದ್ರೆ, ಬಹುಶಃ ಸಂಪರ್ಕದಲ್ಲಾದ್ರೂ ಇರ್ತಿದ್ವೋ ಏನೋ? ಆದ್ರೆ ಈಗ ಅದ್ಯಾವುದೂ ಇಲ್ಲ. ಇದನ್ನೂ ಓದಿ:ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಉಳಿದಿದ್ದು ನಿನ್ನ ನೋಡಿದ ನೆನಪು. ಮಾತಾಡಿದ ಮಾತುಗಳು.. ನೀನು ಕೊನೆಯದಾಗಿ ಮುನಿಸಿಕೊಂಡು ಮಾತಾಡದೇ ಹೊರಟಿದ್ದು, ಕಾಲೇಜಿಗೆ ಗುಡ್ ಬೈ ಹೇಳುವಾಗ ಆಡದೆ ಉಳಿದು ಹೋದ ಮಾತುಗಳು ಇಷ್ಟೇ..!
ಆಕಸ್ಮಾತ್ ಈ ಸಾಲುಗಳು ನಿನ್ನೆದೆಗೆ ತಲುಪಿದ್ರೆ ಒಂದು ಪತ್ರ ಬರಿಯೋದು ಮರಿಬೇಡ. ಇದನ್ನೂ ಓದಿ: ಮನಸ್ಸಿಗೆ ತುಂಬಾ ಇಷ್ಟವಾದವನು ನೀನು..!
ನಿನ್ನ ಪತ್ರದ ನಿರೀಕ್ಷೆಯಲ್ಲಿ
