ಒಲವಿನ ಗೆಳೆಯನೆ,
ನೀನು ಎಕ್ಸಾಂನಲ್ಲಿ ನನ್ನ ಪಕ್ಕದಲ್ಲೇ ಕೂತಿದ್ದೆ. ಪ್ರತಿ ಎಕ್ಸಾಂಗೂ ನೀನು ಬಂದಿರ್ತೀಯ ಅಂತ ನಾನು ಮೊದಲೇ ಹೋಗಿ ಕೂತಿರ್ತಿದ್ದೆ. ಆದ್ರೆ ಆರೂ ಎಕ್ಸಾಮ್‌ಗೂ ನೀನು ಲೇಟಾಗಿನೇ ಬಂದೆ. ಎಕ್ಸಾಂ ಹಾಲ್‌ಗೆ ಬಂದವನೇ ಒಂದು ಸ್ಮೈಲ್ ಮಾಡಿ ಕೂತ್ರೆ, ಮತ್ತೆ ಎಕ್ಸಾಂ ಮುಗಿಸಿ ಹೋಗ್ಬೇಕಾದ್ರೆ ಬಾಯ್ ಹೇಳೋ ಲುಕ್ ಕೊಡ್ತಿದ್ದೆ.
ನೀನು ಪರಿಚಯ ಆಗಿ ಬರೀ ಆರೇ ಎಕ್ಸಾಂ ಕಳೆದಿದ್ದು. ಅಂದ್ರೆ ಒಂದು ತಿಂಗಳು.. ಯಾಕೋ ತುಂಬಾ ಇಷ್ಟ ಆದೆ. ಕೊನೇ ಎಕ್ಸಾಂ ಮುಗಿಸಿ ಬರಬೇಕಾದ್ರೆ ನಿನ್ನನ್ನ ಎಲ್ಲೋ ಕಳೆದುಕೊಂಡು ಬಿಡ್ತಿನಿ ಅಂತ ಅನ್ಸೋದಕ್ಕೆ ಶುರುವಾಗಿತ್ತು. ನನ್ನೊಳಗೆ ಯಾರ ಮೇಲೂ ಈ ರೀತಿಯ ಭಾವನೆ ಯಾವಾಗಲೂ ಕಾಡಿಲ್ಲ. ಲಾಸ್ಟ್ ದಿನ ನಿನ್ನ ಮಾತಾಡಿಸ್ಬೇಕು, ಯಾವ್ ಊರು ನಿಂದು? ಮೊಬೈಲ್ ನಂಬರ್ ಕೊಡು. ನೆಕ್ಸ್ಟ್ ಡಿಗ್ರಿಗೆ ಯಾವ ಕಾಲೇಜಿಗೆ ಆಡ್ಮೀಷನ್ ಆಗ್ತಿಯ ಅಂತ ಕೇಳೋಕೆ ನಾನೊಂದು ಕ್ವಷನ್ ಪೇಪರ್‌ನೇ ರೆಡಿ ಮಾಡ್ಕೊಂಡಿದ್ದೆ. ಆದ್ರೇ ನಿನ್ನ ಫ್ರೆಂಡ್ಸ್ ಎಲ್ಲಾ ಜೊತೆಲೇ ಇದ್ರೂ, ನನ್ನ ಫ್ರೆಂಡ್ಸ್ ಅಷ್ಟೇ ನನ್ನ ಹಿಂದೆ ಮುಂದೆನೇ ಸುತ್ತಾಡ್ತಿದ್ರು. ಅದಕ್ಕೆ ಅದೆಲ್ಲ ಕೇಳೋಕಾಗಲೇ ಇಲ್ಲ. ಇದನ್ನೂ ಓದಿ: ಒಪ್ತಿದ್ನೋ.. ಬಿಡ್ತಿದ್ನೋ.. ನೀನು ನನಗೆಲ್ಲಾ ಹೇಳ್ಬಿಡ್ಬೇಕಿತ್ತು..!

ನಿನ್ನ ಕಣ್ಣಲ್ಲೂ ನನ್ನ ಜೊತೆ ಏನೋ ಮಾತಾಡ್ಬೇಕು ಅನ್ನೋ ಚಡಪಡಿಕೆ ಎದ್ದು ಕಾಣ್ತಿತ್ತು. ನೀನು ಹೋಗ್ಬೇಕಾದ್ರೆ ನೋಡಿದ ಕೊನೆಯ ನೋಟ, ಆ ಮುಗುಳ್ನಗು, ಡಿಫರೆಂಟ್ ಹೇರ್ ಸ್ಟೈಲ್ ಎಲ್ಲಾ ಇನ್ನೂ ಕಣ್ಣಲ್ಲೇ ಇದೆ.
ಈಗೀಗಂತೂ ದಿನ ಕನಸಲ್ಲಿ ಬಂದು ಅದೆಷ್ಟು ಅಂತ ನಿದ್ರೆ ಕದಿತಿಯ ನೀನು? ಮತ್ತೆ ಸಿಗಬಾರದಾ? ಎಷ್ಟೋ ಸಲ ಅಂದ್ಕೋತಿನಿ, ಹೀಗೆ ದಾರಿಲಿ ಹೋಗುವಾಗ ತಕ್ಷಣ ನೀನು ಎದುರಿಗೆ ಬಂದಿದ್ರೆ ಅಂತ.. ನಿನಗೂ ಹೀಗೆಲ್ಲ ಅನ್ನಿಸ್ತಿರಬಹುದೇನೋ ಅನ್ನೋ ಕಲ್ಪನೆ ಅದೆಷ್ಟೋ ಹಿತ ನನಗೆ! ಪ್ರೀತಿಯ ತಳಮಳ ಇದೇನಾ?
ಮನಸ್ಸಿಗೆ ತುಂಬಾ ಇಷ್ಟವಾದವನು ನೀನು. ನಿನ್ನನ್ನ ಪಡೆದಕೊಳ್ಳೊಕೆ ಎಂತ ಹೋರಾಟ ಆದ್ರೂ ಮಾಡ್ಬೇಕು ಅನ್ನೋ ಹುಚ್ಚು ಈ ಹೃದಯಕ್ಕೆ. ಈಗ ನನ್ನ ಪಾಲಿಗೆ ಉಳಿದಿರೋದು ಪ್ರಾರ್ಥನೆ ಮಾತ್ರ. ಅದನ್ನೇ ಪ್ರಾಮಾಣಿಕವಾಗಿ ಮಾಡ್ತೀನಿ..!

ದೇವ್ರೆ ಅವನು ತುಂಬಾ ಒಳ್ಳೆಯವನು ಅಂತ ನನ್ನ ಮನಸ್ಸಿಗೆ ಅನ್ನಿಸ್ತಿದೆ. ನೀನೇ ಅವನನ್ನ ಪರಿಚಯ ಮಾಡಿದಿಯ ಅಂತ ಫೀಲ್ ಆಗ್ತಿದೆ. ಕೊನೆ ತನಕ ನನ್ನ ಜೊತೆ ಅವನಿರೋ ಹಾಗೇ ಆಶೀರ್ವಾದ ಮಾಡ್ತೀಯಾ? ಇದುವರೆಗೂ ಯಾವ ಬೇಡಿಕೆನೂ ನಿನ್ನ ಮುಂದೆ ಇಟ್ಟವಳಲ್ಲ ನಾನು. ಈ ಪ್ರಾರ್ಥನೆನ ಈಡೇರಿಸ್ತಿಯ ಅನ್ನೋ ಬಲವಾದ ನಂಬಿಕೆ ಮೇಲೆ ಹೃದಯದಲ್ಲಿ ಅವನ ಆರಾಧನೆ ಆರಂಭಿಸ್ತಿದಿನಿ..! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ಸದಾ ನಿನ್ನನ್ನೇ ಹಂಬಲಿಸುವವಳು



