Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯಡಿಯೂರಪ್ಪಗೆ ಬದ್ಧತೆ ಇಲ್ಲ- ವಾಟಾಳ್ ಕಿಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಯಡಿಯೂರಪ್ಪಗೆ ಬದ್ಧತೆ ಇಲ್ಲ- ವಾಟಾಳ್ ಕಿಡಿ

Bengaluru City

ಯಡಿಯೂರಪ್ಪಗೆ ಬದ್ಧತೆ ಇಲ್ಲ- ವಾಟಾಳ್ ಕಿಡಿ

Public TV
Last updated: January 18, 2021 11:30 am
Public TV
Share
3 Min Read
VATAL 3
SHARE

– ಎಂಇಎಸ್ ಅವರನ್ನು ಗಡಿಪಾರು ಮಾಡಬೇಕು
– ಈ ರಾಜ್ಯ ದಿಕ್ಕೆಟ್ಟು ಹೋಗಿದ್ಯಾ..?

ಬೆಂಗಳೂರು: ರಾಜ್ಯದಲ್ಲಿ ಕನ್ನಡದ ಬಗ್ಗೆ ಅಭಿಮಾನ ಇರುವಂತಹ ಸರ್ಕಾರ ಇಲ್ಲ. ಈಗ ಏನಿದ್ದರೂ ಬಿಜೆಪಿ ಹಾಗೂ ಹಿಂದಿ ಪರ ಇರುವ ಸರ್ಕಾರ. ಯಡಿಯೂರಪ್ಪನವರಿಗೆ ಪ್ರಾಮಾಣಿಕತೆ ಇಲ್ಲ. ಬದ್ಧತೆ ಇದ್ದಿದ್ದರೆ ನಿನ್ನೆ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ಜೊತೆ ನೇರವಾಗಿ ಮಾತನಾಡಬೇಕಿತ್ತು, ಯಾವುದೂ ಮಾತಾಡಿಲ್ಲ. ಅಲ್ಲಿ ಬಿಜೆಪಿಯವರಿಗೆ ಮರಾಠಿಗರ ವೇಷ-ಭೂಷಣಗಳನ್ನು ಹಾಕಿ ಸಭೆಯೆಲ್ಲ ಸಂಪೂರ್ಣ ಮರಾಠಿ ಸಭೆಯಂತಿತ್ತು. ಅಲ್ಲದೆ ಬಿಎಸ್‍ವೈ ಅವರು ಮಾತನಾಡುವಾಗ ಉದ್ಧವ್ ಠಾಕ್ರೆ ಬಗ್ಗೆ ಒಂದು ಅಕ್ಷರ ಕೂಡ ಮಾತಾಡಿಲ್ಲ. ಬೆಳಗಾವಿ, ಕನ್ನಡಗರ, ರಾಜಕರಾಣಿಗಳ ಬಗ್ಗೆ ಮಾತನಾಡಿಲ್ಲ ಎಂದು ಕನ್ನಡಪರ ಸಂಘಟನೆಯ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

VATAL

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಉಳಿಸಿಕೊಳ್ಳಲು ಪಕ್ಷಾಂತರ ಮಾಡಿಸಿದರು. ಮರಾಠಿ ಪ್ರಾಧಿಕಾರ ಮಾಡಲು ಬಿಎಸ್‍ವೈಗೆ ಅಧಿಕಾರ ಕೊಟ್ಟವರು ಯಾರು..?. ನೀವು ಯಾಕೆ ಇಂದು ಉದ್ಧವ್ ಠಾಕ್ರೆ ಬಗ್ಗೆ ಮಾತಾಡ್ತಿಲ್ಲ. ನಿಮ್ಮ ಸಂಸದರು, ಶಾಸಕರು, ಮಂತ್ರಿಗಳು ಎಲ್ಲಿ ಹೋಗಿದ್ದಾರೆ. ಈ ರಾಜ್ಯ ದಿಕ್ಕೆಟ್ಟು ಹೋಗಿದ್ತ್ಯಾ? ಏನಾಗ್ತಿದೆ ಇಲ್ಲಿ. ಮುಂದಿನ ನೀವು ಏನು ಮಾಡಬೇಕು ಅಂತ ಇದ್ದೀರಿ. ಧೈರ್ಯವಾಗಿ ಗಡಿನಾಡಿನ ಬಗ್ಗೆ ಮಾತಾಡಿ ಎಂದು ಆಗ್ರಹಿಸಿದರು.

ಬೆಳಗಾವಿಯಲ್ಲಿರುವ ಆಡಳಿತ, ರಾಜಕಾರಣ ಎಲ್ಲವೂ ಸಂಪೂರ್ಣ ಮರಾಠಿಮಯವಾಗಿದೆ. ಅದರ ಬಗ್ಗೆ ಇಲ್ಲಿ ಪ್ರಾಮಾಣಿಕವಾದ ಚಿಂತನೆ ಇಲ್ಲ. ಕರ್ನಾಟಕ ಸರ್ಕಾರ, ವಿರೋಧ ಪಕ್ಷಗಳು, ಶಾಸಕರು, ಸಂಸದರಲ್ಲಿ ಹೊಂದಾಣಿಕೆ ಇಲ್ಲವೇ ಇಲ್ಲ. ಈ ಕ್ಷಣದವರೆಗೂ ಒಬ್ಬ ಎಂಪಿ, ಶಾಸಕ, ಮಂತ್ರಿಗಳು ಬಾಯಿ ಬಿಟ್ಟಿಲ್ಲ. ಅಲ್ಲದೆ ನಿನ್ನೆ ಯಡಿಯೂರಪ್ಪ ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ. ಇದೇನ್ ರಾಜ್ಯ ಅಂತ ನನಗನಿಸುತ್ತಿದೆ. ಮಹಾರಾಷ್ಟರದಲ್ಲಿ ಕೂಗಾಡುತ್ತಿದ್ದಾರೆ. ಅಲ್ಲದೆ ಬೇರೆ ರಾಜ್ಯಗಳಲ್ಲಿ ಅವರವರ ಭಾಷೆಗಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ವಿರೋಧ ಪಕ್ಷಗಳು ಕೂಡ ಸತ್ತೋಗಿವೆ ಎಂದು ಕಿಡಿಕಾರಿದರು.

uddhav thackeray

ವಿರೋಧ ಪಕ್ಷದವರ ಬಗ್ಗೆ ನನಗೆ ಬಹಳ ಗೌರವ ಇದೆ. ಆದರೆ ಅವರು ಕೂಡ ಯಾಕೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ. ಈ ಸಂಬಂಧ ಯಾರೂ ಬೀದಿಗಿಳಿದು ಹೋರಾಟ ಮಾಡಲು ಬಂದಿಲ್ಲ. ಎಚ್ಚರಿಕೆ ಸಹ ಕೊಡದೆ ಮೌನವಾಗಿದ್ದಾರೆ. ಕಾರ್ನಟಕದಲ್ಲಿ ಇಷ್ಟೊತ್ತಿಗಾಗಲೇ ಸಚಿವ ಸಂಪುಟದ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕಾಗಿತ್ತು. ಆದರೆ ಅದಾಗಿಲ್ಲ, ಬದಲು ಮರಾಠ ಪ್ರಾಧಿಕಾರವನ್ನು ರಚನೆ ಮಾಡಿದ್ದಾರೆ. ಇದು ಅತ್ಯಂತ ಅಗೌರವವಾಗಿದೆ. ಈಗಲಾದರೂ ಉದ್ಧವ್ ಠಾಕ್ರೆ ಮಾತಿಗೆ ವಿರುದ್ಧವಾಗಿ ಪ್ರಾಧಿಕಾರವನ್ನು ರದ್ದು ಮಾಡಿದ್ದೇವೆ ಎಂದು ಹೇಳಿ ಅಂತ ಮುಖ್ಯಮಂತ್ರಿ ಬಿಎಸ್‍ವೈಗೆ ಒತ್ತಡ ಹಾಕಿದರು.

ಕರ್ನಾಟಕಕ್ಕೆ ಬೆಂಕಿ ಬಿದ್ದಿದೆ. ಹೀಗಾಗಿ ಯಡಿಯೂರಪ್ಪನವೇ ನೀವು ಶಾಂತರಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ನಿನ್ನೆ ನೀವು ನಡೆದುಕೊಂಡ ರೀತಿ ನನಗೆ ಒಪ್ಪಿಗೆ ಇಲ್ಲ. ಸಭೆಯಲ್ಲಿ ಅಮಿತ್ ಶಾ ಇರುವಾಗ ಇಡೀ ಸಭೆ ಮರಾಠಿ ಸಭೆಯಂತಿತ್ತು. ಆಗ ನೀವು ಅಲ್ಲಿ ಏನು ಮಾತಾಡಿದ್ರಿ ಎಂಬುದು ಬಹಳ ಪ್ರಾಮುಖ್ಯ. ಹೀಗಾಗಿ ತಕ್ಷಣ ತೀಕ್ಷ್ಣ ಪ್ರತಿಕ್ರಿಯೆ ಮಾಡಲೇ ಬೇಕು. ಈ ಮೂಲಕ ಉದ್ಧವ್ ಠಾಕ್ರೆಗೆ ಎಚ್ಚರಿಕೆ ನೀಡಬೇಕು ಎಂದು ಹೇಳಿದರು.

ಸೊಲ್ಲಾಪುರ ಕರ್ನಾಟಕದ್ದು. ಈ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ದಿನಾಂಕ ಫಿಕ್ಸ್ ಮಾಡಿ ನಾವು ಬೆಳಗಾವಿಗೆ ಹೋಗಿ ಹೋರಾಟ ಮಾಡುತ್ತೇವೆ. ಅಲ್ಲಿಗೆ ಎಲ್ಲ ಕನ್ನಡಪರ ಸಂಘಟನೆಗಳು ಬರಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಶಿವಸೇನೆ ಇದೆ. ಶರದ್ ಪವಾರ್ ಅವರು ಈ ಗಡಿ ಬಗ್ಗೆ ಕೈ ಬಿಟ್ಟಿದ್ದಾರೆ. ಶಿವಸೇನೆಯವರೇ ತಕರಾರು ತೆಗೆಯುತ್ತಿರೋದು. ಶರದ್ ಪವಾರ್ ಅವರು ಈ ಹಿಂದೆ ಬೆಳಗಾವಿಗೆ ಬಂದಾಗಲೂ ಬೆಳಗಾವಿ ಬಗ್ಗೆ ಮಾತನಾಡಿರಲಿಲ್ಲ ಎಂದರು.

ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಅವರ ಮಾತು ತೀಕ್ಷ್ಣವಾಗಿರಬೇಕಾಗುತ್ತದೆ. ಹೋರಾಟ ಮಾಡಬೇಕಾಗಿದೆ. ಈ ಬಗ್ಗೆ ಈಗಾಗಲೇ ಸಾರಾ ಗೋವಿಂದು ಹಾಗೂ ನಾರಾಯಣ ಗೌಡರ ಜೊತೆ ಮಾತನಾಡುತ್ತೇನೆ. ಉದ್ಧವ್ ಠಾಕ್ರೆ ಪ್ರತಿ ಈ ರೀತಿ ಹೇಳಿಕ ಕೊಡೋದು ಸರಿಯಲ್ಲ. ಹಾಗಂತ ನಾವು ಕೂಡ ಇಲ್ಲಿ ಸುಮ್ಮನೆ ಕುಳಿತುಕೊಳ್ಳೋದು ಸರಿಯಲ್ಲ. ಒಂದು ವೇಳೆ ನಾವು ಸುಮ್ಮನೆ ಕುಳಿತರೆ ಅವರ ಮಾತಿಗೆ ಬೆಲೆ ಕೊಟ್ಟಂತಾಗುತ್ತದೆ. ಎಂಇಎಸ್ ಅವರನ್ನು ಗಡಿಪಾರು ಮಾಡಬೇಕು. ಶಿವಸೇನೆ ಅವರು ಬಂದ್ರೆ ಅವರನ್ನು ಜೈಲಿಗೆ ಹಾಕಬೇಕು ಎಂದು ವಾಟಾಳ್ ಆಗ್ರಹಿಸಿದರು.

ಸದ್ಯ ಸಿಎಂ ಟ್ವೀಟ ಮಾಡಿ ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ. ಮಹಾಜನ್ ವರದಿಯೇ ಅಂತಿಮ, ಸೌಹಾರ್ದತೆ ಕೆಡಿಸಬೇಡಿ ಎಂದು ಬಿಎಸ್‍ವೈ ಎಚ್ಚರಿಕೆ ನೀಡಿದ್ದಾರೆ.

TAGGED:belagavibengalurumaharastraPublic TVvatal nagarajಪಬ್ಲಿಕ್ ಟಿವಿಬೆಂಗಳೂರುಬೆಳಗಾವಿಮಹಾರಾಷ್ಟ್ರವಾಟಾಳ್ ನಾಗರಾಜ್
Share This Article
Facebook Whatsapp Whatsapp Telegram

Cinema news

Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema
Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories

You Might Also Like

Mallikarjuna Mutya 3
Court

ಬಾಲಕಿ ಜೊತೆ ಅನುಚಿತ ವರ್ತನೆ – ಪ್ರಕರಣ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ

Public TV
By Public TV
13 minutes ago
Ganiga Ravikumar
Districts

2028 ಕ್ಕೂ ಕಾಂಗ್ರೆಸ್ ಬರಬೇಕು, ಅದಕ್ಕಾಗಿ ಹೈಕಮಾಂಡ್ ಕುರ್ಚಿ ಗೊಂದಲ ಬಗೆಹರಿಸಬೇಕು: ಗಣಿಗ ರವಿಕುಮಾರ್

Public TV
By Public TV
30 minutes ago
Bengaluru Jalahalli Theft
Bengaluru City

ಚಿನ್ನದ ಬೆಲೆ ಏರಿಕೆ – ಪೊಲೀಸರ ಮನೆಯನ್ನೂ ಬಿಡದೇ ಕೈಚಳಕ ತೋರಿಸಿದ ಖತರ್ನಾಕ್ ಕಳ್ಳರು

Public TV
By Public TV
37 minutes ago
subbareddy 1
Bengaluru City

ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ 

Public TV
By Public TV
52 minutes ago
Pakistan Strikes
Latest

Afghanistan-Pakistan conflict | ಪಾಕ್‌ನ F-16 ಜೆಟ್‌ ಉಡೀಸ್‌ – ಬಹಿರಂಗ ಯುದ್ಧ ಘೋಷಿಸಿದ ಶೆಹಬಾಜ್ ಷರೀಫ್‌

Public TV
By Public TV
53 minutes ago
O Panneerselvam
Latest

ತಮಿಳುನಾಡು ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ – 3 ಬಾರಿ ಸಿಎಂ ಆಗಿದ್ದ ಪನ್ನೀರ್‌ಸೆಲ್ವಂ ಡಿಎಂಕೆ ಸೇರ್ಪಡೆ

Public TV
By Public TV
58 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?