ಇಂದಿನಿಂದ ಪಬ್ಲಿಕ್ ಟಿವಿ ನಮ್ಮ ಮನೆ ಎಕ್ಸ್ ಪೋ – ಸ್ಥಳದಲ್ಲೇ ಅರ್ಧಗಂಟೆಗೊಮ್ಮೆ ವಿಶೇಷ ಗಿಫ್ಟ್

Public TV
2 Min Read
public tv expo home main

ಬೆಂಗಳೂರು: ಸಾಕು ಈ ಬಾಡಿಗೆ ಮನೆ ಸಹವಾಸ. ಈ ಸಲ ಸಾಲಸೋಲನಾದ್ರೂ ಮಾಡಿ ನಮ್ಮದೇ ಸ್ವಂತ ಮನೆ ಮಾಡ್ಕೊಬೇಕು ಅನ್ನೋವ್ರಿಗೆ ನಿಮ್ಮ ಪಬ್ಲಿಕ್‍ಟಿವಿ ಸುಂದರ ವೇದಿಕೆ ನಿರ್ಮಿಸಿದೆ.

ಪಬ್ಲಿಕ್ ಟಿವಿ ಇದೇ ಮೊದಲ ಬಾರಿಗೆ `ರಿಯಲ್ ಎಸ್ಟೇಟ್ ಎಕ್ಸ್ ಪೋ -ನಮ್ಮ ಮನೆ’ ಆಯೋಜಿಸಿದೆ. ಕೆ.ಸಿ ಜನರಲ್ ಆಸ್ಪತ್ರೆ ಮುಂಭಾಗದ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಇಂದು ಮತ್ತು ನಾಳೆ ನಡೆಯಲಿದೆ.

ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದ್ದು ಪ್ರತಿ ಅರ್ಧಗಂಟೆಗೆ ನೋಂದಾಯಿಸಲ್ಪಟ್ಟ ಗ್ರಾಹಕರಿಗೆ ಲಕ್ಕಿ ಡಿಪ್ ಮೂಲಕ ಆಕರ್ಷಕ ಬಹುಮಾನ ಉಡುಗೊರೆ ರೂಪದಲ್ಲಿ ದೊರೆಯಲಿದೆ. ಸೈಟ್ ರೇಟ್, ಫ್ಲಾಟ್, ಮನೆ, ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರು ಮಾಹಿತಿ ಪಡೀಬೋದು. ಏಕ್ಸ್ ಪೋದಲ್ಲಿ ಕೆನರಾ ಬ್ಯಾಂಕ್ ಗೃಹ ಸಾಲದ ಬಗ್ಗೆ ಕೊಡಲಿದೆ.

ಎಂಕೆಬಿ ಡೆವಲಪರ್ಸ್ & ಪ್ರೋಮೊಟರ್ಸ್ ಸಹಭಾಗಿತ್ವದಲ್ಲಿ ಸುಸಜ್ಜಿತ ಒಂದೇ ಸೂರಿನಡಿನಲ್ಲಿ ರಾಜ್ಯ ಹಾಗೂ ದೇಶದ ಪ್ರತಿಷ್ಟಿತ 32ಕ್ಕೂ ಹೆಚ್ಚು ಬಿಲ್ಡರ್ಸ್ ಕಂಪನಿಗಳು ಏಕ್ಸ್ ಪೋನಲ್ಲಿ ಭಾಗವಹಿಸುತ್ತಿವೆ.

public tv expo home

ಎಕ್ಸ್ ಪೋ ವಿಶೇಷತೆ ಏನು?
ಎಲ್ಲ ಆರ್ಥಿಕ ಸಮುದಾಯವನ್ನು ನೋಡಿಕೊಂಡು ಆಯೋಜಿಸಲಾಗಿದೆ. ಯಾರು ಬೇಕಾದರೂ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಯಾರೆಲ್ಲ ಭಾಗವಹಿಸುತ್ತಾರೆ?
– ಕನ್‍ಸ್ಟ್ರಕ್ಷನ್ ಕಂಪನಿಗಳು
– ಲ್ಯಾಂಡ್ ಡೆವಲಪರ್ಸ್
– ಪ್ರೀಮಿಯಂ ವಿಲ್ಲಾ ಮತ್ತು ಅಪಾರ್ಟ್‍ಮೆಂಟ್ ಕಂಪನಿಗಳು
– ಹಣಕಾಸು ಸಂಸ್ಥೆಗಳು
– ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು
– ಸ್ಯಾನಿಟರಿ ಫಿಟ್ಟಿಂಗ್
– ಒಳಾಂಗಣ ವಿನ್ಯಾಸ ಕಂಪನಿಗಳು
– ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು

ಯಾರೆಲ್ಲ ಭಾಗವಹಿಸುತ್ತಾರೆ?
ಟೈಟಲ್ ಸ್ಪಾನ್ಸರ್ – ಎಂಕೆಬಿ ಡೆವಲಪರ್ಸ್ & ಪ್ರಮೋಟರ್ಸ್, ಸ್ಟ್ರೆಂಥನಿಂಗ್ ಪಾರ್ಟನರ್ -ಎ.ಆರ್.ಎಸ್ ಸ್ಟೀಲ್ಸ್ & ಅಲಾಯ್ಸ್, ಪವರ್ಡ್ ಬೈ ? ಡಿಎಸ್ ಮ್ಯಾಕ್ಸ್, ಗೋಲ್ಡ್ ಸ್ಪಾನ್ಸರ್- ಎಂ.ಎಸ್. ರಾಮಯ್ಯ ಡೆವಲಪರ್ & ಬಿಲ್ಡರ್ಸ್, ಎ.ಬಿ.ಪ್ರಾಪರ್ಟೀಸ್, ಶ್ರೀಧಾತ್ರಿ ಡೆವಲಪರ್ಸ್ & ಪ್ರೊಮೊಟರ್ಸ್, ಆಧ್ಯ ಪ್ರಾಪರ್ಟೀಸ್, ಬ್ಯಾಂಕಿಂಗ್ ಪಾರ್ಟನರ್ ? ಕೆನರಾ ಬ್ಯಾಂಕ್, ಗಿಫ್ಟಿಂಗ್ ಪಾರ್ಟನರ್ ಪಾಮಡಿ ಜ್ಯುವೆಲ್ಲರ್ಸ್ & ಸಿಲ್ವರ್ ಪ್ಯಾಲೇಸ್, ಸ್ಟಾಲ್ ಪಾರ್ಟನರ್ ಗಳಾಗಿ ವೈಭವ ಪ್ರಾಜೆಕ್ಟ್ಸ್, ಅನುಗ್ರಹ ಪ್ರಾಪರ್ಟಿ, ಬಿಜಿಎಸ್ ಪ್ರಾಪರ್ಟಿ, ಸಿಟ್ರಸ್ ಪ್ರಾಜೆಕ್ಟ್, ಬೃಂದಾವನ್ ಪ್ರಾಪರ್ಟೀಸ್, ಗುರು ಪ್ರಾಪರ್ಟೀಸ್, ಶುಭೋದಯ ಪ್ರಾಪರ್ಟೀಸ್, ಎ.ಬಿ.ಪ್ರಾಪರ್ಟೀಸ್, ಸ್ವಾಮಿತ್ರ ಪ್ರಾಪರ್ಟೀಸ್, ಎಂಎಸ್‍ಐಎಲ್, ಬಿಡಿಎ, ಫೈವ್ ಎಲಿಮೆಂಟ್ಸ್ ಕಂಪನಿಗಳು ಭಾಗಿಯಾಗಲಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *