– ರೆಡ್ ಲೈನ್ ಮೆಟ್ರೋ ಕಾಮಗಾರಿ ವೇಗಗೊಳಿಸಬೇಕಿತ್ತು
– ಬೆಂಗಳೂರಿನ ಟನಲ್ ರಸ್ತೆ ಕಾಮಗಾರಿಗೆ ಸಂಸದರಿಂದ ತೀವ್ರ ವಿರೋಧ
ಬೆಂಗಳೂರು: ನೀವು ಇಂದು ಶಂಕುಸ್ಥಾಪನೆ ಮಾಡಿಲ್ಲ. ಬೆಂಗಳೂರಿನ ವೈಜ್ಞಾನಿಕ ನಗರ ಯೋಜನೆಗೆ ಸಮಾಧಿ ಶಿಲೆ ಹಾಕಿದ್ದೀರಿ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರು ನಗರದ ಮೊದಲ ಟನಲ್ ರಸ್ತೆ (Bengaluru Tunnel Road) ಕಾಮಗಾರಿಗೆ ಇಂದು ಸಿಎಂ ಡಿ.ಕೆ ಶಿವಕುಮಾರ್ (D.K.Shivakumar) ಅವರು ಗುದ್ದಲಿ ಪೂಜೆ ನೆರವೇರಿಸಿದರು. ಇದಕ್ಕೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿರುವ ಸಂಸದರು, ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೆಬ್ಬಾಳ ಫ್ಲೈಓವರ್‌ನಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಮೂಲಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿಗೃಹದವರೆಗೆ ನಿರ್ಮಿಸಲಿರುವ 3 ಪಥಗಳ ಅವಳಿ ಸುರಂಗ ಮಾರ್ಗಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಸಚಿವರಾದ ಶ್ರೀ ಕೆ.ಜೆ. ಜಾರ್ಜ್, ಶ್ರೀ ಕೃಷ್ಣ ಬೈರೇಗೌಡ, ಶ್ರೀ… pic.twitter.com/fN0c3obR32
— DK Shivakumar (@DKShivakumar) June 28, 2026
ಎಕ್ಸ್‌ನಲ್ಲಿ ಏನಿದೆ?
ಮಾನ್ಯ ಮುಖ್ಯಮಂತ್ರಿಗಳೇ,
ಇಂದು ನೀವು ಶಂಕುಸ್ಥಾಪನೆ ಮಾಡಿಲ್ಲ. ಬೆಂಗಳೂರಿನ ವೈಜ್ಞಾನಿಕ ನಗರ ಯೋಜನೆಗೆ ಸಮಾಧಿ ಶಿಲೆ ಹಾಕಿದ್ದೀರಿ.
₹1,139 ಕೋಟಿ ವೆಚ್ಚದ ಈ 2 ಕಿ.ಮೀ. ಸುರಂಗ ಮಾರ್ಗವು ಸಂಚಾರ ದಟ್ಟಣೆಗೆ ಯಾವುದೇ ಪರಿಹಾರವಲ್ಲ. ಸರ್ಕಾರದ ಸಲಹೆಗಾರರು ಸಿದ್ಧಪಡಿಸಿರುವ ಡಿಪಿಆರ್‌ನಲ್ಲೇ (DPR) ಈ ಸುರಂಗ ಮಾರ್ಗವು ಉದ್ಘಾಟನೆಯ ಮೊದಲ ದಿನದಿಂದಲೇ ವಾಹನಗಳಿಂದ ತುಂಬಿ ತುಳುಕಲಿದೆ ಎಂದು ಹೇಳಲಾಗಿದೆ. 5 ವರ್ಷಗಳ ನಂತರವಲ್ಲ. 10 ವರ್ಷಗಳ ನಂತರವಲ್ಲ. ಮೊದಲ ದಿನವೇ.
ಹಾಗಿದ್ದರೆ, ಆರಂಭದ ದಿನದಿಂದಲೇ ಟ್ರಾಫಿಕ್ ಜಾಮ್ (Traffic Jam) ಆಗಲಿದೆ ಎಂದು ಯೋಜನೆಯ ವರದಿಯೇ ಹೇಳುತ್ತಿರುವಾಗ, ಈ ಯೋಜನೆ ಯಾರಿಗಾಗಿ? ಖಂಡಿತವಾಗಿಯೂ ಬೆಂಗಳೂರಿನ ಜನರಿಗಾಗಿ ಅಲ್ಲ.
If short flyovers don’t work, how exactly will a short tunnel work?
Bengaluru Development Minister Shri @krishnabgowda himself admitted that short flyovers only move congestion from one junction to another as seen at Silk Board to Ragigudda.
So why is the State Government… pic.twitter.com/nQNEGBuFWF
— Tejasvi Surya (@Tejasvi_Surya) June 28, 2026
ಬೆಂಗಳೂರು ಜನರಲ್ಲಿರುವ ಅಭಿಪ್ರಾಯ ಸ್ಪಷ್ಟವಾಗಿದೆ. ಈ ಯೋಜನೆ ಸಾಮಾನ್ಯ ನಾಗರಿಕರ ಅನುಕೂಲಕ್ಕಾಗಿ ಅಲ್ಲ; ಸದಾಶಿವನಗರದ ಕೆಲವು ಪ್ರಭಾವಿ ವಿಐಪಿಗಳು, ಮುಖ್ಯಮಂತ್ರಿಗಳು ಹಾಗೂ ವಿಮಾನ ನಿಲ್ದಾಣಕ್ಕೆ ಈ ಮಾರ್ಗ ಬಳಸುವ ನಗರದ ಶ್ರೀಮಂತ ವರ್ಗದ ಅನುಕೂಲಕ್ಕಾಗಿ ರೂಪಿಸಲಾಗಿದೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಆದರೆ ಇದರ ವೆಚ್ಚವನ್ನು ಭರಿಸುವುದು ಮಾತ್ರ ಬೆಂಗಳೂರಿನ ತೆರಿಗೆದಾರರು.
ನಿಸ್ಸಂಶಯವಾಗಿ, ಈ ಯೋಜನೆಯ ಪ್ರಮುಖ ಲಾಭ ಪಡೆಯುವವರು ಗುತ್ತಿಗೆದಾರರು. ಅವರು ಕಾಂಗ್ರೆಸ್ ಪಕ್ಷದ ನಿಧಿಗೆ ಭಾರೀ ಕಿಕ್‌ಬ್ಯಾಕ್‌ಗಳನ್ನು ತಲುಪಿಸುತ್ತಾರೆ.
ಸರ್ಕಾರಕ್ಕೆ ನಿಜವಾಗಿಯೂ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಇದ್ದಿದ್ದರೆ, ರೆಡ್ ಲೈನ್ ಮೆಟ್ರೋ ಕಾಮಗಾರಿಯನ್ನು ವೇಗಗೊಳಿಸಬೇಕಿತ್ತು. ಬೆಂಗಳೂರಿನ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಸಾರ್ವಜನಿಕ ಸಾರಿಗೆ ಮಾತ್ರ. ಫ್ಲೈಓವರ್‌ಗಳು ವಿಫಲವಾಗಿವೆ. ಸುರಂಗ ಮಾರ್ಗಗಳೂ ವಿಫಲವಾಗಲಿವೆ.
Mr. Chief Minister,
You have not laid a foundation stone today. You have laid the tombstone of scientific urban planning in Bengaluru.
This ₹1,139 crore, 2-km tunnel is not a solution to traffic congestion. Even the DPR prepared by the government’s own consultants admits that… https://t.co/MkBIqknoyh
— Tejasvi Surya (@Tejasvi_Surya) June 28, 2026
ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣಬೈರೇಗೌಡ ಅವರೇ ಸಣ್ಣ ಫ್ಲೈಓವರ್‌ಗಳು ಟ್ರಾಫಿಕ್ ಸಮಸ್ಯೆಗೆ ಪರಿಹಾರವಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ಹಾಗಾದರೆ ಸಣ್ಣ ಸುರಂಗ ಮಾರ್ಗ ಹೇಗೆ ಪರಿಹಾರವಾಗುತ್ತದೆ? ಬೆಂಗಳೂರಿನ ಜನರಿಗೆ ಉತ್ತರ ಬೇಕು.
ಇಂತಹ ಅವೈಜ್ಞಾನಿಕ ಯೋಜನೆಗಳನ್ನು ವಿರೋಧಿಸುವ ಧೈರ್ಯವೇ ಸಚಿವರಿಗೆ ಇಲ್ಲದಿದ್ದರೆ, ಬೆಂಗಳೂರಿನ ಅಭಿವೃದ್ಧಿ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದೇ ಸತ್ಯ.
ನನ್ನ ನಿಲುವು ಸ್ಪಷ್ಟವಾಗಿದೆ. ಈ ಸಣ್ಣ ಸುರಂಗ ಮಾರ್ಗವನ್ನು ನೆಪವನ್ನಾಗಿ ಮಾಡಿಕೊಂಡು ಮುಂದೆ ದೊಡ್ಡ ಸುರಂಗ ಮಾರ್ಗವನ್ನು ನಿರ್ಮಿಸಲು ನಾವು ಅವಕಾಶ ನೀಡುವುದಿಲ್ಲ. ವಿಶೇಷವಾಗಿ ಬೆಂಗಳೂರು ದಕ್ಷಿಣದಲ್ಲಿ ಉದ್ದೇಶಿಸಿರುವ ದೀರ್ಘ ಸುರಂಗ ಮಾರ್ಗವನ್ನು ಯಾವುದೇ ಕಾರಣಕ್ಕೂ ನಿರ್ಮಿಸಲು ನಾವು ಬಿಡುವುದಿಲ್ಲ.
ಬೆಂಗಳೂರಿಗೆ ಬೇಕಾಗಿರುವುದು ಇನ್ನಷ್ಟು ಮೆಟ್ರೋ, ಇನ್ನಷ್ಟು ಬಸ್‌ಗಳು, ಉತ್ತಮ ಉಪನಗರ ರೈಲು ವ್ಯವಸ್ಥೆ ಮತ್ತು ವೈಜ್ಞಾನಿಕ ನಗರ ಯೋಜನೆ. ವಿಫಲ ಚಿಂತನೆಗೆ ಸಾವಿರಾರು ಕೋಟಿ ರೂಪಾಯಿಗಳ ಸ್ಮಾರಕಗಳು ಅಲ್ಲ ಎಂದು ಹೇಳಿದ್ದಾರೆ.
