– ಅಕ್ರಮ ತಿಳಿದಿದ್ದರೂ ದೂರು ನೀಡದ ರಾಮಜನ್ಮಭೂಮಿ ಟ್ರಸ್ಟ್
ಲಕ್ನೋ: ದೇಶವನ್ನೇ ಬೆಚ್ಚಿಬೀಳಿಸಿದ ಅಯೋಧ್ಯಾ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ (Ram Mandir Donation Row) ಬಗೆದಷ್ಟು ಸ್ಫೋಟಕ ರಹಸ್ಯಗಳು ಬಯಲಾಗುತ್ತಿವೆ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಮಧ್ಯೆ ಜೂನ್ 5 ರಂದು ಸೆರೆಯಾಗಿದ್ದು ಎನ್ನಲಾದ ಸಿಸಿಟಿವಿ ವಿಡಿಯೋ (CCTV Video) ರಿಲೀಸ್ ಆಗಿದ್ದು, ಸಂಚಲನ ಸೃಷ್ಟಿಸಿದೆ.
ಈ ವಿಡಿಯೋ ಅನ್ವಯ ದೇವಸ್ಥಾನದ ನಿರ್ಗಮಿತ ಟ್ರಸ್ಟಿ ಚಂಪತ್ ರಾಯ್ (Champat Rai) ಅವರಿಗೆ ಈ ಕಳ್ಳತನದ ಬಗ್ಗೆ ಮೊದಲೇ ತಿಳಿದಿತ್ತು. ಅಲ್ಲದೇ, ಔಪಚಾರಿಕವಾಗಿ ದೂರು ದಾಖಲಾಗುವ ಮೊದಲೇ ಪೊಲೀಸರಿಂದ ಪ್ರಾಥಮಿಕ ತನಿಖೆ ಶುರುವಾಗಿತ್ತು ಎನ್ನುವುದನ್ನು ತೋರಿಸುತ್ತಿದೆ. ಇದನ್ನೂ ಓದಿ: Ram Temple Theft| ಆರೋಪಿಗಳ ಆಸ್ತಿ 100 ಪಟ್ಟು ಹೆಚ್ಚಳ; ಡಿಲೀಟ್ ಆಯ್ತು ಮೊಬೈಲ್ ಡೇಟಾ

ಕಳ್ಳತನದ ಬಗ್ಗೆ ಮೊದಲೇ ಗೊತ್ತಿತ್ತಾ?
ಮೂಲಗಳ ಪ್ರಕಾರ, ದೇವಾಲಯದ ಟ್ರಸ್ಟ್‌ಗೆ ಮೊದಲೇ ಅಕ್ರಮಗಳ ಬಗ್ಗೆ ತಿಳಿದಿತ್ತು. ಔಪಚಾರಿಕವಾಗಿ ದೂರು ದಾಖಲಾಗುವ ಮೊದಲೇ ಪೊಲೀಸರು (Ayodhya Police) ಪ್ರಾಥಮಿಕ ತನಿಖೆ ಕೈಗೊಂಡಿದ್ದರು. ಜೂನ್ 5 ರಂದು ಚಂಪತ್ ರಾಯ್ ಅವರ ಸೂಚನೆ ಮೇರೆಗೆ ಟ್ರಸ್ಟ್‌ನ ಪ್ರತಿನಿಧಿಗಳು, ಪೊಲೀಸರ ತಂಡದೊಂದಿಗೆ ಆರೋಪಿ ಅವಿನಾಶ್ ಶುಕ್ಲಾ ಇದ್ದ ಸ್ಥಳಕ್ಕೆ ಭೇಟಿ ನೀಡಿದ್ದರು. ದೇವಾಲಯದ ದೇಣಿಗೆ ಕಳ್ಳತನದ ಬಗ್ಗೆ ಮಾಹಿತಿ ಪಡೆದ ನಂತರ ಶುಕ್ಲಾರನ್ನ ಬಂಧಿಸಿ, 5 ಲಕ್ಷ ರೂಪಾಯಿ ಹಣವನ್ನೂ ವಶಪಡಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಇಷ್ಟೆಲ್ಲಾ ಕರ್ಮಕಾಂಡ ಆಗಿಯೂ ಟ್ರಸ್ಟ್ ಅಧಿಕೃತವಾಗಿ ದೂರನ್ನಾಗಲಿ ಎಫ್‌ಐಆರ್ ಆಗಲಿ ದಾಖಲಿಸಿರಲಿಲ್ಲ. ಜೂನ್ 7 ರಂದು ಈ ಅಕ್ರಮ ಬೆಳಕಿಗೆ ಬಂದ ನಂತರ ಟ್ರಸ್ಟ್ ಅಧಿಕೃತವಾಗಿ ದೂರು ನೀಡಲು ಮುಂದಾಯಿತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ- ದೊಡ್ಡವರ ವಿರುದ್ಧ ಶೀಘ್ರವೇ ಎಫ್‌ಐಆರ್ ಸಾಧ್ಯತೆ

24 ಸೆಕೆಂಡುಗಳ ವಿಡಿಯೋ ರಹಸ್ಯ
ಸದ್ಯ ಸಂಚಲನ ಸೃಷ್ಟಿಸಿರುವ 24 ಸೆಕೆಂಡುಗಳ ಸಿಸಿಟಿವಿ ವಿಡಿಯೋ ಜೂನ್ 5 ರ ರಾತ್ರಿ 8:13 ಕ್ಕೆ ಸೆರೆಯಾಗಿದ್ದು ಎನ್ನಲಾಗಿದೆ. ಈ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾಂಕ್ ನೌಕರರೂ ಇದ್ದಾರೆ. ಅವಿನಾಶ್ ಶುಕ್ಲಾರನ್ನ ಬಂಧಿಸಿ, ಕಾರಿನ ಕಡೆಗೆ ಕರೆದೊಯ್ಯುತ್ತಿರುವುದು, ಅವಿನಾಶ್ ಕಪ್ಪು ಚೀಲ ಹಿಡಿದು ನಿಂತಿರುವುದು, ಬಲವಂತವಾಗಿ ಕಾರಿನಲ್ಲಿ ಕೂರಿಸುತ್ತಿರುವುದು ಸಹ ಸೆರೆಯಾಗಿದೆ. ಈ ಚೀಲದಲ್ಲಿ ವಶಪಡಿಸಿಕೊಂಡ ನಗದು ಇತ್ತು ಎನ್ನಲಾಗಿದೆ.
ಆರೋಪಿಗಳ ಆಸ್ತಿ 100 ಪಟ್ಟು ಹೆಚ್ಚಳ
ಈ ಮಧ್ಯೆ ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿರುವ ಬಹುಕೋಟಿ ಮೌಲ್ಯದ ಕಳ್ಳತನದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ಅತ್ಯಂತ ಮಹತ್ವದ ಹಾಗೂ ಆಘಾತಕಾರಿ ಸಾಕ್ಷ್ಯಗಳು ಲಭ್ಯವಾಗಿವೆ. ಇದನ್ನೂ ಓದಿ: ದಿನಕ್ಕೆ 2 ಶಿಫ್ಟ್, 40 ಸಿಬ್ಬಂದಿ ಬಳಕೆ – ರಾಮನ ದೇಣಿಗೆ ಲೆಕ್ಕ ಹೇಗೆ ನಡೆಯುತ್ತೆ?
ತನಿಖಾ ಸಂಸ್ಥೆಗಳು ಮುಖ್ಯ ಆರೋಪಿಗಳು ಮತ್ತು ಅವರ ನಿಕಟವರ್ತಿಗಳ ಬ್ಯಾಂಕ್ ಖಾತೆ (Bank Account) ಹಾಗೂ ಆಸ್ತಿಪಾಸ್ತಿಗಳನ್ನು ಪರಿಶೀಲಿಸಿದಾಗ ಶಾಕ್ ಆಗಿದ್ದಾರೆ. ಕಳ್ಳತನ ನಡೆದ ಕೆಲವೇ ದಿನಗಳ ಅವಧಿಯಲ್ಲಿ ಆರೋಪಿಗಳ ವೈಯಕ್ತಿಕ ಆಸ್ತಿ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಬರೋಬ್ಬರಿ 100 ಪಟ್ಟು ಹೆಚ್ಚಾಗಿದೆ ಅನ್ನೋ ಸಂಗತಿ ಬೆಳಕಿಗೆ ಬಂದಿವೆ.
