ಅಹಮದಾಬಾದ್: ಪ್ರತಿಷ್ಠಿತ ಎವಿಸಿ (Asian Volleyball Confederation) ಪುರುಷರ ಕಪ್ 2026 ರಲ್ಲಿ ಭಾರತೀಯ (India) ಪುರುಷರ ವಾಲಿಬಾಲ್ ತಂಡವು ಅದ್ಭುತ ಪ್ರದರ್ಶನ ನೀಡುವ ಮೂಲಕ ಇಡೀ ಕ್ರೀಡಾಲೋಕವೇ ತಿರುಗಿ ನೋಡುವಂತಹ ಐತಿಹಾಸಿಕ ಸಾಧನೆ ಮಾಡಿದೆ. ಟೂರ್ನಿಯಲ್ಲಿ ಅತ್ಯಂತ ರೋಚಕವಾಗಿದ್ದ ಮೂರನೇ ಸ್ಥಾನದ ಪಂದ್ಯದಲ್ಲಿ ಭಾರತ ತಂಡವು ಕಂಚಿನ ಪದಕವನ್ನು (Bronze Medal) ಗೆದ್ದು ಇತಿಹಾಸ ನಿರ್ಮಿಸಿದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ವೀರ್ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ನಡೆದ ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಬಹ್ರೇನ್(Bahrain) ತಂಡದ ವಿರುದ್ಧ 3-1 (25-23, 23-25, 25-21, 25-17) ಸೆಟ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಐತಿಹಾಸಿಕ ಕಂಚಿನ ಪದಕವನ್ನು ಗೆದ್ದುಕೊಂಡಿದೆ.
🏐 TEAM INDIA WINS BRONZE AT THE AVC MEN’S VOLLEYBALL CUP
Team India defeated defending Champion Bahrain🇧🇭 3-1 (25-23, 23-25, 25-21, 25-17) in the BMM to win 🥉in the AVC Men’s Volleyball Cup.
First Senior Asian medal for Team India since 2014.
Up next, Asian Volleyball… pic.twitter.com/3PQZTQTL67
— SPORTS ARENA🇮🇳 (@SportsArena1234) June 28, 2026
ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಅತ್ಯಂತ ರೋಚಕ ಹೋರಾಟ ನಡೆಸಿ (2-3) ಸೋತಿದ್ದ ಭಾರತ ತಂಡ, ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡುವ ಮೂಲಕ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿತು. ಇದನ್ನೂ ಓದಿ: ಅನಿರುದ್ಧ್ – ಕಾವ್ಯಾ ಮಾರನ್ ಮದುವೆ ಫಿಕ್ಸ್? – ಕುಟುಂಬ ಸದಸ್ಯರಿಂದಲೇ ಸಿಕ್ತು ಸುಳಿವು
