ವಿಕ್ಟೋರಿಯಾ: ಭಾರತ ಮತ್ತು ಸೀಶೆಲ್ಸ್ (Seychelles) ದ್ವೀಪ ರಾಷ್ಟ್ರದ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದ್ದಕ್ಕಾಗಿ ಹಾಗೂ ಹಿಂದೂ ಮಹಾಸಾಗರ ವಲಯದ ಭದ್ರತೆ ಮತ್ತು ಸಮುದ್ರ ಆರ್ಥಿಕತೆಯ ಬೆಳವಣಿಗೆಗೆ ನೀಡಿದ ಅಪ್ರತಿಮ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸೀಶೆಲ್ಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್ (Guardian of the Blue Horizon) ಗೌರವವನ್ನು ನೀಡಿ ಪುರಸ್ಕರಿಸಿದೆ.
ಸೀಶೆಲ್ಸ್ ಅಧ್ಯಕ್ಷರು ಪ್ರಧಾನಿ ಮೋದಿ ಅವರಿಗೆ ಈ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿದರು. ಪ್ರಧಾನಿ ಮೋದಿ ಅವರಿಗೆ ವಿದೇಶಿ ಸರ್ಕಾರಗಳು ನೀಡುತ್ತಿರುವ ಅತ್ಯುನ್ನತ ಪ್ರಶಸ್ತಿಗಳ ಸರಣಿಗೆ ಇದು ಮತ್ತೊಂದು ಪ್ರಮುಖ ಸೇರ್ಪಡೆಯಾಗಿದೆ.
Mon annan gratitid anver lepep ek gouvernman Sesel osi byen ki Prezidan Herminie pour donn mwan tit ‘Gardyen Lorizon Ble.’
Mon enbleman aksepte sa tit avek loner e dedye li a tou lezot pei ki pe lager kont bann defi sanzman klima e ki konsider proteksyon lanvironnman zot… pic.twitter.com/aHZVPOe9cF
— Narendra Modi (@narendramodi) June 28, 2026
ಹಿಂದೂ ಮಹಾಸಾಗರ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಭಾರತ ವಹಿಸಿದ ನಾಯಕತ್ವದ ಪಾತ್ರವನ್ನು ಸೀಶೆಲ್ಸ್ ಶ್ಲಾಘಿಸಿದೆ. ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಹವಾಮಾನ ವೈಪರೀತ್ಯದ ವಿರುದ್ಧ ದ್ವೀಪ ರಾಷ್ಟ್ರಗಳಿಗೆ ಭಾರತ ನೀಡಿದ ತಾಂತ್ರಿಕ ಹಾಗೂ ಆರ್ಥಿಕ ಬೆಂಬಲವನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ.
ಈ ಅತ್ಯುನ್ನತ ಗೌರವವನ್ನು ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಪ್ರಶಸ್ತಿಯು ಕೇವಲ ನನಗಷ್ಟೇ ಸಂದ ಗೌರವವಲ್ಲ, ಇದು 140 ಕೋಟಿ ಭಾರತೀಯರಿಗೆ ಮತ್ತು ಭಾರತ-ಸೀಶೆಲ್ಸ್ ನಡುವಿನ ಸುದೀರ್ಘ ಸ್ನೇಹಕ್ಕೆ ಸಿಕ್ಕ ಮನ್ನಣೆಯಾಗಿದೆ. ಹಿಂದೂ ಮಹಾಸಾಗರದ ರಕ್ಷಣೆ ಮತ್ತು ಉಭಯ ದೇಶಗಳ ಪ್ರಗತಿಗೆ ಭಾರತ ಸದಾ ಬದ್ಧವಾಗಿದೆ ಎಂದು ಹೇಳಿದ್ದಾರೆ.
Speaking at the National Assembly of Seychelles.@SeychellesNA
https://t.co/8GcumuqG94— Narendra Modi (@narendramodi) June 28, 2026
ವಸತಿ, ಸಾರಿಗೆ, ಕೌಶಲ್ಯ ಅಭಿವೃದ್ಧಿ, ಆಹಾರ ಭದ್ರತೆ, ಶಿಕ್ಷಣ ಮತ್ತು ರಕ್ಷಣೆ ಸೇರಿದಂತೆ ಸೀಶೆಲ್ಸ್‌ಗೆ 175 ಮಿಲಿಯನ್ ಡಾಲರ್ (1,460 ಕೋಟಿ ರೂ.) ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಪ್ರಧಾನಿ ಮೋದಿ ಘೋಷಿಸಿದರು.
ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಅವರೊಂದಿಗೆ ಮಾತನಾಡಿದ ಪ್ರಧಾನಿ, ಭಾರತದ ಅಭಿವೃದ್ಧಿ ಪಾಲುದಾರಿಕೆಯು ಅದರ ಪಾಲುದಾರ ರಾಷ್ಟ್ರಗಳ ಆದ್ಯತೆಗಳಿಂದ ನಡೆಸಲ್ಪಡುತ್ತದೆ. ಯುವ ಕೌಶಲ್ಯ ಮತ್ತು ಉದ್ಯೋಗಾವಕಾಶವನ್ನು ಬಲಪಡಿಸಲು ವೃತ್ತಿಪರ ಮತ್ತು ತಾಂತ್ರಿಕ ಕೇಂದ್ರವನ್ನು ಪ್ರಾರಂಭಿಸುವದಾಗಿ ಹೇಳಿದರು. ಇದನ್ನೂ ಓದಿ: ಈ ವರ್ಷವೇ ನಾನು ಬಾಂಗ್ಲಾದೇಶಕ್ಕೆ ಮರಳಲಿದ್ದೇನೆ : ಶೇಖ್ ಹಸೀನಾ
ಸಂಸತ್ ಉದ್ದೇಶಿಸಿ ಭಾಷಣ
ಇಂದು (ಜೂನ್ 28) ಸೀಶೆಲ್ಸ್ ರಾಷ್ಟ್ರೀಯ ಅಸೆಂಬ್ಲಿಯನ್ನು (National Assembly of Seychelles) ಉದ್ದೇಶಿಸಿ ಮೋದಿ ಅವರು ಮಾಡಿದ ಐತಿಹಾಸಿಕ ಭಾಷಣ ಮಾಡಿದರು.
Addressed the National Assembly of Seychelles today.
Expressed my gratitude for the warmth and friendship extended by the people of Seychelles. Spoke about the long-lasting partnership between our two nations that is built on shared values. It was also an honour interacting with… pic.twitter.com/nyNzt3Q4ym
— Narendra Modi (@narendramodi) June 28, 2026
ಹಿಂದೂ ಮಹಾಸಾಗರ ವಲಯದಲ್ಲಿ ಸುರಕ್ಷತೆ ಮತ್ತು ಪ್ರಗತಿ ಎಲ್ಲರಿಗೂ ಸಿಗಬೇಕು ಎಂಬುದು ಭಾರತದ ಆಶಯವಾಗಿದೆ. ಕಡಲ್ಗಳ್ಳತನ (Piracy), ಮಾದಕ ದ್ರವ್ಯ ಸಾಗಣೆ ಮತ್ತು ಮಾನವ ಹಳ್ಳದಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಸೀಶೆಲ್ಸ್ ರಕ್ಷಣಾ ಪಡೆಗಳಿಗೆ ಭಾರತವು ಸದಾ ರಕ್ಷಣಾ ತರಬೇತಿ ಹಾಗೂ ಯುದ್ಧನೌಕೆಗಳ ತಾಂತ್ರಿಕ ಬೆಂಬಲವನ್ನು ಮುಂದುವರಿಸಲಿದೆ ಎಂದು ಭರವಸೆ ನೀಡಿದರು.
ಸೀಶೆಲ್ಸ್‌ನ ಪ್ರಗತಿಯಲ್ಲಿ ಅಲ್ಲಿ ನೆಲೆಸಿರುವ ಸಣ್ಣ ಭಾರತೀಯ ಸಮುದಾಯದ (Indian Diaspora) ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ, ಭಾರತೀಯರು ಸೀಶೆಲ್ಸ್ ಸಮಾಜ ಮತ್ತು ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಹೆಮ್ಮೆಯಿಂದ ಹೆಳಿದರು. ಉಭಯ ದೇಶಗಳ ನಾಗರಿಕರ ನಡುವಿನ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ವಿನಿಮಯವನ್ನು ಮತ್ತಷ್ಟು ಸರಳಗೊಳಿಸಲು ಭಾರತ ಕ್ರಮ ಕೈಗೊಳ್ಳಲಿದೆ ಎಂದರು.
ಭಾರತದ ಹೆಮ್ಮೆಯ ITEC (Indian Technical and Economic Cooperation) ಕಾರ್ಯಕ್ರಮದ ಮೂಲಕ ಸೀಶೆಲ್ಸ್‌ನ ಯುವಕರಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹೆಚ್ಚಿಸಲಾಗುವುದು. ಜೊತೆಗೆ, ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ (UPI) ಮತ್ತು ತಂತ್ರಜ್ಞಾನವನ್ನು ಸೀಶೆಲ್ಸ್‌ನಲ್ಲೂ ವಿಸ್ತರಿಸುವ ಕುರಿತು ಜಂಟಿ ಸಹಭಾಗಿತ್ವದ ಭರವಸೆಯನ್ನು ನೀಡಿದರು.
ಎರಡೂ ದೇಶಗಳ ನಡುವೆ ರಕ್ಷಣೆ, ಕಡಲ ಭದ್ರತೆ, ತಂತ್ರಜ್ಞಾನ ಮತ್ತು ಜಂಟಿ ನೌಕಾ ತರಬೇತಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಹೊಸ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.
