ನವದೆಹಲಿ: ಈ ವರ್ಷವೇ ನಾನು ಬಾಂಗ್ಲಾದೇಶಕ್ಕೆ(Bangladesh) ಮರಳಲಿದ್ದೇನೆ ಎಂದು ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಹೇಳಿದ್ದಾರೆ.
ಎನ್‌ಡಿಟಿವಿಗೆ ವಿಶೇಷ ಸಂದರ್ಶನ ನೀಡಿದ ಅವರು, ತಾವೇನೂ ದೇಶದಿಂದ ಶಾಶ್ವತವಾಗಿ ಓಡಿಬಂದಿಲ್ಲ. ಅಲ್ಲಿನ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಮತ್ತು ತಮ್ಮ ಅವಾಮಿ ಲೀಗ್ (Awami League) ಪಕ್ಷದ ಕಾರ್ಯಕರ್ತರಲ್ಲಿ ಧೈರ್ಯ ತುಂಬಲು ಶೀಘ್ರದಲ್ಲೇ ಮರಳುವುದಾಗಿ ಅವರು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ತಮಗೆ ಎದುರಾದ ಪರಿಸ್ಥಿತಿಯ ಹಿಂದೆ ವಿದೇಶಿ ಶಕ್ತಿಗಳ ಕೈವಾಡ ಮತ್ತು ವ್ಯವಸ್ಥಿತ ರಾಜಕೀಯ ಪಿತೂರಿ ಇತ್ತು ಎಂದು ಹಸೀನಾ ಪುನರುಚ್ಚರಿಸಿದ್ದಾರೆ. ದೇಶದಲ್ಲಿ ಶಾಂತಿ ಕದಡಲು ಹವಣಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಡಲು ತಾವು ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಕಠಿಣ ಪರಿಸ್ಥಿತಿಯಲ್ಲಿ ತಮಗೆ ಆಶ್ರಯ ನೀಡಿ ರಕ್ಷಿಸಿದ ಭಾರತ (India) ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಐತಿಹಾಸಿಕ ಬಾಂಧವ್ಯ ಎಂದಿಗೂ ಮುರಿಯಲಾರದ್ದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕ್ರೈಮ್ ಪಾರ್ಟ್ನರ್ ಜೊತೆ ಕುಳಿತು ಖುಷಿ ಖುಷಿಯಾಗಿ ಕ್ರಿಕೆಟ್ ಮ್ಯಾಚ್ ವೀಕ್ಷಿಸಿದ್ದ ಸಿಯಾ – ವಿಡಿಯೋ ವೈರಲ್
ಬಾಂಗ್ಲಾದೇಶದಲ್ಲಿ ನಡೆದ ಭಾರಿ ರಾಜಕೀಯ ದ್ರೋಹ ಮತ್ತು ವಿದ್ಯಾರ್ಥಿ ದಂಗೆಯ ಬಳಿಕ ದೇಶ ತೊರೆದು ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
