Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸೈನಾ, ಸಿಂಧೂಗೆ ಬೇರೆ ಬೇರೆ ಕಡೆಯಲ್ಲಿ ಪ್ರತ್ಯೇಕ ತರಬೇತಿ ನೀಡ್ತಿದ್ದಾರೆ ಗೋಪಿಚಂದ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಸೈನಾ, ಸಿಂಧೂಗೆ ಬೇರೆ ಬೇರೆ ಕಡೆಯಲ್ಲಿ ಪ್ರತ್ಯೇಕ ತರಬೇತಿ ನೀಡ್ತಿದ್ದಾರೆ ಗೋಪಿಚಂದ್!

Latest

ಸೈನಾ, ಸಿಂಧೂಗೆ ಬೇರೆ ಬೇರೆ ಕಡೆಯಲ್ಲಿ ಪ್ರತ್ಯೇಕ ತರಬೇತಿ ನೀಡ್ತಿದ್ದಾರೆ ಗೋಪಿಚಂದ್!

Public TV
Last updated: June 5, 2018 2:10 pm
Public TV
Share
2 Min Read
gopichand badminton
SHARE

ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧೂ ಅವರು ಸದ್ಯ ರಾಷ್ಟ್ರೀಯ ತಂಡದ ತರಬೇತುದಾರ ಗೋಪಿಚಂದ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಕೋಚ್ ಇಬ್ಬರಿಗೂ ಬೇರೆ ಬೇರೆ ಕೇಂದ್ರಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೋಪಿಚಂದ್, ಇದು ತರಬೇತಿ ತಂಡದ ನಿರ್ಧಾರವಾಗಿದ್ದು, ಇಬ್ಬರು ಆಟಗಾರ್ತಿಯರ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ಈ ಹಿಂದೆಯೂ ಇದೇ ರೀತಿ ಪ್ರತ್ಯೇಕ ತರಬೇತಿ ನೀಡಿದ್ದು, ಇಬ್ಬರು ಆಟಗಾರ್ತಿಯರ ಕುರಿತು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

sindhu sina

ಸದ್ಯ ಈ ತೀರ್ಮಾನದ ಹಿನ್ನೆಲೆಯಲ್ಲಿ ಗೋಪಿಚಂದ್ ಅವರ ಆಕಾಡೆಮಿಯ ತರಬೇತಿ ಸಮಯವನ್ನು ಪ್ರತ್ಯೇಕಗೊಳಿಸಲಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಗೋಪಿಚಂದ್ ಹೇಳಿದ್ದಾರೆ.

ಸದ್ಯ ಗೋಪಿಚಂದ್ ಅವರು ಎರಡು ಆಕಾಡೆಮಿಗಳನ್ನು ಹೊಂದಿದ್ದು, ಅರ್ಧ ಕಿಮೀ ಅಂತರದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಇದ್ದ ಹಳೆಯ ತರಬೇತಿ ಕೇಂದ್ರದ ಅಲ್ಪ ದೂರದಲ್ಲೇ ಮತ್ತೊಂದು ಹೊಸ ಕೇಂದ್ರ ಸ್ಥಾಪನೆ ಕೆಲ ವರ್ಷಗಳ ಹಿಂದೆ ಆರಂಭ ಮಾಡಲಾಗಿತ್ತು.

2014 ರಲ್ಲಿ ಗೋಪಿಚಂದ್ ತರಬೇತಿ ಕೇಂದ್ರದಿಂದ ಹೊರ ನಡೆದಿದ್ದ ಸೈನಾ ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದರು. ಕಳೆದ ಸೆಪ್ಟೆಂಬರ್ ನಲ್ಲಿ ಮತ್ತೆ ಸೈನಾ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದಿರುಗಿದ್ದರು. ವಿಶ್ವ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದ ನಂತರ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದುರುಗಿ ಪಿವಿ ಸಿಂಧೂ ರನ್ನು ಮಣಿಸಿ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ತರಬೇತಿ ತಂಡದ ಈ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಧೂ ತಂದೆ, ಸದ್ಯ ನಿಗಧಿ ಮಾಡಿರುವ ಅವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಗೋಪಿಚಂದ್ ಅವರು ಎಲ್ಲಾ ಆಟಗಾರರಿಗೂ ಒಂದೇ ಸಮಯವನ್ನು ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದಾಗಿ ಏನನ್ನು ಕೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಪ್ರತ್ಯೇಕ ತರಬೇತಿ ಯಾಕೆ?
ಸೈನಾ ಮತ್ತು ಸಿಂಧೂಗೆ ಪ್ರತ್ಯೇಕ ತರಭೇತಿ ನೀಡುತ್ತಿರುವುದು ಯಾಕೆ ಎನ್ನುವುದನ್ನು ಯಾರು ಅಧಿಕೃತವಾಗಿ ತಿಳಿಸಿಲ್ಲ. ಇಬ್ಬರಿಗೆ ಪ್ರತ್ಯೇಕ ಅವಧಿಯಲ್ಲಿ ತರಬೇತಿ ನೀಡುತ್ತಿರುವುದರ ಹಿಂದೆ ಆಟಗಾರ್ತಿಯರ ಹಿತಾದೃಷ್ಟಿಯೂ ಕಾರಣವಾಗಿದೆ ಎನ್ನಲಾಗಿದೆ. ಇಬ್ಬರು ಒಂದೇ ಕಡೆ ಅಭ್ಯಾಸ ನಡೆಸಿದರೆ ದೌರ್ಬಲ್ಯಗಳು ತಿಳಿಯುವ ಕಾರಣ ಇಬ್ಬರನ್ನು ದೂರ ಇಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

pv sindhu gopichand

TAGGED:AcademybadmintonDurationGopichandHyderabadPublic TVTrainingಅವಧಿಆಕಾಡೆಮಿಗೋಪಿಚಂದ್ತರಬೇತಿಪಬ್ಲಿಕ್ ಟಿವಿಬ್ಯಾಡ್ಮಿಂಟನ್ಹೈದರಾಬಾದ್
Share This Article
Facebook Whatsapp Whatsapp Telegram

Cinema news

Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post

You Might Also Like

Cocaine Seized in kempegowda airport
Bengaluru City

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 23.8 ಕೋಟಿ ಮೌಲ್ಯದ ಕೊಕೇನ್ ಜಪ್ತಿ

Public TV
By Public TV
12 minutes ago
DK Shivakumar priyanka kharge in kamakhya temple
Latest

ಸಂಸದೆ ಪ್ರಿಯಾಂಕಾ ಗಾಂಧಿ ಜೊತೆ ಕಾಮಾಕ್ಯ ದೇಗುಲಕ್ಕೆ ಡಿಕೆಶಿ ಭೇಟಿ

Public TV
By Public TV
27 minutes ago
Priyank kharge 1
Karnataka

AI Impact ಶೃಂಗಸಭೆಯಲ್ಲಿ ರಾಜ್ಯದ ಸಾಧನೆ ಪ್ರದರ್ಶನ – ಎಐ ಕ್ಷೇತ್ರ, ನವೋದ್ಯಮಗಳ ಮುಖ್ಯಸ್ಥರ ಜೊತೆ ಪ್ರಿಯಾಂಕ್ ಖರ್ಗೆ ಸಮಾಲೋಚನೆ

Public TV
By Public TV
45 minutes ago
India AI Impact Summit Guinness World Record
Latest

ಇಂಡಿಯಾ ಎಐ ಶೃಂಗದಲ್ಲಿ ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ – ಜವಾಬ್ದಾರಿಯುತವಾಗಿ AI ಬಳಸುವ ಪ್ರತಿಜ್ಞೆ ಮಾಡಿದ 2.5 ಲಕ್ಷ ಜನರು

Public TV
By Public TV
1 hour ago
Nelamangala Crime 1
Bengaluru Rural

ವೃದ್ಧೆಯ ಹತ್ಯೆಗೈದು ದರೋಡೆ – ಸಾಲ ತೀರಿಸೋಕೆ ಚಿನ್ನಾಭರಣ ಎಗರಿಸಿ ಪಕ್ಕದ ಮನೆಯವನಿಂದ್ಲೇ ಕೊಲೆ

Public TV
By Public TV
1 hour ago
Anil Ambani
Court

ಅನುಮತಿ ಇಲ್ಲದೆ ಭಾರತ ತೊರೆಯುವುದಿಲ್ಲ – ಸುಪ್ರೀಂಗೆ ಅನಿಲ್ ಅಂಬಾನಿ ಮುಚ್ಚಳಿಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?