– ಕೇಂದ್ರದ ಮಸೂದೆಗೆ ಡಿಎಂಕೆ ಬೆಂಬಲ; ಸ್ಟಾಲಿನ್ ಮನವೊಲಿಸಲು ಕಾಂಗ್ರೆಸ್ ಕಸರತ್ತು
ಚೆನ್ನೈ: ಕೇಂದ್ರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ (Delimitation Bill) ಡಿಎಂಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ, ಎಂ.ಕೆ.ಸ್ಟಾಲಿನ್ (Stalin) ಮನವೊಲಿಸಲು ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದಾರೆ.
ಎಂ.ಕೆ.ಸ್ಟಾಲಿನ್ ಭೇಟಿಯಾಗಲು ಚೆನ್ನೈಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಎಂ ಡಿ.ಕೆ.ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳಂ ಸಿಎಂ ವಿ.ಡಿ.ಸತೀಶನ್ ಎಲ್ಲರೂ ಚೆನ್ನೈಗೆ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ: ತಮಿಳುನಾಡು ಜನರ ಹಿತಾಸಕ್ತಿಯೇ ಮೊದಲ ಆದ್ಯತೆ, ದ್ರೋಹಿಯಾಗಲ್ಲ:ರಾಹುಲ್ಗೆ ಸ್ಟಾಲಿನ್ ಮಾರ್ಮಿಕ ಸಂದೇಶ
ತಮಿಳುನಾಡು ಮಾಜಿ ಸಿಎಂ ಸ್ಟಾಲಿನ್ ಭೇಟಿಗೆ ಕಾಂಗ್ರೆಸ್ ನಾಯಕರು ಏರ್ಪೋರ್ಟ್ನಲ್ಲೇ ಕಾದು ಕುಳಿತರು. ಆದರೆ, ಇತ್ತ ಸ್ಟಾಲಿನ್ ತಮ್ಮ ತಾಯಿ ಭೇಟಿಗೆ ಆಸ್ಪತ್ರೆಗೆ ತೆರಳಿದ್ದರು. ಕೈ ನಾಯಕರು ಬರುವ ಹೊತ್ತಲ್ಲೇ ಸ್ಟಾಲಿನ್ ತೆರಳಿದ್ದರು. ಸಂಜೆ 4 ಗಂಟೆಗೆ ಸ್ಟಾಲಿನ್ ಜೊತೆ ಕಾಂಗ್ರೆಸ್ ನಾಯಕರು ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಡಿಎಂಕೆ ನಾಯಕನ ಮನವೊಲಿಸಲು ಇಂಡಿಯಾ ಒಕ್ಕೂಟ ಯತ್ನಿಸಿದೆ. ಇತ್ತ ಟ್ವೀಟ್ ಮೂಲಕ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ. ನಾವು ನಮ್ಮ ನಿರ್ಧಾರಕ್ಕೆ ಬದ್ಧ. ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಟಾಲಿನ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನಿಂದ ಕೊನೆಯ ಕ್ಷಣದ ಕಸರತ್ತು: ಸ್ಟಾಲಿನ್, ಶರದ್ ಪವಾರ್ ಮನವೊಲಿಸಲು ಚೆನ್ನೈಗೆ ಖರ್ಗೆ, ರಾಹುಲ್

