ಕೋಲ್ಕತ್ತಾ: ಟೆಕ್ಕಿಗೆ ಲಿವ್-ಇನ್ ಪಾರ್ಟ್ನರ್ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ (Kolkata Techie) ನಡೆದಿದೆ. ಪ್ರಕರಣ ಸಂಬಂಧ ಮಹಿಳೆ ಹಾಗೂ ಆಕೆಯ ತಾಯಿಯನ್ನು ಬಂಧಿಸಲಾಗಿದೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ 25 ವರ್ಷದ ಸಾರ್ಥಕ್ ಸರ್ಕಾರ್ ಕೊಲೆಯಾದ ಟೆಕ್ಕಿ ಎಂದು ಗುರುತಿಸಲಾಗಿದೆ. ನಗರದ ಗರಿಯಾ ಪ್ರದೇಶದಲ್ಲಿರುವ ಬಾಡಿಗೆ ಫ್ಲಾಟ್ ಒಂದರಲ್ಲಿ ಅವರ ಮೃತದೇಹ ಪತ್ತೆಯಾಯಿತು. ಟೆಕ್ಕಿ ಅಲ್ಲಿ ತಮ್ಮ ಗೆಳತಿ ಸಂಚಾಲಿಕಾ ಬಸು ಜೊತೆ ವಾಸವಾಗಿದ್ದರು. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿ ಕೊಲೆ – ಆಕಸ್ಮಿಕ ಸಾವು ಎಂದು ನಂಬಿಸಿದ್ದ ಖತರ್ನಾಕ್ ಪತ್ನಿ ಅರೆಸ್ಟ್
ಕೊಲೆ ದಿನ ಇಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ, ಟೆಕ್ಕಿ ಭುಜಕ್ಕೆ ಗೆಳತಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾಳೆ. ಕೂಗಾಟದ ಶಬ್ದ ಕೇಳಿ ನೆರೆಹೊರೆಯವರು ಫ್ಲಾಟ್ಗೆ ಧಾವಿಸಿ, ಗಾಯಗೊಂಡಿದ್ದ ಟೆಕ್ಕಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ಆಕೆಯ ತಾಯಿ ಮೌಮಿತಾ ಬಸುಳನ್ನೂ ಬಂಧಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗಿ 9 ತಿಂಗಳಲ್ಲೇ ಗೃಹಿಣಿ ಸಾವು – ಗಂಡ, ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ
ಇಬ್ಬರ ನಡುವೆ ಜಗಳಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೊಲೆಯಲ್ಲಿ ಆರೋಪಿಯ ತಾಯಿಯ ಪಾತ್ರವೇನು ಎಂಬುದರ ಕುರಿತಾಗಿಯೂ ಅವರು ಪರಿಶೀಲನೆ ನಡೆಸುತ್ತಿದ್ದಾರೆ.
