ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನಿರುದ್ಧ್ ರವಿಚಂದರ್ (Anirudh Ravichander) ಮತ್ತು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಸಿಇಒ ಕಾವ್ಯಾ ಮಾರನ್ (Kavya Maran) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನವೆಂಬರ್ 10 ಮತ್ತು 11ರಂದು ಗ್ರೀಸ್ನಲ್ಲಿ ಅದ್ಧೂರಿ ವಿವಾಹ ಮಹೋತ್ಸವ ನಡೆಯಲಿದೆ ಮೂಲಗಳನ್ನಾಧರಿಸಿ ಮಾಧ್ಯಮಗಳು ವರದಿ ಮಾಡಿವೆ.
Superstar #Rajinikanth and Family off to #Anirudh’s Wedding..⭐ Maapla Veedu..🤝 https://t.co/n65Gv4Q0ti
— Laxmi Kanth (@iammoviebuff007) November 9, 2026
ವಿವಾಹ ಸಮಾರಂಭಕ್ಕೆ ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಸೇರಿದಂತೆ ಚಿತ್ರರಂಗ, ರಾಜಕೀಯ ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ.
ಅನಿರುದ್ಧ್ ಅವರ ಕುಟುಂಬದ ಆಪ್ತ ಸಂಬಂಧಿಯಾಗಿರುವ ರಜನಿಕಾಂತ್ ಅವರು ಮದುವೆಯಲ್ಲಿ ಭಾಗವಹಿಸಲು ಗ್ರೀಸ್ಗೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ತಮಿಳುನಾಡಿನ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ (MK Stalin), ಪುತ್ರ ಹಾಗೂ ಮಾಜಿ ಡಿಸಿಎಂ ಉದಯನಿಧಿ ಸ್ಟಾಲಿನ್ ಅವರೊಂದಿಗೆ ದುಬೈಗೆ ತೆರಳಿದ್ದಾರೆ. ಅಲ್ಲಿಂದ ಗ್ರೀಸ್ಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.
#Thalaivar in route to 🎶 ☀️ wedding ! https://t.co/qdefZBB5M4
— Rajini✰Followers (@RajiniFollowers) November 9, 2026
ಗಣ್ಯರ ದಂಡು
ಚೆನ್ನೈ ವಿಮಾನ ನಿಲ್ದಾಣದಿಂದ ರಜನಿಕಾಂತ್ ಪ್ರಯಾಣ ಬೆಳೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಮಾನದೊಳಗೆ ಸಿಬ್ಬಂದಿಯೊಂದಿಗೆ ರಜನಿಕಾಂತ್ ಫೋಟೋಗೆ ಪೋಸ್ ನೀಡಿರುವ ಚಿತ್ರವೂ ಗಮನ ಸೆಳೆದಿದೆ. ಮೂಲಗಳ ಪ್ರಕಾರ, ಎಂ.ಕೆ. ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ಅವರು ಸೋಮವಾರ ಮುಂಜಾನೆ 3.50ಕ್ಕೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಏರಿದ್ದಾರೆ. ದುಬೈ ಮಾರ್ಗವಾಗಿ ಗ್ರೀಸ್ಗೆ ತೆರಳಲಿದ್ದಾರೆ ಎನ್ನಲಾಗಿದೆ.
🚨 DMK Leader MK Stalin and his family flies to Greece for gracing Anirudh – Kavya marriage ceremony. https://t.co/SqdedoC8kw
— Vaagai News (@vaagaimedia) November 9, 2026
ಆಪ್ತ ಮೂಲಗಳು ಹೇಳುತ್ತಿರುವಂತೆ ವಿವಾಹ ಸಮಾರಂಭ ನವೆಂಬರ್ 11ರಂದು ನಡೆಯುವ ಸಾಧ್ಯತೆಯಿದೆ. ಚಿತ್ರರಂಗದ ಹಲವು ಗಣ್ಯರು, ಉದ್ಯಮಿಗಳು ಹಾಗೂ ರಾಜಕೀಯ ನಾಯಕರು ಈ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ, ಮದುವೆಯ ದಿನಾಂಕ ಮತ್ತು ಕಾರ್ಯಕ್ರಮದ ಕುರಿತು ಅಧಿಕೃತವಾಗಿ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ.
