– ದೀಪಾವಳಿಗೆ ತುಪ್ಪದ ಯಮದೀಪ ಹಚ್ಚಬೇಕೇ?
ಬೆಂಗಳೂರು: ಸರ್ಕಾರ ಒಂದು ಕಡೆ ಉಚಿತ ಯೋಜನೆಗಳನ್ನು (Guarantee Scheme) ಘೋಷಿಸುತ್ತಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರು ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಹೈಕೋರ್ಟ್ (Highcourt) ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿಯೊಂದರ ವಿಚಾರಣೆ ವೇಳೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕುರಿತು ನ್ಯಾಯಮೂರ್ತಿ ಶ್ರೀಶಾನಂದ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿದೆ. ಯೋಜನೆ ಉಚಿತ, ಆದರೆ ಬೆಲೆ ಏರಿಕೆ ಖಚಿತ ಎಂದು ವ್ಯಂಗ್ಯವಾಡಿದ ನ್ಯಾಯಪೀಠ, ಸರ್ಕಾರದ ಎಲ್ಲ ಯೋಜನೆಗಳೂ ಹೀಗೆಯೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಲಕ್ನೋ-ಆಗ್ರಾ ಎಕ್ಸ್ಪ್ರೆಸ್ವೇನಲ್ಲಿ ಕಂದಕಕ್ಕೆ ಉರುಳಿದ ಬಸ್; ಮೂವರು ದುರ್ಮರಣ, 45 ಪ್ರಯಾಣಿಕರಿಗೆ ಗಾಯ
ದೀಪಾವಳಿಗೆ ತುಪ್ಪದ ಯಮದೀಪ ಹಚ್ಚಬೇಕು:
ಕಳೆದ ತಿಂಗಳು ಒಂದು ಕೆ.ಜಿ. ತುಪ್ಪ ಖರೀದಿಸಲು ಹೋದಾಗ 650 ರೂ. ಇತ್ತು. ಆದರೆ ಈಗ ಅದರ ಬೆಲೆ 850 ರೂ.ಗೆ ಏರಿಕೆಯಾಗಿದೆ. ದೀಪಾವಳಿಗೆ ತುಪ್ಪದ ಯಮದೀಪ ಹಚ್ಚಬೇಕು. ಇಷ್ಟೊಂದು ಬೆಲೆ ಹೆಚ್ಚಾದರೆ ಜನರು ಯಮದೀಪ ಹಚ್ಚುವುದಾದರೂ ಹೇಗೆ? ಯಮದೀಪ ಹಚ್ಚುವ ಬದಲು ನನ್ನನ್ನೇ ಕರೆದುಕೊಂಡು ಹೋಗು ಎಂದು ಯಮನಿಗೆ ಹೇಳಬೇಕಷ್ಟೇ. ಅಗತ್ಯ ವಸ್ತುಗಳ ಬೆಲೆ ಹೀಗೆಯೇ ಹೆಚ್ಚುತ್ತಾ ಹೋದರೆ ಮನುಷ್ಯ ಎಲ್ಲಿಗೆ ಹೋಗಬೇಕು? ಸಾಮಾನ್ಯ ಜನರು ಜೀವನ ನಡೆಸುವುದಾದರೂ ಹೇಗೆ ಎಂದು ನ್ಯಾಯಪೀಠ ಪ್ರಶ್ನಿಸಿದೆ. ಇದನ್ನೂ ಓದಿ: ಎಥೆನಾಲ್ ಪ್ರಮಾಣ ಎಷ್ಟಿದೆ ಅನ್ನೋದಕ್ಕೆ ತೈಲ ಕಂಪನಿಗಳ ಬಳಿಯೂ ಉತ್ತರವಿಲ್ಲ; ನಮ್ಮ ವರದಿಗೆ ನಾವು ಬದ್ಧ: ರಿಜ್ವಾನ್ ಅರ್ಷದ್
ಪ್ರತಿ ಕೆ.ಜಿ. ಅಕ್ಕಿಗೆ 103 ರೂ. ಬೆಲೆಯಾಗಿದೆ ಎಂಬ ವಿಚಾರವೂ ನ್ಯಾಯಪೀಠದ ಗಮನಕ್ಕೆ ಬಂದಿದೆ. ಹಾಲಿನ ಬೆಲೆ ಹಾಗೂ ಬಸ್ ಟಿಕೆಟ್ ದರ (Bus Ticket Price Hike) ಕೂಡ ಹೆಚ್ಚಳವಾಗಿದೆ. ಒಂದು ಕಡೆ ಸರ್ಕಾರ ಉಚಿತ ಯೋಜನೆಗಳನ್ನು ನೀಡುತ್ತಿದ್ದರೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ದಿನಸಿ ಖರೀದಿಗೆ ಹೋದರೂ ಬಸ್ ಟಿಕೆಟ್ ದರ ಹೆಚ್ಚಳದ ಹೊರೆ ಜನರ ಮೇಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನೂ ಓದಿ: ದೀಪಾವಳಿ ಸಂಭ್ರಮದಲ್ಲಿ ಅವಘಡ – ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಪ್ರಕರಣ
ಸರ್ಕಾರ ಟನ್ ಕಬ್ಬಿಗೆ 3,600 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ ದೀಪಾವಳಿ ಮುಗಿದ ಬಳಿಕ ಒಂದು ಕೆ.ಜಿ. ಸಕ್ಕರೆ ಬೆಲೆ 90 ರೂ.ಗೆ ಏರಿಕೆಯಾಗಲಿದೆ ಎಂಬ ಆತಂಕವನ್ನೂ ಕೋರ್ಟ್ ಹೊರಹಾಕಿದೆ. ಇದನ್ನೂ ಓದಿ: 169 ರೂ.ಗೆ ಸಿಗುತ್ತೆ ಪ್ಯೂರ್ ಪೆಟ್ರೋಲ್ – ದಿನಕ್ಕೆ 400 ಲೀ. ಎಥೆನಾಲ್ ಮಿಶ್ರಣ ಇಲ್ಲದ ಪೆಟ್ರೋಲ್ ಸೇಲ್
ಹಳೆಯ ದಾಸ್ತಾನಿನ ವಸ್ತುಗಳಿಗೂ ಹೊಸ ಬೆಲೆ ವಿಧಿಸಲಾಗುತ್ತಿದೆ ಎಂಬ ವಿಚಾರವನ್ನು ನ್ಯಾಯಪೀಠ ಪ್ರಸ್ತಾಪಿಸಿದೆ. ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ದಾಸ್ತಾನು ಮಾಡಲಾಗಿದ್ದ ಅಕ್ಕಿ ಮತ್ತು ಗೋಧಿಯಲ್ಲಿ 320 ಕ್ವಿಂಟಲ್ ಅಕ್ಕಿ ಹಾಗೂ 85 ಕ್ವಿಂಟಲ್ ಗೋಧಿ ಕೊರತೆ ಕಂಡುಬಂದಿರುವ ಬಗ್ಗೆಯೂ ವಿಚಾರಣೆ ವೇಳೆ ಉಲ್ಲೇಖವಾಗಿದೆ. ಇದನ್ನೂ ಓದಿ: ದೀಪಾವಳಿಯಂದು ಪ್ರತ್ಯೇಕ ಅಗ್ನಿ ಅವಘಡ – 2 ತಿಂಗಳ ಮಗು ಸೇರಿ 12 ಮಂದಿ ಸಾವು
ಮೈಸೂರು ಉಗ್ರಾಣದ ಹಿರಿಯ ವ್ಯವಸ್ಥಾಪಕರು ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ಗುಡ್ನ್ಯೂಸ್ – ಇಂದಿನಿಂದ ಕ್ಯಾನ್ಸರ್ ಔಷಧಿಗಳ ದರ ಭಾರೀ ಇಳಿಕೆ!
