ಭೋಪಾಲ್: ಮಧ್ಯಪ್ರದೇಶದಲ್ಲಿ ದೀಪಾವಳಿಯಲ್ಲೇ Fire Accident) ದೊಡ್ಡ ದುರಂತ ಸಂಭವಿಸಿದೆ. ಕಟ್ನಿ ಮತ್ತು ಸಿಯೋನಿ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಗ್ನಿ ಅವಘಡಗಳಲ್ಲಿ (Madhya Pradesh) ಒಂದೇ ದಿನ 12 ಜನರು ಸಾವನ್ನಪ್ಪಿದ್ದಾರೆ.
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಮಣ್ಣಿನ ಪಾತ್ರೆಗಳ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಎರಡು ತಿಂಗಳ ಮಗು ಸೇರಿ ಕುಟುಂಬದ ಆರು ಸದಸ್ಯರು ಸಜೀವ ದಹನವಾಗಿದ್ದಾರೆ. ಸೋಮವಾರ ಮಧ್ಯರಾತ್ರಿ ಬರ್ಹಿ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳುವಲ್ಲಿ ಇನ್ನಿಬ್ಬರು ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ಮೈಸೂರು | ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ vs ಬಿಜೆಪಿ – ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಆರೋಪ
ಮಧ್ಯಪ್ರದೇಶದ ಮತ್ತೊಂದು ಸಿಯೋನಿ ಜಿಲ್ಲೆಯ ಚಿನ್ನದಂಗಡಿ ಮಾಲೀಕರ ಮೂರು ಅಂತಸ್ತಿನ ಮನೆಯಲ್ಲಿ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಘಟನೆ ನಡೆದಾಗ ಮನೆಯೊಳಗೆ ಹತ್ತು ಜನರಿದ್ದರು. ಅವರಲ್ಲಿ ಆರು ಜನರು ಪ್ರಾಣ ಕಳೆದುಕೊಂಡರು.ಇದನ್ನೂ ಓದಿ: ಚೀನಾದ ಸ್ಪೈ ಮಹಿಳೆ ಜೊತೆ ವಿವಾಹೇತರ ಸಂಬಂಧ – ಎನ್ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ವಿರುದ್ಧ ತನಿಖೆಗೆ ಆದೇಶ
