– ಗ್ರಾಹಕರ ಸಮ್ಮುಖದಲ್ಲೇ ಪೆಟ್ರೋಲ್ ಟೆಸ್ಟಿಂಗ್
– ಮೈಲೇಜ್ ಬರ್ತಿದೆ ಅಂತಾ ಶಿಫ್ಟ್ ಪ್ಯೂರ್ ಪೆಟ್ರೋಲ್ಗೆ ಶಿಫ್ಟ್
ಬೆಂಗಳೂರು: ಎಥೆನಾಲ್ (Ethanol) ಸಂಘರ್ಷದ ಮಧ್ಯೆ ಈಗ ಎಥೆನಾಲ್ಮಿಕ್ಸ್ ಮಾಡದ, ಸ್ಪೀಡ್-100 ಪೆಟ್ರೋಲ್ಗಳು (Speed Petrol) ಆಯ್ದ ಬಂಕ್ ಗಳಲ್ಲಿ ಈಗ ಲಭ್ಯವಾಗ್ತುದೆ.
ಆಡಿ, ಲ್ಯಾಂಬೋರ್ಗಿನಿ ಸೇರಿದಂತೆ ಹೈ ಎಂಡ್ ಕಾರುಗಳಿಗೆ ಬಹುತೇಕ ಇದನ್ನೇ ಬಳಕೆ ಮಾಡಲಾಗುತ್ತಿದೆ. ಪ್ಯೂರ್ ಪೆಟ್ರೋಲ್ ಲೀಟರ್ ಗೆ ಬರೋಬ್ಬರಿ 169 ರೂಪಾಯಿ ಇದೆ. ಕಳೆದ 2-3 ತಿಂಗಳಿಂದ ಈ ಪೆಟ್ರೋಲ್ ಲಭ್ಯವಿದೆ.
ಈ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕ ರಾಮ್ ಗೋಪಾಲ್ ಮಾತನಾಡಿದ್ದು, ದಿನಕ್ಕೆ 400 ಲೀಟರ್ ಎಥನಾಲ್ ಮಿಶ್ರಣ ಇಲ್ಲದ ಪೆಟ್ರೋಲ್ ಸೇಲ್ ಆಗ್ತಿದೆ. ಜನ ನಮ್ಮ ಗಾಡಿ ಹಾಳಗಾಬಾರದು 20% ಎಥನಾಲ್ ಬೇಡ ಅನ್ನೋರು ಇದನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಮೈಲೇಜ್ ಬರುತ್ತಿದೆ ಅಂತಾ ಇದಕ್ಕೆ ಶಿಫ್ಟ್ ಆಗುತ್ತಿದ್ದಾರೆ. ಹೈಎಂಡ್ ಕಾರುಗಳು ಇದನ್ನು ಬಳಕೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ರಿಯಲ್ ಟೈಂ ಎಥೆನಾಲ್ ಟೆಸ್ಟಿಂಗ್
ಎಥೆನಾಲ್ ಸಮರದ ಮಧ್ಯೆ ಈಗ ಬಹುತೇಕ ಬಂಕ್ ಗಳಲ್ಲಿ ಗ್ರಾಹಕರ ಪ್ರಶ್ನೆ ಗೊಂದಲಕ್ಕೆ ಉತ್ತರವಾಗಿ ರಿಯಲ್ ಟೈಂ ಎಥನಾಲ್ ಟೆಸ್ಟಿಂಗ್ ಡೆನ್ಸಿಟಿ ಟೆಸ್ಟಿಂಗ್ ಗಳನ್ನ ಮಾಡಲಾಗುತ್ತಿದೆ. ಈ ಮೂಲಕ ಪೆಟ್ರೋಲ್ ಕಲಬೆರಕೆಯ ಶುದ್ಧತೆಯ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ಬಂಕ್ ಗಳಲ್ಲಿ ಅನ್ಲೋಡ್ ಗೂ ಮುನ್ನ ಡೆನ್ಸಿಟಿ ಟೆಸ್ಟಿಂಗ್ ಪ್ರಕ್ರಿಯೆ ನಡೆಯುತ್ತೆ. ಎಥೆನಾಲ್ ಮಿಕ್ಸಿಂಗ್ ಸೇರಿದಂತೆ ಪೆಟ್ರೋಲ್ ಗಳಲ್ಲಿ ಕಲಬೆರಕೆ ಪತ್ತೆ, ಶುದ್ಧತೆಯ ಈ ಟೆಸ್ಟಿಂಗ್ ಪ್ರಕ್ರಿಯೆ ನಡೆಸಲಾಗುತ್ತೆ.

