ದಾವಣಗೆರೆ: ಅಂಗಡಿಯೊಂದರಲ್ಲಿ ದೀಪ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ (Fire Accident) ತಗುಲಿ ಮಾಲೀಕ ಸಜೀವ ದಹನಗೊಂಡ ಘಟನೆ ಹೊನ್ನಾಳಿಯ (Honnali) ಕ್ಯಾಸಿನಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಂಕ್ರಯ್ಯ (55) ಮೃತಪಟ್ಟ ದುರ್ದೈವಿ. ಅವರು ಕಿರಾಣಿ ಅಂಗಡಿಯಲ್ಲಿ ದಿನಸಿ ಸಾಮಗ್ರಿಗಳ ಜೊತೆಗೆ ಅಕ್ರಮವಾಗಿ ಪೆಟ್ರೋಲ್ ಸಹ ಮಾರಾಟ ಮಾಡುತ್ತಿದ್ದರು. ಇದೇ ಅಗ್ನಿ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಅಡಿಕೆ ತೋಟದಲ್ಲಿ ಇಬ್ಬರ ಶವ ಪತ್ತೆ – ಪೊಲೀಸರಿಂದ ತನಿಖೆ ಚುರುಕು
ಎಂದಿನಂತೆ ಬೆಳಿಗ್ಗೆ ಅಂಗಡಿ ಬಾಗಿಲು ತೆರೆದು ಪೂಜೆ ಸಲ್ಲಿಸುವ ವೇಳೆ, ದೀಪ ಹಚ್ಚುತ್ತಿದ್ದಂತೆ ಬೆಂಕಿಯ ಕಿಡಿ ಪಕ್ಕದಲ್ಲೇ ಇರಿಸಿದ್ದ ಪೆಟ್ರೋಲ್ಗೆ ತಗುಲಿದೆ. ಪೆಟ್ರೋಲ್ ಶೇಖರಣೆಯಾಗಿದ್ದರಿಂದ ಬೆಂಕಿ ಕ್ಷಣಮಾತ್ರದಲ್ಲಿ ಅಂಗಡಿಗೆ ವ್ಯಾಪಿಸಿದೆ. ಇದರಿಂದ ಹೊರಬರಲಾಗದೆ ಅವರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಹೊನ್ನಾಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮದುವೆಯಾಗಿ 9 ತಿಂಗಳಲ್ಲೇ ಗೃಹಿಣಿ ಸಾವು – ಗಂಡ, ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ
