ಕಲಬುರಗಿ: ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ (Lashkar-e-Taiba) ಜೊತೆ ಸಂಪರ್ಕ ಹೊಂದಿದ್ದ ಉಗ್ರ ಮಮ್ತಾಜ್ ಮಲೀಕ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಚೌಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಮೊಬೈಲ್ ಪರಿಶೀಲನೆ ನಡೆಸಿರುವ ಪೊಲೀಸರು ಹಲವು ಫೋಟೋ ಮತ್ತು ವಿಡಿಯೋಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಲೇಸರ್ ಮೀಟರ್, ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಆಸ್ತಿ ಸರ್ವೆಗೆ ಬೆಂಗಳೂರಿನ ದಕ್ಷಿಣ ಪಾಲಿಕೆ ಸಜ್ಜು
ಪಶ್ಚಿಮ ಬಂಗಾಳ ಮೂಲದ ಮಮ್ತಾಜ್ ಮಲೀಕ್ ಕಲಬುರಗಿಯ ಸರಾಫ್ ಅಂಗಡಿಯಲ್ಲಿ ಹೆಸರಿಗೆ ಕೆಲಸಕ್ಕೆ ಅಂತ ಸೇರಿ ಅಲ್ಲಿಂದಲೇ ಪಾಕ್ನ ಲಷ್ಕರ್-ಎ-ತೊಯ್ಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ. ಆತನ ಮೊಬೈಲ್ ಫೋನ್ ಪರಿಶೀಲನೆ ನಡೆಸಿದ್ದಾಗ ಆತ ಇಮಾಮ್ ಮೇಂದಿ ಹಾಗೂ ಉರ್ದು ಭಾಷೆಯ ವಾಟ್ಸಪ್ ಗ್ರೂಪ್ಗಳ ಸದಸ್ಯನಾಗಿದ್ದ. ಜೊತೆಗೆ ಪಾಕಿಸ್ತಾನದ ಜೈನುಲ್ ಅಬ್ದಿನ್ ಎಂಬ ವ್ಯಕ್ತಿ ತನ್ನನ್ನು ವಾಟ್ಸಪ್ ಗ್ರೂಪ್ಗೆ ಸೇರಿಸಿದ್ದಾಗಿ ಮಮ್ತಾಜ್ ಬಾಯಿ ಬಿಟ್ಟಿದ್ದು, ಈ ವ್ಯಕ್ತಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಇದರ ಜೊತೆಗೆ, ಪಾಕಿಸ್ತಾನ ಪರವಾದ ಘೋಷಣೆಗಳನ್ನು ಹೊಂದಿರುವ ಹಾಗೂ ಕಾಶ್ಮೀರಕ್ಕೆ ಸಂಬಂಧಿಸಿದ ಕೆಲವು ಇನ್ಸ್ಟಾಗ್ರಾಂ ಖಾತೆಗಳನ್ನು ಮಮ್ತಾಜ್ ಮಲೀಕ್ ಫಾಲೋ ಮಾಡುತ್ತಿದ್ದ ಎನ್ನಲಾಗಿದೆ. ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ರೀಲ್ಸ್ಗಳಿಗೆ ಲೈಕ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತು ಬಿಎನ್ಎಸ್ 113(3) ಮತ್ತು 197(1) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಶೂಟೌಟ್ – ಆರೋಪಿಗಳ ಫಸ್ಟ್ ಫೋಟೋ ರಿಲೀಸ್
