ಬೆಂಗಳೂರು: ಆಯುಧ ಪೂಜೆ (Ayudha Puja) ಹಿನ್ನಲೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. ಇದರ ನಡುವೆಯೂ ಕೆ.ಆರ್ ಮಾರುಕಟ್ಟೆಯ (KR Market) ಜನ ಖರೀದಿಗೆ ಮುಗಿಬಿದ್ದಿದ್ದಾರೆ. ಇದರಿಂದ ಮಾರ್ಕೇಟ್ ರೋಡ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಹೂವು ಹಣ್ಣುಗಳ ಬೆಲೆ (Flowers Price) ದುಪ್ಪಾಟಾಗಿದ್ದು, ಮಲ್ಲಿಗೆ ಹಾಗೂ ಕನಕಾಂಬರ ಹೂಗಳ ಬೆಲೆ ಕೆಜಿಗೆ ಎರಡು ಸಾವಿರದ ಗಡಿ ದಾಟಿದೆ. ಇದನ್ನೂ ಓದಿ: ಒಂದೇ ನವರಾತ್ರಿ, ಹಲವು ಆಚರಣೆಗಳು – ಭಾರತದ ಯಾವ ರಾಜ್ಯದಲ್ಲಿ ಹೇಗೆ ಹಬ್ಬ ಆಚರಿಸುತ್ತಾರೆ?
ಹೂವುಗಳ ದರ – ಕೆಜಿಗೆ
* ದುಂಡುಮಲ್ಲಿಗೆ: 1400 ರೂ. – 1600 ರೂ.
* ಬಟನ್ ರೋಸ್ : 500 ರೂ. ರಿಂದ 600 ರೂ.
* ಸೇವಂತಿಗೆ ಹೂವು: 250 ರೂ. – 300 ರೂ.
* ಕನಕಾಂಬರ: 1500 ರೂ. – 1800 ರೂ.
* ಚೆಂಡುಹೂವು: 60 ರೂ. – 70 ರೂ.
ಹಣ್ಣುಗಳು, ಪೂಜಾ ಸಾಮಗ್ರಿಗಳ ದರ – ಕೆಜಿಗೆ
* ಸೇಬು : 180 ರೂ. – 250 ರೂ.
* ಕಿತ್ತಳೆ / ಮೊಸಂಬಿ: 100 ರೂ. – 150 ರೂ.
* ದಾಳಿಂಬೆ: 150 ರೂ. -180 ರೂ.
* ಏಲಕ್ಕಿ ಬಾಳೆಹಣ್ಣು 100 ರೂ. – 120 ರೂ.
* ಬೂದುಗುಂಬಳಕಾಯಿ 25 ರೂ. – 30 ರೂ.
* ಬಾಳೆ ಕಂಬ ದೊಡ್ಡದು 150 ರೂ. ರಿಂದ 200 ರೂ.
* ನಿಂಬೆ ಹಣ್ಣು 1 ಕ್ಕೆ 8 ರಿಂದ 10 ರೂ.
ಕೆ.ಆರ್ ಮಾರ್ಕೇಟ್ ಬಳಿ ಹೂ, ಹಣ್ಣು ಖರೀದಿಗೆ ಜನ ಮುಗಿಬೀಳುತ್ತಿದ್ದು, ಫ್ಲೈಓವರ್ ಮೇಲೆ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಫ್ಲೈಓವರ್ ಮೇಲೆ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದಿದ್ದರಿಂದ ಟ್ರಾಫಿಕ್ ಹೆಚ್ಚಾಗಿರುತ್ತಿತ್ತು. ಇದರಿಂದಾಗಿ ಈ ಬಾರಿ ಫ್ಲೈಓವರ್ ಮೇಲೆ ವಾಹನ ನಿಲುಗಡೆಗೆ ಪೊಲೀಸರು ಅವಕಾಶ ನೀಡಿಲ್ಲ.
ಜನ ಓಡಾಡಲು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದ್ದ ಹಿನ್ನೆಲೆ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದವರನ್ನು ಟ್ರಾಫಿಕ್ ಪೋಲಿಸರು ಬೇರೆಡೆಗೆ ಕಳುಹಿಸಿದ್ದಾರೆ. ಬ್ಯಾರಿಕೇಡ್ ಅಳವಡಿಸಿ ವ್ಯಾಪಾರಕ್ಕೆ ತಡೆದಿದ್ದಾರೆ. ಮಾರ್ಕೇಟ್ನಿಂದ ಅವೆನ್ಯೂ ರೋಡ್ ವರೆಗೂ ವ್ಯಾಪಾರ ಬಂದ್ ಮಾಡಲಾಗಿದೆ. ಇದನ್ನೂ ಓದಿ: 10 ದಿನಗಳ ಕಾಲ ಮೈಸೂರು ದಸರಾ ಲೈಟಿಂಗ್ ಮುಂದುವರಿಕೆ: ಡಿಕೆಶಿ
